Shiva Rajkumar: ಹಿಂದಿ ಸಿನಿಮಾಗಳನ್ನು ಶಿವಣ್ಣ ಹೇಗೆ ಎಂಜಾಯ್ ಮಾಡುತ್ತಾರೆ ಗೊತ್ತಾ?
ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಬಹುನಿರೀಕ್ಷಿತ ಸಿನಿಮಾ ಘೋಸ್ಟ್ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಘೋಸ್ಟ್ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದ್ದು, ಮುಂಬೈನಲ್ಲಿಯೂ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ನಡೆಸಲಾಗುತ್ತಿದೆ. ಇದರ ನಡುವೆ ಶಿವರಾಜ್‌ಕುಮಾರ್ ಹಿಂದಿ ಮಾಧ್ಯಮಗಳಿಗೂ ಸಂದರ್ಶನ ನೀಡುತ್ತಿದ್ದಾರೆ.
ಇಂಡಿಯಾ ಟುಡೇ.ಇನ್‌ಗೆ ನೀಡಿರುವ ಸಂದರ್ಶನದಲ್ಲಿ ನಟ ಶಿವರಾಜ್‌ಕುಮಾರ್, ದಕ್ಷಿಣ ಭಾರತದಲ್ಲಿ ಹಿಂದಿ ಚಿತ್ರಗಳಿಗೆ ಸಿಗುತ್ತಿರುವ ಉತ್ತಮ ಸ್ವಾಗತದ ಬಗ್ಗೆ ಮಾತನಾಡಿದ್ದಾರೆ. ಬಾಲಿಬುಡ್ ನಟರಾದ ಶಾರುಖ್ ಖಾನ್, ಅಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಚಿತ್ರಗಳನ್ನು ಜನ ಬಹಳ ಖುಷಿಯಿಂದ ನೋಡುತ್ತಾರೆ ಎಂದು ಹೇಳಿದ್ದಾರೆ.

ಆಕ್ಷನ್ ಥ್ರಿಲ್ಲರ್ 'ಘೋಸ್ಟ್' ಸಿನಿಮಾಗೆ ಎಂಜಿ ಶ್ರೀನಿವಾಸ್ (ಶ್ರೀನಿ) ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಸತ್ಯ ಪ್ರಕಾಶ್ ಮತ್ತು ಅರ್ಚನಾ ಜೋಯಿಸ್ ನಟಿಸಿದ್ದಾರೆ. ಅಕ್ಟೋಬರ್ 19 ಘೋಸ್ಟ್ ಭರ್ಜರಿಯಾಗಿ ಬಿಡುಗಡೆಯಾಗಲಿದೆ.
ಹಿಂದಿ ಚಲನಚಿತ್ರಗಳ ಬಗ್ಗೆ ನಟ ಶಿವರಾಜ್‌ಕುಮಾರ್ ಮನದ ಮಾತು
ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತದ ಚಲನಚಿತ್ರಗಳು ಹಿಂದಿ ಪ್ರದೇಶಗಳಲ್ಲಿ ಅಂದರೆ ಉತ್ತರ ಭಾರತದಲ್ಲಿ ಸಕತ್ ಆಗಿ ಓಡುತ್ತಿವೆ. ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅಗ್ರ ಸ್ಥಾನ ಪಡೆಯುತ್ತಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಪ್ರಸ್ತುತ ದಕ್ಷಿಣ ಭಾರತದ ಚಲನಚಿತ್ರಗಳು ಅತ್ಯಂತ ಭರವಸೆಯ ಸಿನಿಮಾಗಳಾಗಿವೆ.
ಇತ್ತೀಚೆಗೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾಹಿದ್ ಕಪೂರ್ ದಕ್ಷಿಣ ಭಾರತದಲ್ಲಿ ಹಿಂದಿ ಚಲನಚಿತ್ರಗಳು ಯಾಕೆ ಚೆನ್ನಾಗಿ ಓಡುವುದಿಲ್ಲ. ಅವರ ಸಿನಿಮಾಗಳು ಇಲ್ಲಿ ಇಷ್ಟು ದಾಖಲೆ ಮಾಡುತ್ತವೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೂ ಕೂಡ ದಕ್ಷಿಣ ಭಾರತದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಮನ್ನಣೆ ಸಿಕ್ಕಿರುವುದು ಇಲ್ಲಿನ ಸಿನಿಮಾಗಳಿಗಿರುವ ಶಕ್ತಿಯಿಂದಲೆ.

