ದರ್ಶನ್ 'ದೇವರ ಮಗ' ಚಿತ್ರದಲ್ಲಿ ನನ್ನೊಟ್ಟಿಗೆ ನಟಿಸಿದ್ರು, ನಂತರ ದೊಡ್ಡ ಸ್ಟಾರ್ ಆದ್ರು- ಶಿವಣ್ಣ

ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಇತ್ತೀಚೆಗೆ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಆ ಸಂಭ್ರಮವನ್ನು ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಆಚರಿಸಿದ್ದರು. ಇದೀಗ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ವೇದಿಕೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ದರ್ಶನ್ ಸಾಧನೆ ಬಗ್ಗೆ ಮಾತನಾಡಿದ್ದಾರೆ.

ಡಿಕೆಡಿ ವೇದಿಕೆಯಲ್ಲಿ ಸ್ಪರ್ಧಿಗಳು ಬೇರೆ ಬೇರೆ ಥೀಮ್‌ನಲ್ಲಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡ್ತಿರ್ತಾರೆ. ಈ ವಾರ ಜಾನ್ಸನ್ ಹಾಗೂ ಆಶ್ರಿತ ಜೋಡಿ ಸೂಪರ್ ಜೋಡಿ ಡಿ ಬಾಸ್ ಮತ್ತು ರಕ್ಷಾತಾ ಥೀಮ್‌ನಲ್ಲಿ ಸೂಪರ್ ಹಿಟ್‌ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ. ಕೆಲವೇ ಗಂಟೆಗಳಲ್ಲಿ ಶೋ ಪ್ರಸಾರವಾಗಲಿದೆ. ಶೋನ ಮುಖ್ಯ ತೀರ್ಪುಗಾರರಾಗಿರೋ ಶಿವಣ್ಣ ಡ್ಯಾನ್ಸ್ ಪರ್ಫಾರ್ಮೆನ್ಸ್ ನಂತರ ದರ್ಶನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಶುಭ ಹಾರೈಸಿದ್ದಾರೆ. ಅದರ ಪ್ರೋಮೊ ರಿಲೀಸ್ ಆಗಿ ವೈರಲ್ ಆಗಿದೆ.

ಖ್ಯಾತ ಖಳ ನಟ ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಕಷ್ಟಪಡಬೇಕಾಯಿತು. ಬಹಳ ನೋವು ಅವಮಾನ ಸಹಿಸಿಕೊಂಡು ಒಂದೊಂದೇ ಮೆಟ್ಟಿಲುಗಳನ್ನು ಏರಿ ಸ್ಟಾರ್ ಪಟ್ಟ ಅಲಂಕರಿಸಿದ್ದಾರೆ. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ದರ್ಶನ್ ಮುಂದೆ ಕ್ಯಾಮರಾ ಅಷ್ಟಿಸ್ಟೆಂಟ್ ಆಗಿಯೂ ಕೆಲಸ ಮಾಡಿದ್ದರು. ಸಣ್ಣಪುಟ್ಟ ಪಾತ್ರಗಳ ಮೂಲಕ ಅಭಿನಯ ಶುರು ಮಾಡಿ ನಂತರ 'ಮೆಜೆಸ್ಟಿಕ್' ಚಿತ್ರದಿಂದ ಹೀರೊ ಆಗಿ ಸಕ್ಸಸ್ ಕಂಡರು.

ದರ್ಶನ್ ನಂಗೆ ಚಿಕ್ಕ ವಯಸ್ಸಿನಿಂದ ಗೊತ್ತು- ಶಿವಣ್ಣ

ದರ್ಶನ್ ಹಾಗೂ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಾಂಗ್ಸ್‌ಗೆ ಜಾನ್ಸನ್ ಹಾಗೂ ಆಶ್ರಿತ ಡ್ಯಾನ್ಸ್ ನೋಡಿ ನಂತರ ಶಿವಣ್ಣ ಮಾತನಾಡಿದರು. "ದರ್ಶನ್‌ ನಂಗೆ ಚಿಕ್ಕ ವಯಸ್ಸಿನಿಂದ ಗೊತ್ತು. ನನ್ನ ಜೊತೆ 'ದೇವರ ಮಗ' ಚಿತ್ರದಲ್ಲಿ ನಟಿಸಿದ್ರು. ಆ ನಂತರ ಅವರು ಸ್ಟಾರ್ ಆದರು. ಅವರ ಬೆಳವಣಿಗೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ತೀನಿ. ಆಲ್ ದಿ ಬೆಸ್ಟ್ ದರ್ಶನ್" ಎಂದು ಹೇಳಿದ್ದಾರೆ.

