»   » ಸುದೀಪ್ ನಂತರ 1 ಮಿಲಿಯನ್ ಸಾಧನೆ ಮಾಡಿದ ಸುದೀಪ್ ಸಹನಟ

ಸುದೀಪ್ ನಂತರ 1 ಮಿಲಿಯನ್ ಸಾಧನೆ ಮಾಡಿದ ಸುದೀಪ್ ಸಹನಟ

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಕನ್ನಡದ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಹೊಸ ಸಾಧನೆ ಮಾಡಿದ್ದರು. ಈಗ ಸುದೀಪ್ ನಂತರ ಸುದೀಪ್ ಜೊತೆಯಲ್ಲಿ ಅಭಿನಯಿಸಿದ್ದ ನಟ ಕೂಡ ಈ ಸಾಧನೆ ಮಾಡಿದ್ದಾರೆ.

ಸುದೀಪ್ ಅವರ ಸಹನಟ ಎಂದಾಕ್ಷಣ ಕನ್ನಡದಲ್ಲಿ ಯಾರಪ್ಪಾ ಈ ಸಾಧನೆ ಮಾಡಿದವರು ಎಂದು ತಲೆಕೆಡಸಿಕೊಳ್ಳಬೇಡಿ. 1 ಮಿಲಿಯನ್ ಸಾಧನೆ ಮಾಡಿದ್ದು ಬಾಲಿವುಡ್ ನಟ ಸೋನು ಸೂದ್.

ಕಿಚ್ಚ ಸುದೀಪ್ 'ಟ್ವಿಟ್ಟರ್'ಗೆ ಬರಲು ಆ 'ಒಬ್ಬ' ನಟ ಕಾರಣ?

Actor Sonu Sood Reaches a million on twitter

ಹಿಂದಿ, ತಮಿಳು, ತೆಲುಗು, ಕನ್ನಡ ಹೀಗೆ ಎಲ್ಲ ಭಾಷೆಗಳಲ್ಲೂ ನಟಿಸಿರುವ ಸೋನು ಸೂದ್ ಅವರು ನಿನ್ನೆಯಷ್ಟೇ ತಮ್ಮ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆಯಲ್ಲಿ 1 ಮಿಲಿಯನ್ ಗೆ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟ ಸೋನು ಸೂದ್ ''ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ನಟರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ನಂ 1'

Actor Sonu Sood Reaches a million on twitter
Sudeep Taking High Revunue For Kotigobba 3 movie

ಅಂದ್ಹಾಗೆ, ಸೋನು ಸೂದ್ ಕನ್ನಡದಲ್ಲಿ ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಸುದೀಪ್ ಎದುರು ಖಳನಾಯಕನಾಗಿ ನಟಿಸಿದ್ದರು. ಈಗ ದರ್ಶನ್ ಅಭಿನಯಿಸುತ್ತಿರುವ ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

English summary
bollywood Actor Sonu Sood Reaches a million on twitter after Kannada Actor kiccha sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada