twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣ ಕೈಲಿ ಎರಡು ಹೊಸ ಚಿತ್ರ: ಹೆಸರಲ್ಲೇ ಇದೆ ಖದರ್!

    |

    ಕನ್ನಡ ಚಿತ್ರರಂಗದಲ್ಲಿ ಬಹುಬಗೆಯ 'ಸ್ಟಾರ್‌' ಹೀರೋಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ. ಆದರೆ ಕಳೆದ ಕೆಲವು ದಶಕಗಳಿಂದ ಬೇಡಿಕೆಯನ್ನೇ ಕಳೆದುಕೊಳ್ಳದೇ ಸದಾ ಚಾಲ್ತಿಯಲ್ಲಿರುವ ಏಕೈಕ ನಟ ಶಿವರಾಜ್‌ ಕುಮಾರ್.

    Recommended Video

    ಪುನೀತ್ ಅವರ ದುಬಾರಿ ಕಾರು ಚಲಾಯಿಸಿದ ಶಿವಣ್ಣ| Shivanna & Puneeth in lamborghini

    ಶಿವರಾಜ್‌ ಕುಮಾರ್ ಅವರಿಗಿಂತಲೂ ಹಿರಿಯ ನಟರಿದ್ದಾಗಲೂ, ಶಿವರಾಜ್ ಕುಮಾರ್ ಅವರಿಗಿಂತಲೂ ಹಲವು ಕಿರಿಯ ನಟರೂ ಚಿತ್ರರಂಗದಿದ್ದಾಗಲೂ ಸಹ ಬೇಡಿಕೆಯನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಶಿವರಾಜ್‌ ಕುಮಾರ್ ಮಾತ್ರವೇ.

    ಇದೀಗ ಕೊರೊನಾ ವೈರಸ್ ಬಂದು ಇಡೀಯ ಚಿತ್ರರಂಗವೇ ಬಂದ್ ಆಗಿ ಕೂತಿದ್ದಾಗಲೂ ಸಹ ಶಿವರಾಜ್ ಕುಮಾರ್ ಸಿನಿಮಾಗಳ ಕತೆ ಕೇಳಿ ಸಹಿ ಮಾಡುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಸಿನಿಮಾ ಎಂದರೆ ಶಿವಣ್ಣನಿಗೆ ಪ್ರೀತಿ ಹಾಗಾಗಿಯೇ ಸಿನಿಮಾ ಅವರ ಕೈ ಎಂದಿಗೂ ಬಿಟ್ಟಿಲ್ಲ.

    ಕೊರೊನಾ ಕೊಟ್ಟ ರಜೆ: ಮನೆಯಲ್ಲೇ ಸಮಯ ಕಳೆಯುತ್ತಿರುವ ಶಿವಣ್ಣ

    ಕೊರೊನಾ ಕೊಟ್ಟ ರಜೆ: ಮನೆಯಲ್ಲೇ ಸಮಯ ಕಳೆಯುತ್ತಿರುವ ಶಿವಣ್ಣ

    ಕೊರೊನಾ ನಿಯಂತ್ರಿಸಲು ಸರ್ಕಾರ ವಿಧಿಸಿರುವ ನಿಯಮಗಳ ಪಾಲನೆ ಮಾಡುತ್ತಿರುವ ಶಿವರಾಜ್ ಕುಮಾರ್, ಕಳೆದ ಒಂದು ವಾರದಿಂದ ತಮ್ಮ ಬಹುತೇಕ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಆದರೆ ಈ ಸಮಯವನ್ನು ಅವರು ವ್ಯರ್ಥ ಮಾಡುತ್ತಿಲ್ಲ ಬದಲಿಗೆ ಕತೆ ಕೇಳುತ್ತಿದ್ದಾರೆ.

    ಕತೆ ಕೇಳಿ ಮುಗಿಸಿರುವ ಶಿವರಾಜ್ ಕುಮಾರ್

    ಕತೆ ಕೇಳಿ ಮುಗಿಸಿರುವ ಶಿವರಾಜ್ ಕುಮಾರ್

    ಹೌದು, ದ್ರೋಣ ಬಿಡುಗಡೆ ನಂತರ ಸಾಲು-ಸಾಲು ಚಿತ್ರಗಳು ಶಿವರಾಜ್ ಕುಮಾರ್ ಅವರ ಕೈಯಲ್ಲಿವೆ. ಸದ್ಯಕ್ಕೆ ಅವರು ಆರ್‌ಡಿಎಕ್ಸ್‌ ಸಿನಿಮಾದ ಕತೆ ಕೇಳಿ ಮುಗಿಸಿದ್ದಾರೆ. ಇದಕ್ಕೆ ಸಹಿ ಕೂಡ ಆಗಿದೆ. ಕೊರೊನಾ ಭೀತಿ ಮುಗಿದ ನಂತರ ಮುಹೂರ್ತ ನಡೆಯುವ ಸಾಧ್ಯತೆ ಇದೆ.

    ರಥಾವರ ನಿರ್ದೇಕರ ಜೊತೆ ಕುತೂಹಲಕಾರಿ ಸಿನಿಮಾ

    ರಥಾವರ ನಿರ್ದೇಕರ ಜೊತೆ ಕುತೂಹಲಕಾರಿ ಸಿನಿಮಾ

    ಇನ್ನು 'ರಥಾವರ' ಸಿನಿಮಾ ನಿರ್ದೇಶಕ ಚಂದ್ರು ಅವರು ಕರಗ ಹಿನ್ನೆಲೆಯಾಗಿಟ್ಟುಕೊಂಡು ಕತೆಯನ್ನು ಶಿವರಾಜ್ ಕುಮಾರ್ ಅವರಿಗಾಗಿ ರೆಡಿ ಮಾಡಿದ್ದು, ಅದರ ಕತೆ ಕೇಳುವುದರಲ್ಲಿ ಶಿವಣ್ಣ ತೊಡಗಿಕೊಂಡಿದ್ದಾರೆ.

    ಎರಡು ರೀಮೇಕ್ ಸಿನಿಮಾಗಳಲ್ಲಿ ನಟನೆ ಸಾಧ್ಯತೆ

    ಎರಡು ರೀಮೇಕ್ ಸಿನಿಮಾಗಳಲ್ಲಿ ನಟನೆ ಸಾಧ್ಯತೆ

    ಇವೆರಡು ಮಾತ್ರವಲ್ಲದೆ ಇನ್ನೂ ಕೆಲವು ಚಿತ್ರಗಳು ಕತೆ ಕೇಳುವ, ಮಾತುಕತೆಯ ಹಂತದಲ್ಲಿದೆ. ಶಿವಣ್ಣ ಕವಚ ಸಿನಿಮಾ ಮೂಲಕ ರೀಮೇಕ್ ಚಿತ್ರಗಳತ್ತ ಹೊರಳಿದ್ದು, ತಮಿಳಿನ 'ಖೈದಿ' ಮತ್ತು ಅಸುರನ್ ಸಿನಿಮಾದ ಕನ್ನಡ ರೀಮೇಕ್‌ನಲ್ಲಿ ನಟಿಸುವ ಸಾಧ್ಯತೆ ಇದೆ.

    English summary
    Actor Shivraj Kumar listning to two new movie script. one is RDX and another one is based on traditional 'Karaga'.
    Friday, March 20, 2020, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X