For Quick Alerts
  ALLOW NOTIFICATIONS  
  For Daily Alerts

  ವಿಜಯ್ ರಾಘವೇಂದ್ರಗೆ ಹುಟ್ಟುಹಬ್ಬದ ಸಂಭ್ರಮ: ಅಣ್ಣನಿಗೆ ತಮ್ಮನ ಪ್ರೀತಿಯ ವಿಶ್

  |

  ಸ್ಯಾಂಡಲ್ ವುಡ್ ಚಿನ್ನಾರಿ ಮುತ್ತ ಎಂದೇ ಖ್ಯಾತಿಗಳಿಸಿರುವ ನಟ ವಿಜಯ್ ರಾಘವೇಂದ್ರ ಅವರಿಗೆ ಇಂದು (ಮೇ 26) ಹುಟ್ಟುಹಬ್ಬದ ಸಂಭ್ರಮ. 42ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್ ರಾಘವೇಂದ್ರ ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ.

  ವಿಜಯ್ ರಾಘವೇಂದ್ರ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಚಲಿಸುವ ಮೋಡಗಳು ಸಿನಿಮಾ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ವಿಜಯ್ ರಾಘವೇಂದ್ರ ಬಳಿಕ ಸ್ಟಾರ್ ಕಲಾವಿದನಾಗಿ ಮಿಂಚಿದರು. ಮುಂದೆ ಓದಿ..

  ನಿಶ್ಯಬ್ದಂ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ, ಮತ್ಯಾರು?ನಿಶ್ಯಬ್ದಂ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ, ಮತ್ಯಾರು?

  ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಗೆದ್ದಿರುವ ನಟ

  ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಗೆದ್ದಿರುವ ನಟ

  ಚಿನ್ನಾರಿ ಮುತ್ತ ಸಿನಿಮಾಗಾಗಿ ವಿಜಯ್ ರಾಘವೇಂದ್ರ ಅತ್ಯುತ್ತಮ ಬಾಲನಟ ರಾಜ್ಯ ಪ್ರಶಸ್ತಿ ಮತ್ತು ಕೊಟ್ರೇಶಿ ಕನಸು ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಚಿನ್ನಾರಿ ಮುತ್ತ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಡುವ ಜೊತೆಗೆ ವಿಜಯ್ ರಾಘವೇಂದ್ರ ಚಿನ್ನಾರಿ ಮುತ್ತ ಎಂದೇ ಖ್ಯಾತಿಗಳಿಸಿದ್ದಾರೆ.

  'ನಿನಗಾಗಿ' ಮೂಲಕ ನಾಯಕನಾಗಿ ಎಂಟ್ರಿ

  'ನಿನಗಾಗಿ' ಮೂಲಕ ನಾಯಕನಾಗಿ ಎಂಟ್ರಿ

  1998ರಲ್ಲಿ ನಿನಗಾಗಿ ಸಿನಿಮಾ ಮೂಲಕ ನಾಯಕನಟನಾಗಿ ಬೆಳ್ಳಿ ಪರದೆಮೇಲೆ ಮಿಂಚಿದ ವಿಜಯ್ ರಾಘವೇಂದ್ರ ಅವರಿಗೆ ಮೊದಲ ಸಿನಿಮಾವೇ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಮಿಂಚಿರುವ ಈ ಸಿನಿಮಾ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾಗಿದೆ.

  'ಸೀತಾರಾಮ್ ಬಿನೋಯ್' ಚಿತ್ರದಲ್ಲಿ ನಟನೆ

  'ಸೀತಾರಾಮ್ ಬಿನೋಯ್' ಚಿತ್ರದಲ್ಲಿ ನಟನೆ

  ಸುಮಾರು 49 ಸಿನಿಮಾಗಳಲ್ಲಿ ನಟಿಸಿರುವ ಚಿನ್ನಾರಿ ಮುತ್ತ ಸದ್ಯ 50ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 50ನೇ ಸಿನಿಮಾ ಸೀತಾರಾಮ್ ಬಿನೋಯ್ ಚಿತ್ರದಲ್ಲಿ ವಿಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸೀತಾರಾಮ್ ಬಿನೋಯ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿಸಿದೆ. ಇದಲ್ಲದೆ ಮತ್ತೊಂದು ಸಿನಿಮಾ ವಿಜಯ್ ಕೈಯಲ್ಲಿದೆ. ನಟನೆ ಜೊತೆಗೆ ವಿಜಯ್ ಕಿಸ್ಮತ್ ಮೂಲಕ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ಅನೇಕ ಹಾಡುಗಳಿಗೆ ಧ್ವನಿ ನೀಡಿರುವ ವಿಜಯ್ ರಾಘವೇಂದ್ರ ಕಿರುತೆರೆ ಕಾರ್ಯಕ್ರಮಗಳಲ್ಲೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

  ಅಣ್ಣನಿಗೆ ತಮ್ಮನ ಪ್ರೀತಿಯ ವಿಶ್

  ಅಣ್ಣನಿಗೆ ತಮ್ಮನ ಪ್ರೀತಿಯ ವಿಶ್

  ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿಜಯ್ ರಾಘವೇಂದ್ರ ಅವರಿಗೆ ಸಹೋದರ ಶ್ರೀಮುರಳಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಣ್ಣನ ಜೊತೆ ಇರುವ ಸುಂದರ ಫೋಟೋ ಶೇರ್ ಮಾಡಿ, 'ಅಣ್ಣ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ಯಾವಾಗಲು ಸಂತೋಷದಿಂದ ಇರು. ಯಶಸ್ಸು ನಿನ್ನದಾಗಲಿ' ಎಂದು ಶುಭಹಾರೈಸಿದ್ದಾರೆ.

  ಮತ್ತೊಂದು ಮೈಲಿಗಲ್ಲು ತಲುಪಿದ ಉಪೇಂದ್ರ | Filmibeat Kannada
  ಪ್ರಜ್ವಲ್ ದೇವರಾಜ್- ನೆನಪಿರಲಿ ಪ್ರೇಮ್ ವಿಶ್

  ಪ್ರಜ್ವಲ್ ದೇವರಾಜ್- ನೆನಪಿರಲಿ ಪ್ರೇಮ್ ವಿಶ್

  ಇನ್ನು ವಿಜಯ್ ರಾಘವೇಂದ್ರ ಗೆಳೆಯರ ಬಳಗದವರಾದ ನಟ ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ಪ್ರೀತಿಯ ವಿಶ್ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಚೌಕ ಸಿನಿಮಾದ ಫೋಟೋ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ.

  English summary
  Kannada Actor Vijay Raghavendra celebrating his birthday today. Sri Murali birthday wishes to his brother Vijay Raghavendra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X