ಅಂಬಿಗೆ ಅಪಮಾನ ಮಾಡಿದ್ರಾ ಎಚ್‌ಡಿಕೆ: ಹಿರಿಯ ನಟ ಶಿವರಾಂ ಏನಂದ್ರು?
ಅಂಬರೀಶ್ ಸ್ಮಾರಕ ವಿಚಾರವಾಗಿ ಸಿಎಂ ಆಗಿದ್ದ ಎಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಲು ಹಿರಿಯ ನಟ ದೊಡ್ಡಣ್ಣ ವಿಧಾನಸೌಧಕ್ಕೆ ಹೋಗಿದ್ದರು. ಆ ವೇಳೆ ಮನವಿ ಪತ್ರ ತೆಗೆದುಕೊಂಡು ಮುಖಕ್ಕೆ ಎಸೆದ್ರು, ಅಂಬಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ರು ಎಂಬ ಆರೋಪವನ್ನು ಸುಮಲತಾ ಮಾಡಿದ್ದಾರೆ.
Recommended Video
ಈ ವಿಷಯವನ್ನು ಸುಮಲತಾರ ಬಳಿ ಹೇಳಿಕೊಂಡ ದೊಡ್ಡಣ್ಣ ಕಣ್ಣೀರು ಹಾಕಿದ್ರು ಎಂಬ ವಿಚಾರ ಹೊರಬಿದ್ದಿದೆ. ಎಚ್‌ಡಿಕೆ ಭೇಟಿ ಮಾಡಿದ ಸಂದರ್ಭದಲ್ಲಿ ದೊಡ್ಡಣ್ಣ ಹಾಗೂ ಹಿರಿಯ ನಟ ಶಿವರಾಮಣ್ಣ ಇದ್ದರು ಎಂದು ಸುಮಲತಾ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ಹಿರಿಯ ನಟ ಶಿವರಾಂ ದಿಗ್ವಿಜಯ ಕನ್ನಡ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದು, ''ಗೊತ್ತಿಲ್ಲದ ವಿಚಾರದ ಬಗ್ಗೆ ಒಬ್ಬರನ್ನು ಎಳೆದು ತರಬಾರದು, ದೊಡ್ಡಣ್ಣ ಯಾವ ವಿಷಯಕ್ಕೆ ಬಂದಿದ್ದರು ಎನ್ನುವುದು ನನಗೆ ಗೊತ್ತೆ ಇರಲಿಲ್ಲ'' ಎಂದಿದ್ದಾರೆ. ಮುಂದೆ ಓದಿ...

ನಾನು ಬೇರೆ ಕೆಲಸಕ್ಕಾಗಿ ಹೋಗಿದ್ದೆ
''ದೊಡ್ಡಣ್ಣ ಇದ್ದರು, ನಾನು ಆ ಸಮಯಕ್ಕೆ ಹೋದೆ. ಒಂದೇ ಕೆಲಸಕ್ಕಾಗಿ ನಾವಿಬ್ಬರು ಹೋಗಿರಲಿಲ್ಲ. ಅವರು ಯಾವ ಕೆಲಸಕ್ಕಾಗಿ ಬಂದಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ, ನಾನು ಯಾವ ಕೆಲಸಕ್ಕಾಗಿ ಹೋಗಿದ್ದೇನೆ ಎಂದು ಅವರಿಗೆ ತಿಳಿದಿರಲಿಲ್ಲ. ಇಬ್ಬರು ಸಿಎಂಗೋಸ್ಕರ ಕಾಯುತ್ತಾ ಕುಂತಿದ್ವಿ. ಆಮೇಲೆ ಮುಖ್ಯಮಂತ್ರಿಗಳು ಬಂದರು.'' ಎಂದು ಶಿವರಾಂ ಅವರು ಅಂದು ವಿಧಾನಸೌಧದಲ್ಲಿ ನಡೆದ ಘಟನೆ ವಿವರಿಸಿದ್ದಾರೆ.

ಪತ್ರ ಕೊಟ್ಟರು, ಆಮೇಲೆ ಏನಾಯ್ತು
''ದೊಡ್ಡಣ್ಣ ಹೋಗಿ ಒಂದು ಪತ್ರ ಕೊಟ್ಟರು. ಅದನ್ನು ಎಸೆದರು, ಬಿಸಾಡಿದ್ರಾ ಎನ್ನುವುದನ್ನು ನಾನು ಗಮನಿಸಿಲ್ಲ. ನಾನು ಒಳ ಪ್ರವೇಶ ಮಾಡುವಷ್ಟರಲ್ಲಿ ದೊಡ್ಡಣ್ಣ ಮತ್ತು ಸಿಎಂ ಮಾತು ಮುಗಿದಿತ್ತು. ಸ್ವಲ್ಪ ಕೋಪವಾಗಿ ಕಾಣ್ತಿದ್ರು. ಅದು ಅಂಬಿ ಸ್ಮಾರಕ ವಿಷಯವೇ ಆಗಿದ್ದರೆ ಕೋಪ ಮಾಡಿಕೊಳ್ಳುವ ಅಗತ್ಯ ಇಲ್ಲ'' ಎಂದು ಹೇಳಿದ್ದಾರೆ.

ಸುಮಲತಾ ಆರೋಪ ಏನು?
''ಸ್ಮಾರಕ ನಿರ್ಮಾಣ ವಿನ್ಯಾಸದ ಕುರಿತು ಮನವಿ ಕೊಡಲು ಹಿರಿಯ ನಟ ದೊಡ್ಡಣ್ಣ, ಶಿವರಾಮಣ್ಣ ವಿಧಾನಸೌಧಕ್ಕೆ ಹೋದಾಗ, ಕುಮಾರಸ್ವಾಮಿ ಅವರು ಅಂಬರೀಶ್ ಬಗ್ಗೆ ಏಕವಚನದಲ್ಲಿ ಮಾತನಾಡಿ, ಮನವಿ ಪತ್ರವನ್ನು ಮುಖಕ್ಕೆ ಎಸೆದರು. ನಾನ್ ಏಕೆ ಅವನ ಸ್ಮಾರಕ ಮಾಡಬೇಕು, ಅವನೇನು ಮಾಡಿದ್ದಾನೆ ಎಂದು ಪ್ರಶ್ನಿಸಿದ್ದನ್ನು ಮರೆತಿರಬಹುದು'' ಎಂದು ಸುಮಲತಾ ಆರೋಪಿಸಿದ್ದರು. ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸಹ ದನಿಗೂಡಿಸಿದರು.

ಸ್ಮಾರಕದಲ್ಲಿ ನನ್ನ ದುಡಿಮೆ ಇದೆ
''ಅಂಬಿ ಸ್ಮಾರಕ ನಿರ್ಮಾಣದಲ್ಲಿ ನನ್ನ ದುಡಿಮೆ ಇದೆ'' ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅಷ್ಟೇ ಅಲ್ಲ ''ಅಂಬರೀಶ್ ನಿಧನದ ಸಮಯದಲ್ಲಿ ಸುಮಲತಾ ಅವರು ಮಂಡ್ಯಗೆ ತೆಗೆದುಕೊಂಡು ಹೋಗುವುದು ಬೇಡ ಎಂದಿದ್ದರು. ಕೇಂದ್ರ ಸಚಿವರ ಬಳಿ ಒಪ್ಪಿಗೆ ತೆಗೆದುಕೊಂಡು ಹೋಗಿದ್ದು ನಾನು'' ಎಂದು ಹೇಳಿದ್ದರು.


Click it and Unblock the Notifications











