twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದ ಸೂಪರ್ ಸ್ಟಾರ್‌ಗಳನ್ನು ಒಗ್ಗೂಡಿಸಿ ಚಿತ್ರ ನಿರ್ಮಿಸಿದ್ದ ಶಿವರಾಂ

    |

    ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ನಟ ಶಿವರಾಂ ನಿನ್ನೆ (ಡಿಸೆಂಬರ್ 4) ಕೊನೆ ಉಸಿರೆಳೆದಿದ್ದಾರೆ. ಇವರ ಸಾವಿಗೆ ಸಾಕಷ್ಟು ಚಿತ್ರರಂಗದ ಗಣ್ಯರು, ಕಲಾವಿದರು, ರಾಜಕೀಯ ವ್ಯಕ್ತಿಗಳು ಕಂಬನಿ ಮಿಡಿದಿದ್ದು, ಚಿತ್ರರಂಗದ ಹಿರಿಯ ಕಲಾವಿದರನ್ನು ಕಳೆದುಕೊಂಡಿರುವ ನೋವು ಎಲ್ಲೆಡೆ ಆವರಿಸಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು 6 ದಶಕಗಳಿಂದಲೂ ತೊಡಗಿಸಿಕೊಂಡಿದ್ದ ಶಿವರಾಂ ಅವರು ಕೇವಲ ಕಲಾವಿದರಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಬದಲಾಗಿ ನಟನಾಗಿ, ಹಾಸ್ಯನಟನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕೂಡ ಯಶಸ್ಸು ಕಂಡವರು.

    ಚಿತ್ರರಂಗದ ಎಲ್ಲಾ ವಿಭಾಗಗಳಲ್ಲೂ ಪಳಗಿದ್ದ ಶಿವರಾಂ ಅವರು ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿಮಾ ನಿರ್ಮಾಣ ಮಾಡಿ ಒಬ್ಬ ಅತ್ಯುತ್ತಮ ನಿರ್ಮಾಪಕ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಗೇ ನಟನೆ ಮತ್ತು ನಿರ್ದೇಶನದಲ್ಲಿ ಹೇಗೆ ಗಮನ ಸೆಳೆದಿದ್ದರೋ ಹಾಗೇ ಸಿನಿಮಾ ನಿರ್ಮಾಣದಲ್ಲೂ ಒಂದು ದಾಖಲೆಯನ್ನೇ ಮಾಡಿದ್ದರು.

    ಮೂವರು ಸೂಪರ್ ಸ್ಟಾರ್‌ಗಳನ್ನು ಒಂದೇ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದ ಕೀರ್ತಿ ಶಿವರಾಂ ಅವರದ್ದು. ಶಿವರಾಂ ಅವರು ತನ್ನ ಸಹೋದರ ಎಸ್ ರಾಮನಾಥನ್ ಜೊತೆಯಲ್ಲಿ ಸೇರಿಕೊಂಡು "ರಾಶಿ ಬ್ರದರ್ಸ್" ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ರಾಮನಾಥನ್ ಹೆಸರಿನ 'ರಾ' ಮತ್ತು ಶಿವರಾಂ ಹೆಸರಿನ 'ಶಿ' ಅಕ್ಷರವನ್ನೇ ಬಳಸಿಕೊಂಡು ರಾಶಿ ಬ್ರದರ್ಸ್ ಎಂಬ ಹೆಸರನ್ನು ಈ ನಿರ್ಮಾಣ ಸಂಸ್ಥೆಗೆ ಇಡಲಾಗಿತ್ತು. ಈ ಸಂಸ್ಥೆ ಮೂಲಕ ಕನ್ನಡ ಸೇರಿದಂತೆ ಹಿಂದಿ ಸಿನಿಮಾಗಳನ್ನು ಯಶಸ್ವಿಯಾಗಿ ನಿರ್ಮಿಸಿದ ಕೀರ್ತಿ ಶಿವರಾಂ ಅವರಿಗೆ ಸಲ್ಲುತ್ತದೆ.

    Actor Shivaram as successful Producer

    ನಟ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ರಜನಿಕಾಂತ್ ಈ ಮೂವರು ಸೂಪರ್ ಸ್ಟಾರ್‌ಗಳನ್ನು ಶಿವರಾಂ 'ಗಿರಫ್ತಾರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುವಂತೆ ಮಾಡಿದ್ದರು. ಈ ವಿಷಯ ಭಾರತೀಯ ಚಿತ್ರರಂಗದಲ್ಲೇ ದಾಖಲೆಯ ವಿಷಯವಾಗಿತ್ತು. ಈ ಮೂವರು ತೆರೆಮೇಲೆ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಈ ಮೂವರನ್ನು ಒಟ್ಟುಗೂಡಿಸಿ ಒಂದೇ ಸಿನಿಮಾದಲ್ಲಿ ನಟಿಸುವಂತೆ ಮಾಡಿದ ಶ್ರೇಯಸ್ಸು ರಾಶಿ ಬ್ರದರ್ಸ್ ನಿರ್ಮಾಣ ಸಂಸ್ಥೆಗೆ ಸಲ್ಲುತ್ತೆ. ಈ ಸಿನಿಮಾ ರಿಲೀಸ್ ಆಗಿ ಸುಪರ್ ಡೂಪರ್ ಹಿಟ್ ಕೂಡ ಆಗಿತ್ತು ಅನ್ನೋದನ್ನ ಇಲ್ಲಿ ನೆನಪಿಸಿಕೊಳ್ಳ ಬಹುದಾಗಿದೆ.

