ಕೊರೊನಾ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್ ಆದ ಕನ್ನಡದ ಪೋಷಕ ನಟ!

ಕನ್ನಡದ ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿರುವ ಶ್ರೀನಾಥ್ ವಸಿಷ್ಠ ಈಗ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ.

Recommended Video

ಶಿವಣ್ಣನ ಈ ದಾಖಲೆಯನ್ನು ಯಾವ ಭಾಷೆಯ ಯಾವ ನಟನೂ ಮಾಡಿಲ್ಲ | Shivarajkumar | Pratham | Oneindia Kannada

ತಮ್ಮ ಅಪಾರ್ಟ್‌ಮೆಂಟ್ ನಲ್ಲಿ ಇದ್ದ ಸೆಕ್ಯೂರಿಟಿ ಗಾರ್ಡ್ ಗೆ ಕೊರೊ‌ನಾ ಸೊಂಕು ತಗುಲಿದೆ. ಇತರ ಸಿಬ್ಬಂದಿ ಕ್ವಾರಟೈನ್ ನಲ್ಲಿ ಇದ್ದಾರೆ.‌ ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ವಾಸ ಮಾಡುತ್ತಿರುವ ನಿವಾಸಿಗಳೆ ಮಾಡಿಕೊಳ್ಳಬೇಕು ಎಂದು ಮನವಿ‌ ಮಾಡಲಾಗಿದೆ. ಹೀಗಾಗಿ ನಿವಾಸಿಗಳೆ ಆ‌ ಕೆಲಸ ಮಾಡುತ್ತಿದ್ದಾರೆ.

ನಟ ಶ್ರೀನಾಥ್ ವಸಿಷ್ಠ ಸಹ ಸೆಕ್ಯೂರಿಟಿ ಗಾರ್ಡ್ ಆಗಿ‌ ಕೆಲ ಕಾಲ ಕೆಲಸ ಮಾಡಿದ್ದಾರೆ. ತಮ್ಮ ಅನುಭವವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ಗೆ ಪಾಸಿಟಿವ್ ವರದಿ ಬಂದಿದೆ

ಸೆಕ್ಯೂರಿಟಿ ಗಾರ್ಡ್‌ಗೆ ಪಾಸಿಟಿವ್ ವರದಿ ಬಂದಿದೆ

ನಮ್ಮ ಅಪಾರ್ಟ್‌ಮೆಂಟ್‌ನ ಒಬ್ಬ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಆಗಿದೆ. ಇನ್ನುಳಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹಾಗಾಗಿ ಅಪಾರ್ಟ್‌ಮೆಂಟ್ ನಿವಾಸಿಗಳೇ ಸೆಕ್ಯೂರಿಟಿ ಗಾರ್ಡ್ ಕಾರ್ಯ ಮಾಡುವ ನಿಶ್ಚಯ ಮಾಡಿದ್ದೇವೆ ಎಂದು ಶ್ರೀನಾಥ್ ವಸಿಷ್ಠ ಬರೆದುಕೊಂಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿದ ನಟ

ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿದ ನಟ

ಇಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಾನು ಸೆಕ್ಯೂರಿಟಿ ಗಾರ್ಡ್ ಕಾರ್ಯ ಮಾಡಿದ್ದೇನೆ. ಎಲ್ಲರೂ ಈ ಕಾರ್ಯವನ್ನು ಹಂಚಿಕೊಂಡಿದ್ದು, 10 ದಿನಗಳ ಕಾಲ ಅಪಾರ್ಟ್‌ಮೆಂಟ್ ವಾಸಿಗಳೇ ಸೆಕ್ಯೂರಿಟಿ ಗಾರ್ಡ್ ಆಗಿರಲಿದ್ದಾರೆ ಎಂದಿದ್ದಾರೆ.

ಪುತ್ರ ಋತ್ವಿಕ್ ಸಹ ಸೆಕ್ಯೂರಿಟಿ ಗಾರ್ಡ್

ಪುತ್ರ ಋತ್ವಿಕ್ ಸಹ ಸೆಕ್ಯೂರಿಟಿ ಗಾರ್ಡ್

ನಾಳೆ ರಾತ್ರಿಯಿಂದ ನನ್ನ ಪುತ್ರ ಋತ್ವಿಕ್ ವಸಿಷ್ಠ ಸೆಕ್ಯೂರಿಟಿ ಗಾರ್ಡ್ ಮಾಡಲಿದ್ದಾರೆ. ಹೀಗೆ ಎಲ್ಲರೂ ಕೆಲಸವನ್ನು ಹಂಚಿಕೊಂಡಿದ್ದೇವೆ. ಇದೊಂದು ಹೊಸ ಅನುಭವ ಎಂದು ಶ್ರೀನಾಥ್ ವಸಿಷ್ಠ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಕೊರೊನಾ ಸ್ಪೋಟ

ಬೆಂಗಳೂರು ನಗರದಲ್ಲಿ ಕೊರೊನಾ ಸ್ಪೋಟ

ಬೆಂಗಳೂರಿನಲ್ಲಿ ಕೊರೊನಾ ವೈರಸ್ ತ್ವರಿತಗತಿಯಲ್ಲಿ ಹಬ್ಬುತ್ತಿದ್ದು, ದಿನೇ-ದಿನೇ ತೀವ್ರತೆ ಹೆಚ್ಚಿಸಿಕೊಳ್ಳುತ್ತಿದೆ. ಬೆಂಗಳೂರು ನಗರದಲ್ಲಿ ಈ ವರೆಗೆ (ಜುಲೈ 13) 19,702 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 321 ಮಂದಿ ಕೊರೊನಾ ಕಾರಣಕ್ಕೆ ಸಾವನ್ನಪ್ಪಿದ್ದಾರೆ.

More from Filmibeat

English summary
Actor Shrinath Vasishta become security guard for his apartment. He shares photo in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X