»   » ವಿದೇಶ ಸುತ್ತಿ ಬೆಂಗಳೂರಿಗೆ ಬಂದ ಶಿವಣ್ಣನ ನಂದ

ವಿದೇಶ ಸುತ್ತಿ ಬೆಂಗಳೂರಿಗೆ ಬಂದ ಶಿವಣ್ಣನ ನಂದ

Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕ ನಟನಾಗಿ ನಟಿಸುತ್ತಿರುವ 'ನಂದ' ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ಮಾಪಕ ಮಾಹಿನ್ ಅವರು ಕತೆ,ಚಿತ್ರಕತೆ,ಸಂಭಾಷಣೆ ಬರೆದಿರುವ ಚಿತ್ರವನ್ನು ಅನಂತರಾಜು ನಿರ್ದೇಶಿಸಿದ್ದಾರೆ.

'ನಂದ' ಇತ್ತೀಚೆಗಷ್ಟೇ ವಿದೇಶಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗಿತು. ನಂತರ ಬೆಂಗಳೂರಿನ ಜೇಡ್ ಗಾರ್ಡನ್ ನಲ್ಲಿ ಸನ್ನಿವೇಶವೊಂದನ್ನು ಚಿತ್ರೀಕರಿಸಿಕೊಳ್ಳಲಾಯಿತು. ಶಿವರಾಜ್ ಕುಮಾರ್,ರಂಗಾಯಣ ರಘು,ಶರಣ್,ಅವಿನಾಶ್,ಶರತ್ ಲೋಹಿತಾಶ್ವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬೂದು ಕುಂಬಳಕಾಯಿಯನ್ನು ನಿವಾಳಿಸಿದ ನಂತರ ನಿರ್ದೇಶಕರು ಲೈಟ್ಸ್, ಕ್ಯಾಮೆರಾ ಆಕ್ಷನ್ ಎಂದು ಹೇಳುವ ಮೂಲಕ ಕ್ಯಾಮೆರಾ ಚಾಲೂ ಆಯಿತು.

ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ನಿರ್ಮಿಸುತ್ತಿರುವ 'ನಂದ' ಚಿತ್ರಕ್ಕೆ ರಮೇಶ್ ಬಾಬು ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಎಸ್.ಮನೋಹರ್ ಸಂಕಲನ, ಪಳನಿ ರಾಜ್ ಸಾಹಸ, ಇಸ್ಮಾಯಿಲ್ ಕಲೆ. ಚಿತ್ರದ ತಾರಾಬಳಗದಲ್ಲಿ ಶಿವರಾಜ್ ಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್, ಮಿಥನ್ ತೇಜಸ್ವಿ, ಶ್ರೀನಾಥ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಗ್ಯಾಲರಿ : ನಂದನಿ ಬೆಡಗಿ ಸಂಧ್ಯಾ|| ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada