For Quick Alerts
  ALLOW NOTIFICATIONS  
  For Daily Alerts

  ಇದ್ದಕ್ಕಿದ್ದಂತೆ ಸಿದ್ದಾರ್ಥ್ ಟ್ವಿಟ್ಟರ್ ಖಾತೆ ಮಾಯ! ಕಾರಣವೇನು?

  |

  ಬಹುಭಾಷಾ ನಟ ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ ಇದ್ದಕ್ಕಿದ್ದಂತೆ ಮಾಯವಾಗಿದೆ. ತಮ್ಮ ಖಾತೆಯನ್ನು ಸಿದ್ದಾರ್ಥ್ ಡಿಲೀಟ್ ಮಾಡಿಲ್ಲ, ಬದಲಿಗೆ ಟ್ವಿಟ್ಟರ್ ಸಂಸ್ಥೆಯೇ ಅಮಾನತ್ತು ಮಾಡಿದೆ.

  Bigg Boss House Romance video goes viral | FILMIBEAT KANNADA

  ಹೌದು, ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಸಕ್ರಿಯರಾಗಿದ್ದ ಸಿದ್ದಾರ್ಥ್ ರಾಜಕೀಯ, ಪ್ರಸ್ತುತ ಸನ್ನಿವೇಶ, ಧಾರ್ಮಿಕ ವಿಚಾರದ ಟ್ವೀಟ್‌ಗಳನ್ನು ನಿಯಮಿತವಾಗಿ ಮಾಡುತ್ತಲೇ ಇದ್ದರು.

  ಆದರೆ ಏಕಾ-ಏಕಿ ಸಿದ್ದಾರ್ಥ್ ಅವರ ಅವರ ಖಾತೆಯೇ ಕಣ್ಮರೆಯಾಗಿದೆ. @actor_siddharth ಹ್ಯಾಂಡಲ್‌ನಲ್ಲಿ ನಟ ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ ಇತ್ತು, ಆದರೆ ಈಗ ಕಣ್ಮರೆಯಾಗಿದೆ. ಸಿದ್ದಾರ್ಥ್ ಅವರು ಟ್ವೀಟ್‌ಗಳ ಮೂಲಕ ಮಾಡುತ್ತಿದ್ದ ಟೀಕೆಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

  ಕೇಂದ್ರ ಸರ್ಕಾರ ಟೀಕಿಸಿ ಟ್ವೀಟ್ ಮಾಡುತ್ತಿದ್ದ ಸಿದ್ದಾರ್ಥ್

  ಕೇಂದ್ರ ಸರ್ಕಾರ ಟೀಕಿಸಿ ಟ್ವೀಟ್ ಮಾಡುತ್ತಿದ್ದ ಸಿದ್ದಾರ್ಥ್

  ಸಿದ್ದಾರ್ಥ್ ಅವರ ಬಹುತೇಕ ಟ್ವೀಟ್‌ಗಳು ಕೇಂದ್ರ ಸರ್ಕಾರದ ವಿರೋಧದಲ್ಲಿ ಇರುತ್ತಿದ್ದವು. ತುಸು ಎಡ ಚಿಂತನೆಗಳ ಪರ ಒಲವಿದ್ದ ಸಿದ್ದಾರ್ಥ್ ಅವರು ಮೋದಿ ಅವರನ್ನೂ ಅವರ ಹೇಳಿಕೆಗಳನ್ನು ವಿಮರ್ಶಿಸಿ ಟ್ವೀಟ್ ಮಾಡುತ್ತಿದ್ದರು.

  ಬಿಜೆಪಿ-ಆರ್‌ಎಸ್‌ಎಸ್ ವಿರೋಧಿಸಿ ಟ್ವೀಟ್ ಮಾಡುತ್ತಿದ್ದರು

  ಬಿಜೆಪಿ-ಆರ್‌ಎಸ್‌ಎಸ್ ವಿರೋಧಿಸಿ ಟ್ವೀಟ್ ಮಾಡುತ್ತಿದ್ದರು

  ಬಿಜೆಪಿ-ಆರ್‌ಎಸ್‌ಎಸ್ ವಿರೋಧವಾಗಿಯೂ ಸಿದ್ದಾರ್ಥ್‌ ಅವರು ಟ್ವೀಟ್‌ಗಳನ್ನು ಮಾಡುತ್ತಿದ್ದರು. ಜಾತ್ಯಾತೀತತೆ ಮತ್ತು ಧಾರ್ಮಿಕ ನಿರಪೇಕ್ಷತೆಯ ಬಗ್ಗೆಯೂ ಅವರ ಟ್ವೀಟ್‌ಗಳನ್ನು ಮಾಡುತ್ತಿದ್ದರು. ಸಿದ್ದಾರ್ಥ್ ಅವರ ಟ್ವೀಟ್‌ಗಳಿಗೆ ಹಲವರು ವಿರೋಧಗಳನ್ನು ವ್ಯಕ್ತಪಡಿಸಿದ್ದರು.

  ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸಿದ್ದ ಸಿದ್ದಾರ್ಥ್‌

  ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸಿದ್ದ ಸಿದ್ದಾರ್ಥ್‌

  ಸಿದ್ದಾರ್ಥ್ ಅವರು ಕೇಂದ್ರ ಸರ್ಕಾರದ ಸಿಎಎ-ಎನ್‌ಆರ್‌ಸಿ ಅನ್ನು ತೀವ್ರವಾಗಿ ವಿರೋಧಿಸಿದ್ದರು. ಸಿಎಎ ವಿರುದ್ಧ ಹಲವು ಟ್ವೀಟ್‌ಗಳನ್ನು ಮಾಡಿದ್ದರು. ಅಷ್ಟೆ ಅಲ್ಲದೆ ಸಿಎಎ ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಸಿದ್ದಾರ್ಥ್ ವಿರುದ್ಧ ದೂರು ಸಹ ದಾಖಲಿಸಿದ್ದರು.

  ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಟ್ವೀಟ್

  ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಟ್ವೀಟ್

  ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಟ್ವೀಟ್‌ ಮಾಡಿದ್ದರಿಂದ ಸಿದ್ದಾರ್ಥ್ ಅವರ ಖಾತೆಯನ್ನು ಅಮಾನತ್ತು ಮಾಡಲಾಗಿದೆಯೇ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಟ್ವಿಟ್ಟರ್ ಅಧಿಕೃತ ಹೇಳಿಕೆ ನೀಡಿಲ್ಲ.

  ಮೂರು ತಮಿಳು ಸಿನಿಮಾದಲ್ಲಿ ಸಿದ್ದಾರ್ಥ್ ಬ್ಯುಸಿ

  ಮೂರು ತಮಿಳು ಸಿನಿಮಾದಲ್ಲಿ ಸಿದ್ದಾರ್ಥ್ ಬ್ಯುಸಿ

  ಪ್ರಸ್ತುತ ಸಿದ್ದಾರ್ಥ್ ಅವರು ಮೂರು ಪ್ರಮುಖ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೈತಾನ್‌ ಕಾ ಬಚ್ಚಾ, ಠಕ್ಕರ್ ಮತ್ತು ಕಮಲ್‌ಹಾಸನ್ ಅವರ ಇಂಡಿಯನ್ 2 ನಲ್ಲಿ ನಟನೆ ಮಾಡುತ್ತಿದ್ದಾರೆ.

  English summary
  Actor Siddharth's twitter account vanished all of a sudden. No official word from twitter or Siddharth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X