I Love You Appu: ಸರ್ಪ್ರೈಸ್ ಕೊಟ್ಟರು ಶಿವಣ್ಣ!

ನಟ ಶಿವರಾಜ್‌ಕುಮಾರ್‌ ಅವರು ಸಂಕ್ರಾಂತಿ ಹಬ್ಬಕ್ಕೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹಬ್ಬದ ಪ್ರಯುಕ್ತ ಶಿವರಾಜ್‌ಕುಮಾರ್‌ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಒಂದು ಅಪ್ಡೇಟ್‌ ನೀಡಿದ್ದಾರೆ. ಲಾಕ್‌ಡೌನ್‌ ನಡುವೆಯೇ ಜನ ಸಂಕ್ರಾಂತಿ ಆಚರಣೆ ಮಾಡುತ್ತಿದ್ದಾರೆ. ಸಿನಿಮಾ ಸಂಭ್ರಮಕ್ಕೂ ಕೂಡ ಕೊರೊನಾ ಬ್ರೇಕ್ ಹಾಕಿದೆ. ಈ ಎಲ್ಲದರ ಮಧ್ಯೆ ಸಿಹಿ ಸುದ್ದಿ ನೀಡುವ ಮೂಲಕ ಚಿತ್ರ ಶಿವಣ್ಣ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ.

ನಟ ಶಿವರಾಜ್‌ ಕುಮಾರ್‌ ಅವರ ಮುಂದಿನ ಸಿನಿಮಾ 'ಬೈರಾಗಿ'. ಈ ಚಿತ್ರದ ಬಗ್ಗೆ ಅಪ್ಡೇಟ್ ಕೊಟ್ಟು ಸಂಕ್ರಾಂತಿ ಸಂಭ್ರಮ ಹೆಚ್ಚಿಸಿದ್ದಾರೆ ಶಿವಣ್ಣ. ಜೊತೆಗೆ ವಿಡಿಯೋ ಹಂಚಿಕೊಳ್ಳುವುದರ ಮೂಲಕ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸದ್ಯ ಶಿವರಾಜ್‌ಕುಮಾರ್‌ ಅವರ 'ಬೈರಾಗಿ' ಸಿನಿಮಾ ಶೂಟಿಂಗ್ ಮುಗಿದಿದೆ. ಈ ವಿಚಾರವನ್ನೂ ಕೂಡ ಶಿವಣ್ಣ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆಯೂ ಶಿವಣ್ಣ ಈ ವಿಡಿಯೋದಲ್ಲಿ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಶಿವರಾಜ್‌ಕುಮಾರ್‌ 'ಬೈರಾಗಿ' ಪೋಸ್ಟರ್ ರಿಲೀಸ್!

ಶಿವರಾಜ್‌ಕುಮಾರ್‌ 'ಬೈರಾಗಿ' ಪೋಸ್ಟರ್ ರಿಲೀಸ್!

ಸಂಕ್ರಾಂತಿ ಹಬ್ಬದ ಪ್ರಯುಕ್ತ ನಟ ಶಿವರಾಜ್‌ಕುಮಾರ್‌ ಅವರ ಬೈರಾಗಿ ಚಿತ್ರದ ಲುಕ್ ರಿಲೀಸ್‌ ಆಗಿದೆ. ಬೈರಾಗಿ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಸ್ಟೈಲಿಶ್‌ ಆಗಿ, ಮಾಸ್‌ ಲುಕ್‌ನಲ್ಲಿ ಶಿವರಾಜ್‌ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಹ್ಯಾಟ್, ಕನ್ನಡಕ ಹಾಕಿಕೊಂಡು, ಸ್ಟೈಲಿಶ್ ಉಡುಪು ಧರಿಸಿ ಶಿವರಾಜ್‌ ಕುಮಾರ್‌ ಅವರು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ.

ಅಪ್ಪು ನೆನೆದು I Love You ಎಂದ ಶಿವರಾಜ್‌ಕುಮಾರ್!

ಅಪ್ಪು ನೆನೆದು I Love You ಎಂದ ಶಿವರಾಜ್‌ಕುಮಾರ್!

ನಟ ಶಿವರಾಜ್ ಕುಮಾರ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ "ಪ್ರತಿಯೊಬ್ಬರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಬೈರಾಗಿ ಸಿನಿಮಾದ ಶೂಟಿಂಗ್ ಮುಕ್ತಾಯ ಆಯ್ತು. ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ. ಈ ವರ್ಷದ ಮೊದಲ ಬೈರಾಗಿ ಪೋಸ್ಟರ್​ ಅನ್ನು ನನ್ನ ಪೇಜ್​ನಿಂದ ರಿಲೀಸ್​ ಮಾಡುತ್ತಿದ್ದೇನೆ. ನೋಡಿ ಆನಂದಿಸಿ. ಇನ್ನು ಕೆಲವೇ ಗಂಟೆಗಳಲ್ಲಿ ಇನ್ನೊಂದು ಸರ್ಪ್ರೈಸ್​ ಕಾದಿದೆ. ಅಪ್ಪು ಐ ಲವ್​ ಯೂ" ಎಂದು​ ಹೇಳಿದ್ದಾರೆ.

ಚಿತ್ರ ತಂಡಕ್ಕೆ ತೊಂದರೆ ಮಾಡದ ಶಿವಣ್ಣ!

ಚಿತ್ರ ತಂಡಕ್ಕೆ ತೊಂದರೆ ಮಾಡದ ಶಿವಣ್ಣ!

ಅಪ್ಪು ಅಗಲಿಕೆಯ ನೋವು ಕರುನಾಡಿನ ಜನರನ್ನು ಕಾಡುತ್ತಿದೆ. ಹಾಗಿರೋವಾಗ ಸ್ವಂತ ತಮ್ಮನ ಅಗಲಿಕೆಯ ನೋವು ಮನೆಯವರನ್ನು ಹೇಗೆ ಕಾಡಬಹುದು ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅಂತಹ ನೋವನ್ನು ನುಂಗಿ ಶಿವಣ್ಣ ಸಿನಿಮಾ ಶೂಟಿಂಗ್‌ ಮುಗಿಸಿದ್ದಾರೆ. ತಮ್ಮ ನೋವು ಬೇರೆಯವರಿಗೆ ಮುಳುವಾಗ ಬಾರದು ಎಂದು, ಶಿವಣ್ಣ ಮನೆಯಲ್ಲಿ ಕೂರದೇ, ಚಿತ್ರ ತಂಡಕ್ಕೆ ಮತ್ತು ಇತರೆ ಕಲಾವಿದರೆ ತೊಂದರೆ ನೀಡದೆ. ಚಿತ್ರೀಕರಣದಲ್ಲಿ ಭಾಗಿ ಆಗಿ ಬೈರಾಗಿ ಚಿತ್ರದ ಶೂಟಿಂಗ್‌ ಮಾಡಿ ಮುಗಿಸಿದ್ದಾರೆ.

ಸದ್ಯದಲ್ಲಿಯೇ ಬರಲಿದೆ ಬೈರಾಗಿ ಟೀಸರ್!

ಸದ್ಯದಲ್ಲಿಯೇ ಬರಲಿದೆ ಬೈರಾಗಿ ಟೀಸರ್!

'ಬೈರಾಗಿ' ಚಿತ್ರದ ಪೋಸ್ಟರ್ ಈಗ ರಿಲೀಸ್ ಆಗಿದ್ದು, ಸದ್ಯದಲ್ಲಿಯೇ ಟೀಸರ್ ರಿಲೀಸ್‌ ಆಗಲಿದೆ. ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಡಾಲಿ ಧನಂಜಯ್​ ಅಭಿನಯಿಸಿದ್ದಾರೆ. ನಿರ್ದೇಶಕ ವಿಜಯ್​ ಮಿಲ್ಟನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಯಶ್​ ಶಿವಕುಮಾರ್​, ಅಂಜಲಿ, ಪೃಥ್ವಿ ಅಂಬರ್​ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಸಾರ್ಥಕ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

More from Filmibeat

English summary
Actor Shiva Rajkumar Says I Love You To Puneeth Rajkumar In Sankrati Video,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X