ವೆಬ್ ಸೀರಿಸ್ ಶುರು ಮಾಡಿದ ಶಿವರಾಜ್ ಕುಮಾರ್
Recommended Video

ನಟ ಶಿವರಾಜ್ ಕುಮಾರ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ಅದರ ಜೊತೆಗೆ ಶಿವಣ್ಣ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಶಿವಣ್ಣ ಇದೀಗ ಹೊಸ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ.
ಉದಯ ಟಿವಿಯ 'ಮನಸ ಸರೋವರ' ಧಾರಾವಾಹಿಯನ್ನು ಶಿವರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಆ ನಂತರ ಈಗ ವೆಬ್ ಸೀರಿಸ್ ಲೋಕಕ್ಕೆ ಅವರು ಕಾಲಿಟ್ಟಿದ್ದಾರೆ. ತಮ್ಮ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ನಲ್ಲಿ ಈಗ ಹೊಸ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ.
ಶಿವಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಸಂಜೆ ಈ ವೆಬ್ ಸೀರಿಸ್ ಪೋಸ್ಟರ್ ಬಿಡುಗಡೆಯಾಗಿದೆ. 'ಹೇಟ್ ಯೂ ರೋಮಿಯೊ' ಎಂಬ ಟೈಟಲ್ ಅನ್ನು ಈ ವೆಬ್ ಸೀರಿಸ್ ಗೆ ಇಡಲಾಗಿದೆ. ಪೋಸ್ಟರ್ ಆಕರ್ಷಕವಾಗಿದೆ.

ಆರ್ ಜೆ ಪ್ರದೀಪ್ ಅವರ ಸಖತ್ ಸ್ಟೂಡಿಯೋ ಹಾಗೂ ಶಿವಣ್ಣ ಅವರ ಶ್ರೀಮುತ್ತು ಸಿನಿ ಸರ್ವಿಸ್ ಸಹಭಾಗಿತ್ವ ದಲ್ಲಿ ಈ ವೆಬ್ ಸೀರಿಸ್ ಬರಲಿದೆ. ವಿಶೇಷ ಅಂದರೆ ಈ ಹಿಂದೆ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ಮೂಲಕ ದೊಡ್ಡ ಹೆಸರು ಮಾಡಿದ್ದ ತಂಡವೆ ಈಗ ಮತ್ತೊಂದು ಹೊಸ ವೆಬ್ ಸೀರಿಸ್ ಮಾಡುತ್ತಿದೆ. ಇಶಾಮ್ ಖಾನ್ ಹಾಗೂ ಹಸೀನ್ ಖಾನ್ ಈ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











