For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಸಹಾಯ ಮಾಡುತ್ತಿರುವುದೆಲ್ಲ ಪ್ರಚಾರಕ್ಕಾಗಿಯೇ? ಅನುಮಾನದ ಪ್ರಶ್ನೆಗೆ ತಿರುಗೇಟು ಕೊಟ್ಟ ನಟ

  |

  ಬಹುಭಾಷಾ ನಟ ಸೋನು ಸೂದ್ ಲಾಕ್ ಡೌನ್ ಬಳಿಕ ರಿಯಲ್ ಹೀರೋ ಆಗಿದ್ದಾರೆ. ಕೊರೊನಾ ಲಾಕ್ ಡೌನ್ ನಂತರ ಲಕ್ಷಾಂತರ ಜನರಿಗೆ ನೆರವಾಗುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ. ಕಷ್ಟದಲ್ಲಿದ್ದ ಕೂಲಿ ಕಾರ್ಮಿಕರನ್ನು ವಾಪಸ್ ಮನೆ ಸೇರಿಸುವ ಜೊತೆಗೆ, ಅವರ ಬದುಕಿಗೆ ನೆರವಾಗಿದ್ದಾರೆ.

  ಇದೀಗ ಸೋನು ಸೂದ್ ವಿದ್ಯಾರ್ಥಿಗಳು ಮತ್ತು ರೋಗಿಗಳು ಸೇರಿದಂತೆ ಕಷ್ಟ ಎಂದವರ ಸಹಾಯಕ್ಕೆ ದಾವಿಸುತ್ತಿದ್ದಾರೆ. ಬಡವರ ಕಷ್ಟಕ್ಕೆ ಸಹಾಯ ಮಾಡಲು ಸಹಾಯವಾಣಿಯನ್ನು ತೆರೆದಿದ್ದಾರೆ. ಆದರೆ ಸೋನು ಸೂದ್ ಮಾಡುತ್ತಿರುವ ಕೆಲಸ ಪ್ರಚಾರಕ್ಕಾಗಿ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭವಾಗಿದೆ.

  ದುರ್ಗಾ ಪೂಜೆ ಪೆಂಡಲ್‌ನಲ್ಲಿ ಪ್ರತಿಮೆ: 'ನನ್ನ ಜೀವನದ ಅತಿ ದೊಡ್ಡ ಪ್ರಶಸ್ತಿ' ಎಂದ ಸೋನು ಸೂದ್ದುರ್ಗಾ ಪೂಜೆ ಪೆಂಡಲ್‌ನಲ್ಲಿ ಪ್ರತಿಮೆ: 'ನನ್ನ ಜೀವನದ ಅತಿ ದೊಡ್ಡ ಪ್ರಶಸ್ತಿ' ಎಂದ ಸೋನು ಸೂದ್

  ಇತ್ತೀಚಿಗೆ ಸ್ನೇಹಲ್ ಎಂಬ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಸಹಾಯ ಮಾಡುವಂತೆ ಕೇಳಿ ಟ್ವೀಟ್ ಮಾಡಿದ್ದರು. ನಟ ಸೋನು ಸೂದ್ ತಕ್ಷಣ ಸ್ನೇಹಲ್ ಗೆ ಪ್ರತಿಕ್ರಿಯೆ ನೀಡಿ ಸಹಾಯ ಮಾಡುವುದಾಗಿ ಉತ್ತರಿಸಿದ್ದಾರೆ. ಸೋನು ಸೂದ್ ಪ್ರತಿಕ್ರಿಯೆ ಬಳಿಕ ನೆಟ್ಟಿಗರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  ಸಹಾಯ ಕೇಳಿ ಟ್ವೀಟ್ ಮಾಡಿದ ವ್ಯಕ್ತಿ ನಟ ಸೋನು ಸೂದ್ ಹೆಸರನ್ನು ಟ್ಯಾಗ್ ಮಾಡಿರಲಿಲ್ಲ, ಅಲ್ಲದೆ ಟ್ವೀಟ್ ಮಾಡಿದ ವ್ಯಕ್ತಿಗೆ ಕೇವಲ 2 ರಿಂದ 3 ಜನ ಮಾತ್ರ ಫಾಲೋವರ್ಸ್ ಇದ್ದಾರೆ. ಅಲ್ಲದೆ ಆ ವ್ಯಕ್ತಿ ಯಾವುದೇ ವಿಳಾಸ, ಫೋನ್ ನಂಬರ್ ತಿಳಿಸಿಲ್ಲ. ಆದರೆ ಸೋನು ಸೂದ್ ಹೇಗೆ ಅವರನ್ನು ಗುರುತಿಸಿ, ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಸಹಾಯ ಕೋರಿ ಈ ಹಿಂದೆ ಮಾಡಿದ ಸಾಕಷ್ಟು ಟ್ವೀಟ್ ಗಳು ಡಿಲೀಟ್ ಆಗಿವೆ. ಹೇಗೆ ಇವರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ನೆಟ್ಟಿಗರ ಪ್ರಶ್ನೆಗೆ ಸೋನು ಸೂದ್ ಸಾಕ್ಷಿ ಸಮೇತ ಉತ್ತರ ನೀಡಿದ್ದಾರೆ. ಸಹಾಯ ಕೋರಿ ಟ್ವೀಟ್ ಮಾಡಿದ್ದ ವ್ಯಕ್ತಿಯ ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ವಿಳಾಸ ಮತ್ತು ಚಿಕಿತ್ಸೆಯ ವಿವರದ ಸ್ಕ್ರೀನ್ ಶಾಟ್ ತೆಗೆದು ಹಂಚಿಕೊಂಡಿದ್ದಾರೆ. 1.5 ವರ್ಷದ ಮಗುವಿಗೆ ನಡೆಸಿದ ಚಿಕಿತ್ಸೆಯ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ.

  ಸ್ಕ್ರೀನ್ ಶಾಟ್ ಜೊತೆಗೆ ಖಡಕ್ ಉತ್ತರ ನೀಡಿದ್ದಾರೆ. "ಅದು ಅತ್ಯುತ್ತಮ ಭಾಗ ಸಹೋದರ. ನಾನು ಕಷ್ಟದಲ್ಲಿ ಇರುವವರನ್ನು ಕಂಡುಕೊಂಡಿದ್ದೇನೆ ಮತ್ತು ಅವರು ನನ್ನನ್ನು ಹೇಗಾದರೂ ಹುಡುಕುತ್ತಾರೆ. ಇದರ ಬಗ್ಗೆ ನಿಮಗೆ ಅರ್ಥವಾಗುವುದಿಲ್ಲ. ಟಾಮ್ ರೋಗಿಯು ಎಸ್ ಅರ್ ಸಿ ಸಿ ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಹಣ್ಣುಗಳನ್ನು ಕಳುಹಿಸಿ. ಜಾಸ್ತಿ ಫಾಲೋವರ್ಸ್ ಹಿಂದಿರುವವರು ನೀವು 2-3 ಫಾಲೋವರ್ಸ್ ಹೊಂದಿರುವವರಿಗೆ ಸಹಾಯ ಮಾಡಿದರೆ ಸಂತೋಷ ಪಡುತ್ತಾರೆ" ಎಂದು ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.

  English summary
  Actor Sonu Sood Shares proof as man accuses him. He says That’s the best part brother.I find a needy & they somehow find me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X