ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ಭಜರಂಗಿ!

ನಟಿ ಶಿವರಾಜ್‌ಕುಮಾರ್‌ ಅಭಿನಯದ ಭಜರಂಗಿ2 ಚಿತ್ರ ಈಗ ಮತ್ತಷ್ಟು ನಿಮಗೆ ಹತ್ತಿರ ಆಗಲಿದೆ. ನಿಮ್ಮನ್ನು ಹುಡುಕಿಕೊಂಡು ನಿಮ್ಮ ಬಳಿಯೇ ಬರಲಿದ್ದಾನೆ ಭಜರಂಗಿ. ಹೌದು ಭಜರಂಗಿ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಮಿಸ್‌ ಮಾಡಿಕೊಂಡವರು ಇನ್ನು ಹೆಚ್ಚು ದಿನ ಕಾಯಬೇಕಾಗಿಲ್ಲ. ಯಾವಾಗ ಬೇಕಾದರು ಭಜರಂಗಿ ಸಿನಿಮಾವನ್ನು ನೀವು ನೋಡಬಹುದಾಗಿದೆ.

ಭಜರಂಗಿ2 ಈಗ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಭಜರಂಗಿ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದಿದ್ದ ಚಿತ್ರ. ಈ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್‌ ಭಜರಂಗಿ ಆಗಿ ದ್ವಿಪಾತ್ರದಲ್ಲಿ ಅಭಿನಯಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅವರ ಅಬ್ಬರ ನೋಡುವುದೇ ಕಣ್ಣಿಗೆ ಹಬ್ಬ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್‌ ಭಜರಂಗಿ-2 ಸಿನಿಮಾ ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿತ್ತು. ಶಿವಣ್ಣನ ನಟನೆ, ಹರ್ಷ ಡೈರೆಕ್ಷನ್‌ಗೆ ಪ್ರೇಕ್ಷಕರು ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದರು. ಗಲ್ಲಾ ಪೆಟ್ಟಿಗೆಯಲ್ಲೂ ಚಿತ್ರ ಗೆದ್ದಿದೆ. ಭಜರಂಗಿ-2 ಈಗ ಒಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Actor Shiva Rajkumar Starrer Bhajarangi2 To Be Release In Zee5 OTT

ಟೀಸರ್, ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಭಜರಂಗಿ2 ಅಕ್ಟೋಬರ್ 29ರಂದು ತೆರೆಗಪ್ಪಳಿಸಿತ್ತು. ಹೊಸ ಕಥೆ, ಒಳ್ಳೆ ಸಂದೇಶ ಹೊತ್ತು ತಂದಿದ್ದ ಭಜರಂಗಿ ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಭಜರಂಗಿ2 ಸಿನಿಮಾವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಭಜರಂಗಿ2 ಇದೇ ತಿಂಗಳ 23ರಂದು ಜೀ5 ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾಗಲಿದೆ.

ಭಜರಂಗಿ ರಿಲೀಸ್‌ ದಿನವೇ ಅಪ್ಪು ದಿವಂಗತ!

ಭಜರಂಗಿ2 ಚಿತ್ರದ ರಿಲೀಸ್ ದಿನವೇ ಕಹಿ ಘಟನೆ ನಡೆದಿದೆ. ಅಕ್ಟೋಬರ್ 29 ಅಂದು ಬೆಳ್ಳಂ ಬೆಳಗ್ಗೆ ಭಜರಂಗಿ ತೆರೆಗೆ ಅಪ್ಪಳಿಸಿತ್ತು. ಈ ಸಂಭ್ರಮ ಹೆಚ್ಚು ಕಾಲ ಉಳಿಯಲು ಆ ವಿಧಿ ಬಿಡಲಿಲ್ಲ. ಅಪ್ಪು ಅಂದೇ ಕೊನೆಯುಸಿರೆಳೆದರು. ಇದು ಪ್ರತೀ ಕನ್ನಡಿಗನ ಮನಸ್ಸಿನಲ್ಲೂ ಹಸಿ ಗಾಯವಾಗಿ ಉಳಿದಿದೆ. ಭಜರಂಗಿ ಚಿತ್ರಕ್ಕೂ ಈ ಘಟನೆಗೂ ಸಂಬಂಧ ಇಲ್ಲ. ಆದರೆ ಆ ದಿನಾಂಕದ ಬಗ್ಗೆ ಹೇಳುವಾಗ ಅಪ್ಪು ಅವರನ್ನು ನೆನೆಯಲೇ ಬೇಕು.

Actor Shiva Rajkumar Starrer Bhajarangi2 To Be Release In Zee5 OTT

ಸದ್ಯ ಭಜರಂಗಿ ಈಗ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಹಾಗಾಗಿ ಇಷ್ಟು ದಿನ ಸಿನಿಮಾ ನೋಡದೇ ಇರುವವರು ಶಿವಣ್ಣನ ಭಜರಂಗಿ ಅವತಾರವನ್ನು ನೋಡಬಹುದು. ಇದೇ ಡಿಸೆಂಬರ್ 23ರಂದು ಜೀ5 ಒಟಿಟಿಯಲ್ಲಿ ಭಜರಂಗಿ ತೆರೆಕಾಣಲಿದೆ.

{document1}

More from Filmibeat

English summary
Actor Shiva Rajkumar Starrer Bhajarangi2 To Be Release In Zee5 Ott, know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X