For Quick Alerts
  ALLOW NOTIFICATIONS  
  For Daily Alerts

  ಸ್ಪೆಷಲ್ ವ್ಯಕ್ತಿಯಿಂದ 'ಬದ್ಮಾಶ್' ಸ್ಪೆಷಲ್ ಟ್ರೈಲರ್ ಬಿಡುಗಡೆ

  By Suneetha
  |

  'ಸ್ಪೆಷಲ್ ಹೀರೋ' ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಒಂದಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ 'ಬದ್ಮಾಶ್' ಚಿತ್ರದ, ಸ್ಪೆಷಲ್ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  ಅಕ್ಟೋಬರ್ 14, ದಸರಾ ಹಬ್ಬದಂದು 'ಬದ್ಮಾಶ್' ಚಿತ್ರ ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಅಂದಹಾಗೆ ಚಿತ್ರದ ಸ್ಪೆಷಲ್ ಟ್ರೈಲರ್ ಅನ್ನು ಸ್ಪೆಷಲ್ ವ್ಯಕ್ತಿಯ ಕೈಯಿಂದ ರಿಲೀಸ್ ಮಾಡಿಸಲು ಚಿತ್ರತಂಡ ಅಣಿಯಾಗುತ್ತಿದೆ.[ಈ ದಸರಾ ಹಬ್ಬಕ್ಕೆ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ]

  ಹೌದು ಎಲ್ಲರ ಅಚ್ಚುಮೆಚ್ಚಿನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಬದ್ಮಾಶ್' ಚಿತ್ರದ ಸ್ಪೆಷಲ್ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 26, ಸೋಮವಾರದಂದು ಸಂಜೆ 7 ಘಂಟೆಗೆ 'ಬದ್ಮಾಶ್' ಚಿತ್ರದ ವಿಶೇಷ ಟ್ರೈಲರನ್ನು ಸೆಂಚುರಿ ಸ್ಟಾರ್ ಶಿವಣ್ಣ ಬಿಡುಗಡೆ ಮಾಡಲಿದ್ದಾರೆ.[ಸಲ್ಮಾನ್ ರೀಮೇಕ್ ಮಾಡುತ್ತಿರುವ ಕನ್ನಡದ ಚಿತ್ರ ಯಾವುದು?]

  Actor Shiva Rajkumar to release Dhananjay's 'Badmaash' trailer

  ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು, ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ರವಿ ಕಶ್ಯಪ್ ಅವರು ಬಂಡವಾಳ ಹೂಡಿದ್ದಾರೆ.['ರಾಟೆ' ರಾಜನ ರಗಡ್ ಲುಕ್ ಬೋ ಪಸಂದ್ ಆಗೈತಿ...]

  ಅಂತೂ-ಇಂತೂ ಬಹಳ ದಿನಗಳಿಂದ 'ಬದ್ಮಾಶ್' ಚಿತ್ರವನ್ನು ನೋಡಬೇಕೆಂದು ಕಾದಿದ್ದ ಧನಂಜಯ್ ಅಭಿಮಾನಿಗಳಿಗೆ, ನಾಡಹಬ್ಬ ದಸರಾಗೆ ಸ್ಪೆಷಲ್ ಉಡುಗೊರೆಯಾಗಿ ಸಿನಿಮಾ ತೆರೆ ಕಾಣುತ್ತಿದೆ.

  English summary
  Dhananjay's new film 'Badmaash' is all set to be released on the 14th of October. Meanwhile, actor Shiva Rajkumar will be releasing the trailer of the film. Shivarajakumar will be releasing the trailer on the 26th of September at 7 PM. The movie is directed by Akash Srivatsa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X