For Quick Alerts
  ALLOW NOTIFICATIONS  
  For Daily Alerts

  ಪುನೀತ್-ಪವನ್ ಜೋಡಿಯ 'ದ್ವಿತ್ವ' ಬಗ್ಗೆ ತಮಿಳು ನಟ ಸಿದ್ಧಾರ್ಥ್ ಹೇಳಿದ್ದೇನು?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಜೋಡಿಯ ಚಿತ್ರಕ್ಕೆ 'ದ್ವಿತ್ವ' ಎಂದು ಹೆಸರಿಡಲಾಗಿದೆ. ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಆರಂಭಿಕ ಹಂತದಲ್ಲೇ ಕುತೂಹಲ ಹೆಚ್ಚಿಸಿದೆ.

  ಟಲ್ ಹಾಗೂ ಪೋಸ್ಟರ್‌ನಿಂದ ವಿಶೇಷವಾಗಿ ಗಮನ ಸೆಳೆಯುತ್ತಿರುವ 'ದ್ವಿತ್ವ' ಚಿತ್ರದ ಬಗ್ಗೆ ತಮಿಳು ನಟ ಸಿದ್ಧಾರ್ಥ್ ಸಂತಸ ವ್ಯಕ್ತಪಡಿಸಿದ್ದಾರೆ.

  'ದ್ವಿತ್ವ' ಫಸ್ಟ್ ಲುಕ್: ಅಪ್ಪು ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ ವಿಜಯ್ ಕಿರಗಂದೂರ್'ದ್ವಿತ್ವ' ಫಸ್ಟ್ ಲುಕ್: ಅಪ್ಪು ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ ವಿಜಯ್ ಕಿರಗಂದೂರ್

  ''ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಇಬ್ಬರಿಗೂ ಆಲ್ ದಿ ಬೆಸ್ಟ್. ಕನ್ನಡ ಚಿತ್ರರಂಗದಿಂದ ವಿಶೇಷವಾದ ಸಿನಿಮಾಗಳು ಬರ್ತಾನೆ ಇದೆ'' ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

  ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ, ಸುರೇಶ್ ಸಂಕಲನವಿದೆ. ಪ್ರೀತಾ ಛಾಯಾಗ್ರಹಣವಿದೆ.

  ದ್ವಿತ್ವ ಎಂದರೇನು?

  'ದ್ವಿತ್ವ' ಎಂದರೆ ಎರಡು ರೀತಿಯ ವ್ಯಕ್ತಿತ್ವ ಎಂದು ಈ ಸಿನಿಮಾದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಒಬ್ಬನೇ ವ್ಯಕ್ತಿಯ ಎರಡು ಮುಖ ಅಥವಾ ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿ ಹೀಗೆ ಭಿನ್ನ ಅರ್ಥಗಳನ್ನು ಸೂಸುತ್ತಿದೆ ಈ ಹೆಸರು.

  Actor Siddharth React About Puneeth rajkumar and Pawan kumar movie Dvitva

  ಹೊಂಬಾಳೆ ಜೊತೆ ಐದನೇ ಚಿತ್ರ

  ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada

  ಹೊಂಬಾಳೆ ಫಿಲಂಸ್ ಜೊತೆ ನಿನ್ನಿಂದಲೇ ಚಿತ್ರದಿಂದ ಜರ್ನಿ ಶುರು ಮಾಡಿದ ಪುನೀತ್ ರಾಜ್ ಕುಮಾರ್, ರಾಜಕುಮಾರ, ಯುವರತ್ನ ಸಿನಿಮಾ ಮಾಡಿದರು. ಮತ್ತೆ ಸಂತೋಷ್ ಆನಂದ್ ರಾಮ್-ಪುನೀತ್ ಜೋಡಿಯ ಹೊಸ ಚಿತ್ರಕ್ಕೆ ಹೊಂಬಾಳೆ ಬಂಡವಾಳ ಹಾಕುತ್ತಿದೆ. ಈ ನಡುವೆ ಪವನ್-ಪುನೀತ್ ಜೊತೆಗಿನ ಚಿತ್ರಕ್ಕೂ ಹೊಂಬಾಳೆ ನಿರ್ಮಾಪಕರು. ಈ ಮೂಲಕ ಪವರ್ ಸ್ಟಾರ್ ಜೊತೆ ಇದು ಐದನೇ ಪ್ರಾಜೆಕ್ಟ್.

  English summary
  What south indian actor Siddharth says about Puneeth rajkumar and Pawan kumar movie Dvitva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X