For Quick Alerts
  ALLOW NOTIFICATIONS  
  For Daily Alerts

  'ದಾರಿ ತಪ್ಪಿದ ಮಗ' ಹಾಗೂ 'ಓಂ' ಲಿಂಕ್ ಸೂಪರ್: 'ಶಿವ 143' ಸಿನಿಮಾ ನೋಡಿ 'ಶಿವ'ಣ್ಣನ ರಿವ್ಯೂ!

  |

  ಡಾ. ರಾಜ್‌ಕುಮಾರ್ ಮೊಮ್ಮಗ ಧೀರೇನ್ ರಾಮ್ ಕುಮಾರ್ ನಟನೆಯ 'ಶಿವ 143' ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ಪ್ರಯತ್ನದಲ್ಲೇ ರಾಮ್‌ಕುಮಾರ್ ಪುತ್ರ ಧೀರೇನ್ ರಾಮ್‌ಕುಮಾರ್‌ ಕಮಾಲ್ ಮಾಡಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದಲ್ಲಿ ಈ ರಗಡ್ ಲವ್ ಸ್ಟೋರಿ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ದಂಪತಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

  ನಗರದ ಕೆಜಿ ರಸ್ತೆಯ ಸಂತೋಷ್ ಥಿಯೇಟರ್‌ನಲ್ಲಿ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಚಿತ್ರತಂಡದ ಜೊತೆ 'ಶಿವ 143' ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಧೀರೇನ್ ಅಭಿನಯಕ್ಕೆ ಸೆಂಚುರಿ ಸ್ಟಾರ್ ಕ್ಲೀನ್ ಬೋಲ್ಡ್ ಆಗಿದ್ದು, ತಂಡದ ಪ್ರಯತ್ನಕ್ಕೆ ಅಭಿನಂದನೆ ತಿಳಿಸಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕ್ಲಾಸ್ ಮತ್ತು ಮಾಸ್ ಆಡಿಯನ್ಸ್‌ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಗಣೇಶ ಹಬ್ಬ ಸಡಗರದಲ್ಲಿ ಥಿಯೇಟರ್‌ಗಳಲ್ಲಿ ಶಿವತಾಂಡವ ಶುರುವಾಗಿದೆ.

  ಬಹಳ ಹಿಂದೆಯೇ ಸೆಟ್ಟೇರಿದ್ದ 'ಶಿವ 143' ಸಿನಿಮಾ ರಿಲೀಸ್ ಆಗುವುದು ತಡವಾಗಿತ್ತು. ಚಿತ್ರದಲ್ಲಿ ಮಾನ್ವಿತಾ ಕಾಮತ್ ನಾಯಕಿಯಾಗಿ ಮಿಂಚಿದ್ದಾರೆ. ಧೀರೇನ್ ಹಾಗೂ ಮಾನ್ವಿತಾ ಬೋಲ್ಡ್ ದೃಶ್ಯಗಳು ಸ್ಯಾಂಪಲ್‌ಗಳಲ್ಲೇ ಹುಬ್ಬೇರಿಸಿತ್ತು. ಕೊನೆಗೂ ಸಿನಿಮಾ ರಿಲೀಸ್ ಆಗಿ ಪಾಗಲ್ ಪ್ರೇಮಿಯ ಕಥೆ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ. ಶಿವರಾಜ್‌ಕುಮಾರ್‌ ಸಿನಿಮಾ ನೋಡಿ ಏನಂದ್ರು? ಮುಂದೆ ಓದಿ.

  'ಓಂ' ಚಿತ್ರದ ಮಧು ಹೆಸರು ಬಹಳ ಪಾಪ್ಯೂಲರ್

  'ಓಂ' ಚಿತ್ರದ ಮಧು ಹೆಸರು ಬಹಳ ಪಾಪ್ಯೂಲರ್

  'ಶಿವ 143' ಚಿತ್ರಕ್ಕೆ ಮೊದಲಿಗೆ ಅಣ್ಣಾವ್ರ ಸೂಪರ್ ಹಿಟ್ 'ದಾರಿ ತಪ್ಪಿದ ಮಗ' ಸಿನಿಮಾ ಟೈಟಲ್ ಫಿಕ್ಸ್ ಮಾಡಿದ್ದರು. ನಂತರ ಬದಲಿಸಲಾಗಿತ್ತು. ಆದರೆ ಸಿನಿಮಾದಲ್ಲಿ ಧೀರೇನ್‌ನ 'ದಾರಿ ತಪ್ಪಿದ ಮಗ'ನಾಗಿ ತೋರಿಸಲಾಗಿದೆ. ಇನ್ನು 'ಓಂ' ಸಿನಿಮಾ ಫ್ಲೆವರ್ ಕೂಡ ಚಿತ್ರದಲ್ಲಿದೆ. ಈ ಬಗ್ಗೆ ಮಾತನಾಡಿದ ಶಿವಣ್ಣ "ಓಂ ಚಿತ್ರದ ಮಧು ಪಾತ್ರ ತುಂಬಾ ಪಾಪ್ಯುಲರ್. ಚೆನ್ನಾಗಿ ಸೂಟ್ ಆಗಿದೆ. ಅಪ್ಪಾಜಿಯವರ 'ದಾರಿ ತಪ್ಪಿದ ಮಗ' ಇಂದ ಶುರುವಾಗಿ 'ಓಂ' ಸಿನಿಮಾ ಲಿಂಕ್ ಆಗಿರುವುದು ಚೆನ್ನಾಗಿದೆ. ಬಹಳ ವಿಭಿನ್ನವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ".