    Actor Shivaram as successful Producer

    ಇನ್ನು ರಜಿನಿಕಾಂತ್ ನಟನೆಯ ತಮಿಳಿನ ಧರ್ಮ ದುರೈ ಸಿನಿಮಾವನ್ನು ಕೂಡ ಶಿವರಾಂ ನಿರ್ಮಾಣ ಮಾಡಿದ್ದರು. 1991ರಲ್ಲಿ ಈ ಸಿನಿಮಾ ರಿಲೀಸ್ ಆಗಿ ಚಿತ್ರಮಂದಿರಲ್ಲಿ 175ದಿನಕ್ಕೂ ಹೆಚ್ಚು ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಅಲ್ಲದೇ ಕಲೆಕ್ಷನ್‌ನಲ್ಲೂ ರೆಕಾರ್ಡ್ ಬ್ರೇಕ್ ಮಾಡಿದ್ದ ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಹೀಗೆ ಸಾಕಷ್ಟು ಸಿನಿಮಾಗಳನ್ನು ರಾಶಿ ಬ್ರದರ್ಸ್ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸಿರೋ ಕ್ರೆಟಿಡ್ ಶಿವರಾಂ ಅವರದ್ದು.

    Actor Shivaram as successful Producer

    ಇನ್ನು ಕನ್ನಡದ ಹಲವು ಹಿಟ್ ಚಿತ್ರಗಳನ್ನು ಕೂಡ ರಾಶಿ ಬ್ರದರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಮೂಲಕ ಸಾಕಷ್ಟು ಹೆಸರು ಕೀರ್ತಿಯನ್ನು ಶಿವರಾಂ ಅವರು ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಆಗ ಸಾಕಷ್ಟು ಜನ ಮೆಚ್ಚುಗೆಯನ್ನು ಪಡೆದಿದ್ದ 'ಗೆಜ್ಜೆ ಪೂಜೆ' ಚಿತ್ರವನ್ನು ಶಿವರಾಂ ಅವರು ನಿರ್ಮಾಣ ಮಾಡಿದ್ದರು. ಈ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು. ನಟಿ ಕಲ್ಪನಾ, ಗಂಗಾಧರ್, ಲೀಲಾವತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಎಂ.ಕೆ ಇಂದಿರಾ ಅವರ 'ಗೆಜ್ಜೆಪೂಜೆ' ಕಾದಂಬರಿ ಆಧರಿತ ಚಿತ್ರವಾಗಿತ್ತು. ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಕೂಡ ಸಂದಿದ್ದು, ತಮಿಳು, ತೆಲುಗು, ಹಿಂದಿಯಲ್ಲೂ ಈ ಚಿತ್ರ ನಿರ್ಮಾಣವಾಗಿ ಹಿಟ್ ಆಗಿತ್ತು.

    ಇದರೊಂದಿದೆ ಡಾ ರಾಜ್‌ಕುಮಾರ್ ನಟನೆಯ 'ನಾನೊಬ್ಬ ಕಳ್ಳ' ಚಿತ್ರವನ್ನು ಶಿವರಾಂ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಡಾ ರಾಜ್ ಜೊತೆ ಹಿರಿಯ ನಟಿ ಲಕ್ಷ್ಮಿ, ಕಾಂಚನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದರೊಟ್ಟಿಗೆ ಆರತಿ, ಲಕ್ಷ್ಮಿ ದೇವಿ ಅಭಿನಯದ 'ಉಪಾಸನೆ', 'ಡ್ರೈವರ್ ಹನುಮಂತು', 'ಬಹಳ ಚೆನ್ನಾಗಿದೆ' ಸಿನಿಮಾಗಳನ್ನು ಶಿವರಾಂ ನಿರ್ಮಾಣ ಮಾಡಿದ್ದಾರೆ. ನಟನೆಯ ಜೊತೆಜೊತೆಗೆ ಶಿವರಾಂ ನಿರ್ಮಾಣದಲ್ಲೂ ಸಾಕಷ್ಟು ಹೆಸರು ಮಾಡಿದ್ದರು ಎಂಬುದಕ್ಕೆ ಇವೆಲ್ಲವೂ ಸಾಕ್ಷಿಯಾಗಿದೆ.

    English summary
    Actor Shivaram as successful Producer. He produced Geraftaar movie starring Amitabh bachchan, Kamal haasan ,Rajinikanth.
    Monday, December 6, 2021, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X