For Quick Alerts
  ALLOW NOTIFICATIONS  
  For Daily Alerts

  ಸಿ.ಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಶಿವಣ್ಣ ದಂಪತಿ: ಇದಕ್ಕೆ ಕಾರಣ ಅಪ್ಪು ಕನಸು!

  |

  ನಟ ಶಿವರಾಜ್‌ ಕುಮಾರ್‌ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಂಗಳೂರಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.

  ಈ ದಂಪತಿ ಮುಖ್ಯ ಮಂತ್ರಿ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಶಿವರಾಜ್‌ ಕುಮಾರ್‌ ಮತ್ತು ಗೀತಾ ಶಿವರಾಜ್‌ಕುಮಾರ್ ಅವರು ಸಿಎಂ ಅವರನ್ನು ಭೇಟಿ ಮಾಡಲು ಕಾರಣ ನಟ ಪುನೀತ್‌ರಾಜ್‌ಕುಮಾರ್.

  ಹೌದು ನಟ ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಪ್ರಾಜೆಕ್ಟ್ ಬಗ್ಗೆ ನಟ ಶಿವರಾಜ್‌ಕುಮಾರ್‌ ದಂಪತಿ ಸಿ.ಎಂ ಬಳಿ ಮಾತನಾಡಿದ್ದಾರೆ.

  ಅಪ್ಪು ಕನಸಿನ ಅನಾವರಣ ಮಾಡಲಿದ್ದಾರೆ CM!

  ಅಪ್ಪು ಕನಸಿನ ಅನಾವರಣ ಮಾಡಲಿದ್ದಾರೆ CM!

  ನಟ ಪುನೀತ್ ರಾಜ್‌ಕುಮಾರ್ ಕಂಡ ಕನಸುಗಳಲ್ಲಿ ಕರ್ನಾಟಕದ ಪರಿಸರವನ್ನು ಜಗತ್ತಿಗೆ ತೋರಿಸುವ ಡಾಕ್ಯೂಮೆಂಟರಿ ಕೂಡ ಒಂದಾಗಿತ್ತು. ಇದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಭಾಗಗಳ ಕಡಲ ತೀರದಲ್ಲಿ ಕಾಡು ಮೇಡುಗಳಲ್ಲಿ ಪುನೀತ್ ರಾಜ್‌ಕುಮಾರ್ ಅಲೆದಾಡಿದ್ದರು. ಸಮುದ್ರದಾಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಚಿತ್ರೀಕರಿಸಿದ್ದರು. ಇದು ಪುನೀತ್‌ರಾಜ್‌ಕುಮಾರ್ ಅವರ ಅಭೂತಪೂರ್ವ ಕನಸುಗಳಲ್ಲಿ ಒಂದಾಗಿತ್ತು. ಆ ಕನಸನ್ನು ಈಡೇರಿಸಲು ರಾಜ್‌ಕುಟುಂಬ ಮುಂದಾಗಿದೆ.

  ಇದೇ ಕಾರಣಕ್ಕೆ ನಟ ಶಿವರಾಜ್‌ಕುಮಾರ್‌ ಸಿಎಂ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ. ಈ ಸಾಕ್ಷ್ಯ ಚಿತ್ರಕ್ಕೆ 'ಗಂಧದ ಗುಡಿ' ಎನ್ನುವ ಶೀರ್ಷಿಕೆ ಇಡಲಾಗಿದೆ ಎನ್ನಲಾಗಿದೆ. ಈ ಟೈಟಲ್‌ ಟೀಸರನ್ನು ಇದೇ ಡಿಸೆಂಬರ್ 6ಕ್ಕೆ ಅನಾವರಣ ಮಾಡಲಾಗುತ್ತದೆ. ಇದೇ ಟೀಸರನ್ನು ಸಿಎಂ ಬಸವರಾಜ ಬೊಮ್ಮಾಯಿ ಅನಾವರಣ ಮಾಡಲು, ಶಿವರಾಜ್‌ಕುಮಾರ್‌ ಅವರು ಆಮಂತ್ರಣ ನೀಡಿ ಬಂದಿದ್ದಾರೆ.

  ನವೆಂಬರ್ 1ರಂದು ಅಪ್ಪು ರಿಲೀಸ್‌ ಮಾಡಬೇಕಿದ್ದ ಟೀಸರ್!

  ನವೆಂಬರ್ 1ರಂದು ಅಪ್ಪು ರಿಲೀಸ್‌ ಮಾಡಬೇಕಿದ್ದ ಟೀಸರ್!

  ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಗೂ ಮುನ್ನ ಸ್ಕೂಬಾ ಡೈವ್ ಮಾಡಿದ ಒಂದು ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್‌ಕುಮಾರ್ ಕಂಡ ಕನಸಿನ ಟೈಟಲ್ ಅನಾವರಣ ಆಗಬೇಕಿತ್ತು. " ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ." ಎಂದು ಹೇಳಿದ್ದರು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ರಾಜ್ಯೋತ್ಸವಕ್ಕೆ 'ವೈಲ್ಡ್ ಕರ್ನಾಟಕ' ಡಾಕ್ಯೂಮೆಂಟರಿಯ ಶೀರ್ಷಿಕೆಯನ್ನು ಅನಾವರಣ ಮಾಡುವ ಆಲೋಚನೆ ಇತ್ತು. ಇದರೊಂದಿಗೆ ಟೈಟಲ್ ಟೀಸರ್ ಕೂಡ ರಿಲೀಸ್ ಮಾಡುವುದರಲ್ಲಿದ್ದರು. ಆದರೆ, ಎರಡು ದಿನ ಮುನ್ನವೇ ಅಪಾರ ಅಭಿಮಾನಿಗಳನ್ನು ಅಪ್ಪು ಅಗಲಿ ದೂರವಾದರು.

  ಅಪ್ಪು ಕನಸು ನನಸು ಮಾಡಲು ಮುಂದಾದ ಕುಟುಂಬ!

  ಅಪ್ಪು ಕನಸು ನನಸು ಮಾಡಲು ಮುಂದಾದ ಕುಟುಂಬ!

  ಅಪ್ಪು ಅವರ ಈ ಕನಸನ್ನು ಅಳಿಸಲು ಬಿಡದೆ. ಅವರ ಯೋಜನೆಯಂತೆ ಈ ಸಾಕ್ಷ್ಯಾ ಚಿತ್ರದ ಟೀಸರ್ ಲಾಂಚ್‌ ಮಾಡಲು ರಾಜ್‌ಕುಂಟುಬ ಮುಂದಾಗಿದೆ. ಅಪ್ಪು ಪತ್ನಿ ಅಶ್ವಿನಿ ಟೀಸರ್‌ ಲಾಂಚ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಹಂಚಿಕೊಂಡಿದ್ದರು. ಡಿಸೆಂಬರ್ 6ರಂದು ಈ ಸಾಕ್ಷ್ಯ ಚಿತ್ರದ ಟೈಟಲ್ ಟೀಸರ್ ರಿಲೀಸ್ ಎಲ್ಲಾ ತಯಾರಿ ನಡೆದಿದೆ.

  ಮುರುಡೇಶ್ವರ, ಗೋಕರ್ಣ, ಕುಮಟಾದಲ್ಲಿ ಡಾಕ್ಯೂಮೆಂಟರ್ ಶೂಟಿಂಗ್!

  ಮುರುಡೇಶ್ವರ, ಗೋಕರ್ಣ, ಕುಮಟಾದಲ್ಲಿ ಡಾಕ್ಯೂಮೆಂಟರ್ ಶೂಟಿಂಗ್!

  ಪುನೀತ್ ರಾಜ್‌ಕುಮಾರ್ ಈ ಡಾಕ್ಯೂಮೆಂಟರಿಗಾಗಿ ಮುರುಡೇಶ್ವರ, ಗೋಕರ್ಣ, ಕುಮಟಾ, ಸೇರಿದಂತೆ ಕರ್ನಾಟಕದ ಕರಾವಳಿಯ ಕಡಲೊಳಗೆ ಈಜಾಡಿದ್ದರು. ಅದೇ ಕಡಲೊಳಗಿನ ಸೌಂದರ್ಯ ಕಂಡು ಮೂಕ ವಿಸ್ಮಿತರಾಗಿದ್ದರು. ಸಿನಿಮಾದ ಜೊತೆ ಜೊತೆಗೇ ಡ್ಯಾಕ್ಯೂಮೆಂಟರಿ ಮಾಡಿ ಅದನ್ನು ಬೆಳ್ಳಿ ಪರದೆ ಮೂಡಿಸಲು ಸಾಕಷ್ಟು ಶ್ರಮಿಸಿದ್ದರು. ಅದು ಇನ್ನು ಕೆಲವು ದಿನಗಳಲ್ಲಿ ರಿಲೀಸ್ ಆಗಲಿದೆ.

  English summary
  Actor Shivaraj Kumar And His Wife Geetha Shivaraj Kumar Met CM Basavaraj Bommai Today Know The Reason,
  Saturday, December 4, 2021, 15:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X