For Quick Alerts
  ALLOW NOTIFICATIONS  
  For Daily Alerts

  ರಾಗಿ ಮುದ್ದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಶಿವರಾಜ್ ಕೆ.ಆರ್ ಪೇಟೆ: ವಿಡಿಯೋ ವೈರಲ್

  |

  ಕೊರೊನಾ ಹಾವಳಿಯ ಪರಿಣಾಮ ಜನರು ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಮನೆಯಲ್ಲಿಯೆ ಕಾಲಕಳೆಯುವ ಮೂಲಕ ಕುಟುಂಬದ ಜೊತೆ ಕ್ವಾರಂಟೈನ್ ಸಮಯ ಎಂಜಾಯ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಮನೆಯಲ್ಲಿ ಕೇಕ್ ತಯಾರಿಸಿ ಕುಟುಂಬದವರ ಜೊತೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ.

  ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಶಿವರಾಜ್ ಕೆ.ಆರ್ ಪೇಟೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವರ್ಷ ಕೇಕ್ ತಂದು ಕತ್ತರಿಸಿ ಅದ್ದೂರಿಯಾಗಿ ಹುಟ್ಟುಹಬ್ಬ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಕೆ.ಆರ್ ಪೇಟೆ ಕುಟುಂಬದವರು ಮನೆಯಲ್ಲಿ ವಿಶೇಷವಾಗಿ ಕೇಕ್ ತಯಾರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಕೆ.ಆರ್ ಪೇಟೆ ಪಕ್ಕ ಹಳ್ಳಿ ಸ್ಟೈಲ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಹೌದು, ಕೆ.ಆರ್ ಪೇಟೆ ರಾಗಿ ಮುದ್ದೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುಂದೆ ಓದಿ..

  ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವರಾಜ್ ಕೆ.ಆರ್ ಪೇಟೆ

  ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವರಾಜ್ ಕೆ.ಆರ್ ಪೇಟೆ

  ಶಿವರಾಜ್ ಕೆ.ಆರ್ ಪೇಟೆ ರಾಗಿ ಮುದ್ದೆಯಲ್ಲಿ ಕೇಕ್ ಮಾಡಿದ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಸದ್ಯ ಹಳ್ಳಿಯಲ್ಲಿರುವ ಶಿವರಾಜ್ ಕೆ.ಆರ್ ಪೇಟೆ ಪಕ್ಕಾ ಹಳ್ಳಿ ಶೈಲಿಯಲ್ಲಿಯೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕೆ.ಆರ್ ನಗರದ ಮೇಲೂರಿನಲ್ಲಿರುವ ಅಕ್ಕಬಾವನ ಮನೆಯಲ್ಲಿರುವ ಕೆ.ಆರ್ ಪೇಟೆ ಕುಟುಂಬದವರು ತಯಾರಿಸಿದ ವಿಶೇಷ ಕೇಕ್ ಅನ್ನು ಕತ್ತರಿಸಿ ಸರಳವಾಗಿ ಹುಟ್ಟುಹಬ್ಬ ಆಚಸಿಕೊಂಡಿದ್ದಾರೆ. ಕುಟುಂಬದವರು ತಯಾರಿಸಿದ ವಿಶೇಷ ಕೇಕ್ ನೋಡಿ ಶಿವರಾಜ್ ಪುಲ್ ಸಂತಸಪಟ್ಟಿದ್ದಾರೆ.

  ರಾಗಿ ಮುದ್ದಿ ಕೇಕ್ ಫುಲ್ ವೈರಲ್

  ರಾಗಿ ಮುದ್ದಿ ಕೇಕ್ ಫುಲ್ ವೈರಲ್

  ಶಿವರಾಜ್ ಕೆ.ಆರ್ ಪೇಟೆ ಜನ್ಮದಿನಕ್ಕೆ ಅವರ ಕುಟುಂಬದವರು ಮರೆಯಲಾಗದ ಸರ್ಪ್ರೈಸ್ ನೀಡಿದ್ದಾರೆ. ರಾಗಿ ಮುದ್ದೆಯಲ್ಲಿ ತಯಾರಿಸಿದ ಕೇಕ್ ಗೆ ಸುತ್ತಲು ಸೌತೆಕಾಯಿ ಮತ್ತು ಹೂವಿನ ಡಿಸೈನ್ ಮಾಡಲಾಗಿದೆ. ರಾಗಿ ಮುದ್ದೆ ಕೇಕ್ ಜೊತೆಗೆ ಬತ್ಸಾರು ಕೂಡ ಮಾಡಿದ್ದಾರೆ. ರಾಗಿ ಮುದ್ದೆ ಕೇಕ್ ಕತ್ತರಿಸಿ ಬತ್ಸಾರಿಗೆ ಅದ್ದಿ ಕುಟುಂಬದವರಿಗೆ ರಾಗಿ ಮುದ್ದೆ ಕೇಕ್ ತಿನಿಸಿ ಸಂತಸ ಪಟ್ಟಿದ್ದಾರೆ. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

  'ಈ ರೀತಿಯ ಹುಟ್ಟುಹಬ್ಬ ಯಾರು ಮಾಡಿರಲ್ಲ'

  ರಾಗಿ ಮುದ್ದೆ ಕೇಕ್ ಕತ್ತರಿಸಿದ ಶಿವರಾಜ್ ಕೆ.ಆರ್ ಪೇಟೆ ಈ ರೀತಿಯ ಕೇಕ್ ಮಾಡಿ ಹುಟ್ಟುಹಬ್ಬವನ್ನು ಯಾರು ಆಚರಣೆ ಮಾಡಿಕೊಂಡಿರ್ಲಿಕ್ಕಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ವಿಶೇಷವಾದ ಹುಟ್ಟುಹಬ್ಬದ ಕೇಕ್ ತಯಾರಿಸಿದ ಕುಟುಂಬದವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಹುಟ್ಟುಹಬ್ಬಕ್ಕೆ ಶುಭಕೋರದ ಪ್ರತಿಯೊಬ್ಬರಿಗೂ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.

  ಸಾಲು ಸಾಲು ಸಿನಿಮಾಗಳಲ್ಲಿ ಶಿವರಾಜ್ ಬ್ಯುಸಿ

  ಸಾಲು ಸಾಲು ಸಿನಿಮಾಗಳಲ್ಲಿ ಶಿವರಾಜ್ ಬ್ಯುಸಿ

  ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕನ್ನಡಿಗರ ಮನಗೆದ್ದಿರುವ ಶಿವರಾಜ್ ಕೆ.ಆರ್ ಪೇಟೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್ ಕೆ ಆರ್ ಪೇಟೆ ದರ್ಶನ್ ಅಭಿನಯದ ರಾಬರ್ಟ್, ನಿಖಿಲ್ ಕುಮಾರ್ ಅಭಿನಯದ ಇನ್ನು ಹೆಸರಿಡದ ಸಿನಿಮಾ, ಬಂಪರ್, ಮದಗಜ ಮತ್ತು ಪುರುಸೊತ್ ರಾಮ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Comedy khiladigalu fame Actor Shivaraj K.R pete celebrating his birthday by cutting Ragi Mudde cake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X