ಇನ್ನು, ಇಂಡಿಯಾ ಟುಡೆ.ಇನ್ ಜೊತೆಗಿನ ಸಂವಾದದ ಸಂದರ್ಭದಲ್ಲಿ, ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ನಟ ಶಿವ ರಾಜ್‌ಕುಮಾರ್ ಅವರು ದಕ್ಷಿಣದಲ್ಲಿ ಹಿಂದಿ ಚಲನಚಿತ್ರಗಳನ್ನು ಹೇಗೆ ಆನಂದಿಸುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಹಿಂದಿ ಸಿನಿಮಾಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ''ನಾವು ಎಲ್ಲಾ ಹಿಂದಿ ಚಿತ್ರಗಳನ್ನು ಮೊದಲ ದಿನವೇ ನೋಡುತ್ತೇವೆ. ಸಲ್ಮಾನ್ ಖಾನ್‌ನಿಂದ ಹಿಡಿದು ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅವರಂತಹ ನಟರ ಎಲ್ಲಾ ಚಿತ್ರಗಳನ್ನು ಮೊದಲ ದಿನವೇ ನೋಡುತ್ತೇವೆ" ಎಂದಿದ್ದಾರೆ.
ಮುಂದುವರಿದು, "ನಾವು ಈ ಹಿಂದಿ ಚಲನಚಿತ್ರಗಳನ್ನು ಹೋಮ್ ಥಿಯೇಟರ್‌ನಲ್ಲಿ ನೋಡುವುದಿಲ್ಲ. ನಾವು ಗೋಲ್ಡ್ ಕ್ಲಾಸ್‌ನಲ್ಲಿ ಕುಳಿತು ಎಂಜಾಯ್ ಮಾಡುತ್ತೆವೆ, ಕೈಯಲ್ಲಿ ಪಾಪ್‌ಕಾರ್ನ್ ಹಿಡಿದು, ಮಕ್ಕಳಂತೆ ಖುಷಿಯಿಂದ ಸಿನಿಮಾ ಆನಂದಿಸುತ್ತೇವೆ. ಸಿನಿಮಾದ ಯಾವುದಾದರೂ ಸೀನ್ ಇಷ್ಟವಾದರೆ ಸುಮ್ಮನೆ ಎದ್ದು ಚಪ್ಪಾಳೆ ತಟ್ಟುತ್ತೇವೆ, ಶಿಳ್ಳೆ ಹೊಡೆಯುತ್ತೇವೆ. ನಾವು ಹಿಂದಿ ಚಲನಚಿತ್ರಗಳನ್ನು ನೋಡುವುದನ್ನು ಸಕತ್ ಎಂಜಾಯ್ ಮಾಡುತ್ತೇವೆ" ಎಂದು ಶಿವಣ್ಣ ಹೇಳಿದ್ದಾರೆ.
ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ಬಗ್ಗೆ
ಆಕ್ಷನ್ ಥ್ರಿಲ್ಲರ್ ಘೋಸ್ಟ್ ಅಕ್ಟೋಬರ್ 19 ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಶಿವರಾಜ್‌ಕುಮಾರ್ ಮತ್ತು ನಿರ್ದೇಶಕ ಶ್ರೀನಿ ಇದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿರುವ ಕಾರಣ, ಸಿನಿಮಾ ಕೂಡ ಗಲ್ಲ ಪಟ್ಟಿಗೆಯಲ್ಲಿ ಸದ್ದು ಮಾಡುವ ಸಂಭವವಿದೆ ಎಂದು ವಿಶ್ವಾಸದಲ್ಲಿದೆ ಚಿತ್ರತಂಡ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.


Click it and Unblock the Notifications