 ದರ್ಶನ್ ಗುರುಗಳ ಮಗಳು ರಕ್ಷಿತಾ

ದರ್ಶನ್ ಗುರುಗಳ ಮಗಳು ರಕ್ಷಿತಾ

ರಕ್ಷಿತಾ ಪ್ರೇಮ್ ತಂದೆ ಬಿ. ಸಿ ಗೌರಿಶಂಕರ್ ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕರು. ದರ್ಶನ್ ಆರಂಭದ ದಿನಗಳಲ್ಲಿ ಗೌರಿಶಂಕರ್ ಬಳಿ ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದರು. ದರ್ಶನ್ ಯಾವಾಗಲೂ ಇದನ್ನು ಹೇಳ್ತಾರೆ ಎಂದು ನಟಿ ರಕ್ಷಿತಾ ಹೇಳಿದ್ದಾರೆ. "ದರ್ಶನ್ ಅಪ್ಪಾಜಿ ಹತ್ತಿರ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವ್ನು ಯಾವಾಗಲೂ ಹೇಳ್ತಾನೆ ನೀನು ನನ್ನ ಗುರುಗಳ ಮಗಳು ಅಂತ, ಇವತ್ತಿಗೂ ಮೊದಲ ಗೌರವ, ಪ್ರೀತಿ ಬರುವುದು ಅಲ್ಲಿಂದ. ದರ್ಶನ್ ಯಾವಾಗಲೂ ಹೇಳ್ತಿರ್ತಾನೆ, ಖುಷಿಯಾಗಿ ಬದುಕಬೇಕು ಕಣೇ, ಯಾವನು ಹೆಂಗಾದರೂ ಇರಲಿ, ಏನಾದರೂ ಮಾಡಲಿ, ಯಾರು ಏನಾದರೂ ಮಾತನಾಡಲಿ, ನಾವು ಮಾತ್ರ ನಮ್ಮನ್ನು ಜಡ್ಜ್ ಮಾಡಿಕೊಳ್ಳಬೇಕು. ನೀನು ಖುಷಿಯಾಗಿದ್ದಾಗ ನಾನು ಇಲ್ಲದೇ ಇರಬಹುದು. ಕಷ್ಟ ಇದ್ದಾಗ ಯಾವಾಗಲೂ ನಿನ್ನ ಬೆನ್ನ ಹಿಂದೆ ನನ್ನ ಕೈ ಇರುತ್ತೆ ಅಂತ" ಎಂದು ರಕ್ಷಿತಾ ಹೇಳಿದ್ದಾರೆ.

 ದರ್ಶನ್- ರಕ್ಷಿತಾ ಸೂಪರ್ ಹಿಟ್ ಜೋಡಿ

ದರ್ಶನ್- ರಕ್ಷಿತಾ ಸೂಪರ್ ಹಿಟ್ ಜೋಡಿ

ಒಂದ್ಕಾಲದಲ್ಲಿ ದರ್ಶನ್‌ ಹಾಗೂ ರಕ್ಷಿತಾ ಜೋಡಿ ತೆರೆಮೇಲೆ ಮೋಡಿ ಮಾಡಿತ್ತು. 'ಕಲಾಸಿಪಾಳ್ಯ', 'ಅಯ್ಯ', 'ಸುಂಟರಗಾಳಿ' ಹಾಗೂ 'ಮಂಡ್ಯ' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಗೆದ್ದರು. ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದ ಹಾಡುಗಳನ್ನು ಪ್ರೇಕ್ಷಕರು ಇನ್ನು ಮರೆತ್ತಿಲ್ಲ. ದರ್ಶನ್‌ ಮತ್ತು ರಕ್ಷಿತಾ ಕನ್ನಡ ಚಿತ್ರರಂಗದ ಕಲಾವಿದರಷ್ಟೇ ಅಲ್ಲ ಬಹಳ ಆತ್ಮೀಯ ಸ್ನೇಹಿತರು.

 ಡಿಕೆಡಿ ವೇದಿಕೆಗೆ ದಾಸ

ಡಿಕೆಡಿ ವೇದಿಕೆಗೆ ದಾಸ

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋನಲ್ಲಿ ದರ್ಶನ್‌ ಹಾಗೂ ರಕ್ಷಿತಾ ಜೋಡಿಯ ಸ್ಪೆಷಲ್ ಥೀಮ್ ಪರ್ಫಾರ್ಮನ್ಸ್‌ ನೋಡೋಕೆ ವೀಕ್ಷಕರು ಕಾಯುತ್ತಿದ್ದಾರೆ. ಇನ್ನು ದರ್ಶನ್ ಅಭಿಮಾನಿಗಳು ಪ್ರೋಮೊ ನೋಡಿ ಖುಷಿಯಾಗಿದ್ದು, ಶೋಗೆ ದರ್ಶನ್‌ನ ಕರೆಸಿ ಎಂದು ಮನವಿ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಇಂತಹ ವಿಶೇಷ ಸಂದರ್ಭದಲ್ಲಿ ಅವರನ್ನು ಡಿಕೆಡಿ ವೇದಿಕೆಗೆ ಕರೆಸಿ ಸ್ಪೆಷಲ್ ಶೋ ಮಾಡುವಂತೆ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

More from Filmibeat

English summary
Actor Shivarajkumar Praises Darshan Video Goes Viral. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X