For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ ಉಗ್ರಂ ನಂತರ ಶೀಘ್ರಂ ಬರ್ತಾರಾ?

  By ಜೀವನರಸಿಕ
  |

  2014ರ ವರ್ಷ ಯಾರಿಗೆ ಅದೃಷ್ಟ ಕೈ ಕೊಡ್ತೋ ಮತ್ಯಾರಿಗೆ ಕೈ ಹಿಡೀತೋ ಗೊತ್ತಿಲ್ಲ. ಆದರೆ ಸೈಲೆಂಟ್ ಸ್ಟಾರ್ ಮುರಳಿಗೆ ಮಾತ್ರ ಭರ್ಜರಿ ಯಶಸ್ಸನ್ನ ತಂದುಕೊಡ್ತು. 2004ರಲ್ಲಿ ಬಂದ 'ಕಂಠಿ' ಸಿನಿಮಾದ ನಂತರ ಸ್ಯಾಂಡಲ್ ವುಡ್ ನಲ್ಲಿ ಮುರಳಿ ಅನ್ನೋ ನಟ ಮರಳಿ ಬರಲ್ಲ ಅಂದುಕೊಂಡಿದ್ದವರಿಗೆ ಸೈಲೆಂಟಾಗೆ ಉಗ್ರ ಶಾಕ್ ಕೊಟ್ರು ಮುರಳಿ.

  ಆದರೆ ಮುರಳಿಯ 'ಉಗ್ರಂ' ಯಶಸ್ವಿಯಾಗಿದ್ದು ನೋಡಿ ಹಂಡ್ರೆಡ್ ಡೇಸ್ ಜೋಶ್ ನೊಂದಿಗೆ ಉಗ್ರಂ ಸ್ಟಾರ್ ಶೀಘ್ರ ಮತ್ತೊಂದು ಸಿನಿಮಾ ಮೂಲಕ ಬರ್ತಾರೆ ಅಂದ್ರೆ ಮುರಳಿ ನಿಧಾನವೇ ಪ್ರಧಾನ ಅಂತಿದ್ದಾರೆ. ['ಉಗ್ರಂ ವೀರಂ'ಗೆ ಶ್ರೀಕಾರ ಹಾಕಿದ ಶ್ರೀಮುರಳಿ]

  ಇಲ್ಲಿಯವರೆಗೂ ಯಾವ ಹೊಸ ಸಿನಿಮಾವನ್ನೂ ಮುರಳಿ ಅನೌನ್ಸ್ ಮಾಡಿಲ್ಲ. ಮುರಳಿಗೆ ಒಂದು ಕಡೆ ದೊಡ್ಡ ಯಶಸ್ಸನ್ನ ಕಾಪಾಡಿಕೊಂಡು ಹೋಗೋ ಒತ್ತಡವಿದೆ. ಮತ್ತೊಂದು ಕಡೆ ಒಳ್ಳೆಯ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳೋದ್ರಲ್ಲಿ ಮುರಳಿ ತುಂಬಾನೇ ಚೂಸಿಯಾಗಿದ್ದಾರೆ ಅನ್ನಿಸ್ತಿದೆ.

  ಅದಕ್ಕಾಗೀನೇ ಸದ್ಯಕ್ಕೆ ಯಾವ ಸಿನಿಮಾವನ್ನ ಮುರಳಿ ಓಕೆ ಮಾಡಿಲ್ಲ ಅನ್ನಿಸ್ತಿದೆ. ಆದರೆ ಕೆಲವೇ ದಿನದಲ್ಲಿ ಹೊಸ ಸಿನಿಮಾ ಮೂಲಕ 'ಉಗ್ರಂ' ಮುರಳಿ ಶೀಘ್ರಂ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಇದೆ. ಅಲ್ಲಿಯವರೆಗೂ ಅವರ ಅಭಿಮಾನಿಗಳು ಕಾಯದೆ ವಿಧಿಯಿಲ್ಲ.

  English summary
  After success of Kannada movie 'Ugramm' actor Sri Murali is no hurry to sign for next. The actor is making her move very carefully and has become very choosy. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X