'ಶಿವಸೈನ್ಯ' ತಂಡದ ಅಪ್ಪಟ್ಟ ಅಭಿಮಾನಿ ನಿಧನ

ನಟ ಶಿವರಾಜ್ ಕುಮಾರ್ ಅವರ ಅಪ್ಪಟ್ಟ ಅಭಿಮಾನಿ ಕಶ್ಯಪ್ ಸಿಂಹ (27) ನಿಧನ ಹೊಂದಿದ್ದಾರೆ. ಹೃದಯಘಾತದಿಂದ ಅವರ ಇಂದು ವಿಧಿವಶರಾಗಿದ್ದಾರೆ. ಶ್ರೀನಗರದ ತಮ್ಮ ನಿವಾಸದಲ್ಲಿ ಬೆಳಗ್ಗೆ 8:30ರ ಸುಮಾರಿಗೆ ಅವರು ಕೊನೆಯೂಸಿರೆಳೆದಿದ್ದಾರೆ.

ಬೆಂಗಳೂರಿನವರೇ ಆದ ಕಶ್ಯಪ್ ಸಿಂಹ ಟಿವಿಎಸ್ ಮೋಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಪ್ಪ ಅಮ್ಮನಿಗೆ ಒಬ್ಬನೇ ಮಗನಾಗಿದ್ದರು. ರಾಯಲ್ ಎನ್ಫೀಲ್ಡ್ ಬೈಕ್ ರೈಡರ್ ಆಗಿದ್ದರು. ಅನೇಕ ರಾಲಿಗಳಲ್ಲಿ ಭಾಗಿಯಾಗಿದ್ದರು. ಬೈಕ್ ರೈಡ್ ಎಂದರೆ ಅವರಿಗೆ ಬಹಳ ಇಷ್ಟವಾಗಿತ್ತು.

ಶಿವರಾಜ್ ಕುಮಾರ್ ಅವರ ಅಭಿಮಾನದಿಂದ 'ಶಿವಸೈನ್ಯ' ಎನ್ನುವ ತಂಡವನ್ನು ಬೆಳೆಸಿದರು. ಅದರ ಮೂಲಕ ತಮ್ಮ ಅಭಿಮಾನವನ್ನು ತೋರುತ್ತಿದ್ದರು. ಶಿವಣ್ಣನ ಯಾವುದೇ ಸಿನಿಮಾ ಬಿಡುಗಡೆಯಾದರೂ ಸಂಭ್ರಮಾಚರಣೆ ಮಾಡುತ್ತಿದ್ದರು. ಕಳೆದ ವಾರ ಬಿಡುಗಡೆಯಾದ 'ರುಸ್ತುಂ' ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದರು.

actor shivaraj kumar fans kashyap simha passes away

ಇಂತಹ ಶಿವರಾಜ್ ಕುಮಾರ್ ಅವರ ಅಭಿಮಾನಿ ಇಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಿಕ್ಕವಯಸ್ಸಿಯಲ್ಲಿಯೇ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಅವರ ಸಾವಿಗೆ ಇಡೀ ಕುಟುಂಬ ದುಃಖದಲ್ಲಿದೆ. ಶಿವರಾಜ್ ಕುಮಾರ್ ಅಭಿಮಾನಿಗಳು ಕಶ್ಯಪ್ ಗೆ ಸಂತಾಪ ಸೂಚಿಸಿದ್ದಾರೆ.

actor shivaraj kumar fans kashyap simha passes away

ಬೆಂಗಳೂರಿನ ಗುಡ್ಡದ ಹಳ್ಳಿಯಲ್ಲಿ ಕಶ್ಯಪ್ ಅವರ ಅಂತ್ಯಕ್ರಿಯೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

More from Filmibeat

English summary
Kannada actor Shivaraj Kumar fans Kashyap Simha (27) passed away due to heart attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X