  ಧೀರೇನ್ ಜ್ಯೂನಿಯರ್ ಶಿವಣ್ಣ ಅಲ್ಲ!

  ಧೀರೇನ್ ಜ್ಯೂನಿಯರ್ ಶಿವಣ್ಣ ಅಲ್ಲ!

  "ಧೀರೇನ್ ಜ್ಯೂನಿಯರ್ ಶಿವಣ್ಣ ಆಗುವುದು ಬೇಡ, ಅವನು ಧೀರೇನ್ ಆಗಿಯೇ ಬರಲಿ. ಯಾರನ್ನು ಸಿನಿಮಾದಲ್ಲಿ ಇಮಿಟೇಟ್ ಮಾಡಿಲ್ಲ, ಅದು ಬಹಳ ಇಷ್ಟವಾದ ವಿಷಯ. ನನ್ನನ್ನಾಗಲಿ, ಅಪ್ಪಾಜಿಯರನ್ನಾಗಲಿ, ಅಪ್ಪುನ ಆಗಲಿ ಯಾರನ್ನು ಇಮಿಟೇಟ್ ಮಾಡಿಲ್ಲ. ಅವರ ತಂದೆ- ತಾಯಿಯನ್ನು ಕೂಡ ಇಮಿಟೇಟ್ ಮಾಡಿಲ್ಲ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಸಿನಿಮಾ ಇಷ್ಟ ಆಯಿತು. ಇಷ್ಟರಿಗೂ ಇಷ್ಟವಾಗುತ್ತದೆ".

  ಕ್ಲೈಮ್ಯಾಕ್ಸ್‌ನಲ್ಲಿ ಒಳ್ಳೆ ಪಾಠ ಇದೆ

  ಕ್ಲೈಮ್ಯಾಕ್ಸ್‌ನಲ್ಲಿ ಒಳ್ಳೆ ಪಾಠ ಇದೆ

  "ರಿವ್ಯೂ ನೋಡಿ ಬಹಳ ಖುಷಿ ಆಯಿತು. ಮೊದಲ ಪ್ರಯತ್ನದಲ್ಲಿ ಚೆನ್ನಾಗಿ ಮಾಡಿದ್ದಾರೆ ಎಂದು ಯಾರು ಹೇಳಲ್ಲ. ಚಿತ್ರದಲ್ಲಿ ವಯಲೆನ್ಸ್ ಇದೆ. ಪ್ರೀತಿ ಇದೆ. ಟ್ರೆಂಡ್ ಪ್ರಕಾರ ಹೋಗಲೇಬೇಕು. ಅದರಲ್ಲಿ ಎಮೋಷನ್ ಸೇರಿಸಿದ್ದಾರೆ. ಕ್ಲೈಮ್ಯಾಕ್ಸ್ ವೇಳೆಗೆ ಒಳ್ಳೆ ಸಂದೇಶ ಇದೆ. ಅಷ್ಟು ಸುಲಭವಾಗಿ ಯಾಮಾರಬೇಡಿ ಎನ್ನುವ ವಿಷಯ ಇದೆ."

  Recommended Video

  Vikram Grand Entry | ಎಂಟ್ರಿ ನೋಡೋಕೆ ಕಾದು ನಿಂತ KGF ಬೆಡಗಿ. | Sri Nidhi Shetty | Cobra | Filmibeat
  'ಶಿವ 143' ಮೇಕಿಂಗ್ ಸೂಪರ್

  'ಶಿವ 143' ಮೇಕಿಂಗ್ ಸೂಪರ್

  "ಸಿನಿಮಾ ಎಲ್ಲೂ ಬೋರ್ ಅನ್ನಿಸಲ್ಲ. ಸಾಧು ಕೋಕಿಲ ಕಾಮಿಡಿ ಕೂಡ ಇದೆ. ನಿರ್ದೇಶಕರು ಒಳ್ಳೆ ಕೆಲಸ ಮಾಡಿದ್ದಾರೆ. ಕ್ಯಾಮರಮನ್ ಕೂಡ ಬಹಳ ಸೊಗಸಾಗಿ ಸಿನಿಮಾ ಸೆರೆಹಿಡಿದಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಹಿನ್ನೆಲೆಯಲ್ಲಿ ಅದ್ಭುತವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನಾವು ಕೂಡ ಅಲ್ಲೆಲ್ಲಾ ಶೂಟಿಂಗ್ ಮಾಡಿದ್ದೇವೆ. ಆದರೆ ಅದಕ್ಕಿಂತಲೂ ಈ ಚಿತ್ರದಲ್ಲಿ ಬಹಳ ಚೆನ್ನಾಗಿ ತೋರಿಸಲಾಗಿದೆ".

  English summary
  Actor Shivarajkumar Reviews Dheeren Ramkumar's Film Shiva 143. Know More.
  Sunday, August 28, 2022, 22:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X