ಭರಾಟೆ ಚಿತ್ರದ 'ಆಕ್ಷನ್ ಟ್ರೈಲರ್' ರಿಲೀಸ್ ಮಾಡುವ ನಟರು ಮತ್ತು ನಿರ್ಮಾಪಕರು ಇವರೆ

ಭರಾಟೆ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೆ ಮೇಕಿಂಗ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಭರಾಟೆ ಈಗ ಟ್ರೈಲರ್ ರಿಲೀಸ್ ಗೆ ಭರ್ಜರಿ ತಯಾರಿಮಾಡಿಕೊಳ್ಳುತ್ತಿದೆ. ವಿಶೇಷ ಅಂದ್ರೆ ಇದು ಬರಿ ಟ್ರೈಲರ್ ಅಲ್ಲ ಆಕ್ಷನ್ ಟ್ರೈಲರ್ ಆಗಿದೆ. ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಭರಾಟೆ ಕನ್ನಡ ಚಿತ್ರಪ್ರಿಯರಲ್ಲಿ ಭಾರಿ ಕತೂಹಲ ಮೂಡಿಸಿದೆ.

ಸದ್ಯ ಟ್ರೈಲರ್ ರಿಲೀಸ್ ಗೆ ಡೇಟ್ ಫಿಕ್ಸ್ ಮಾಡಿರುವ ಚಿತ್ರತಂಡ ಅತಿಥಿಗಳ ಲಿಸ್ಟ್ ಅನ್ನು ದೊಡ್ಡದಾಗಿ ಮಾಡಿದೆ. ಸ್ಯಾಂಡಲ್ ವುಡ್ ನ ಸಾಕಷ್ಟು ನಟರು ಮತ್ತು ನಿರ್ಮಾಪಕರು ಸೇರಿ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ. ಹೌದು, ನಟ ದುನಿಯ ವಿಜಯ್, ನೀನಾಸಂ ಸತೀಶ್, ಧನಂಜಯ್, ಧನ್ವೀರ್, ಕೆಂಡಸಂಪಿಕೆ ಸಂತೋಷ್, ರಾಜ್ ವರ್ಧನ್, ಯುವ ರಾಜ್ ಕುಮಾರ್ ಮತ್ತು ನಿರ್ಮಾಪಕರಾದ ಕೆಪಿಶ್ರೀಕಾಂತ್, ಉಮಾಪತಿ, ಉದಯ್ ಮೆಹ್ತಾ, ಆ ಆರ್ ಚಂದ್ರ ಶೇಖರ್ ಹಾಗೂ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ, ಹರಿ ಸಂತೋಷ್, ಡಿ ಸತ್ಯ ಪ್ರಕಾಶ್ ಭರಾಟೆ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

actor Sri Murali starrer Bharate movie trailer will release by stars, directors and producers

ಭರಾಟೆ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಅತಿಥಿಗಳ ಲಿಸ್ಟ್ ಇದೆ. ಅಂದ್ಹಾಗೆ ಚಿತ್ರದ ಟ್ರೈಲರ್ ಮುಂದಿನ ತಿಂಗಳು ಮೊದಲ ದಿನ ಅಂದ್ರೆ ಅಕ್ಟೋಬರ್ 1ಕ್ಕೆ ರಿಲೀಸ್ ಮಾಡುತ್ತಿದೆ. ಈ ಹಿಂದೆ ಚಿತ್ರದ ಹಾಡನ್ನು ರಿಲೀಸ್ ಮಾಡಲು ನಿರ್ದೇಶಕರಾದ ತರುಣ್ ಸುಧೀರ್, ನರ್ತನ್ ಮತ್ತು ಮಹೇಶ್ ಕುಮಾರ್ ಅತಿಥಿಗಳಾಗಿ ಬಂದಿದ್ದರು. ಈಗ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಗಣ್ಯರ ದೊಡ್ಡ ಪಟ್ಟಿಯೆ ಇದೆ.

ಈಗಾಗಲೆ ಚಿತ್ರದಿಂದ ಎರಡು ಹಾಡುಗಳು ತೆರೆಗೆ ಬಂದಿದ್ದು ಗಾನಪ್ರಿಯರ ಮನ ಗೆದ್ದಿವೆ. ಈಗಾಗೆಲೆ ಬಾರಿ ನಿರೀಕ್ಷೆ ಮೂಡಿಸಿರುವ ಭರಾಟೆ ಮುಂದಿನ ತಿಂಗಳು ಮಧ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಕಿಸ್ ಖ್ಯಾತಿಯ ನಟಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಅಂದ್ರೆ ಚಿತ್ರದಲ್ಲಿ ಬರೋಬ್ಬರಿ 10 ಜನ ಖಳ ನಟರು ಕಾಣಿಸಿಕೊಂಡಿದ್ದಾರೆ.

More from Filmibeat

English summary
Sri Murali starrer Bharate movie trailer will release by sandalwood stars, directors and producers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X