"ಶ್ರೀಧರ್ ನಾಯಕ್‌ಗೆ ಹುಡುಗಿಯರ ಸಹವಾಸ ಇತ್ತು"; ಪತಿ ನಿಧನದ ಬಳಿಕ ಪತ್ನಿ ಆಡಿಯೋ ವೈರಲ್
ಕಿರುತೆರೆ ನಟ ಶ್ರೀಧರ್ ನಾಯಕ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸ್ಪುರದ್ರೂಪಿಯಾಗಿದ್ದ ನಟ ಇದ್ದಕ್ಕಿದ್ದ ಹಾಗೇ ಗುರುತೇ ಸಿಗದ ಹಾಗೆ ಆಗಿದ್ದರು. ಮಾತಾಡುವುದಕ್ಕೂ ಕಷ್ಟ ಪಡುತ್ತಿದ್ದರು. ಎದ್ದು ನಿಲ್ಲುವುದಕ್ಕೂ ಆಗದಷ್ಟೇ ಕಷ್ಟ ಪಡುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾಗಿರುವ ನಟ ಶ್ರೀಧರ್ ದಿಢೀರನೇ ಇಷ್ಟೊಂದು ಬದಲಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಯಲಹಂಕದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಶ್ರೀಧರ್ ನಾಯಕ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಿನ್ನೆ (ಮೇ 26) ರಾತ್ರಿ 10 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಎಟಮಿನ್ ಹಾಗೂ ಆರೋಗ್ಯಕರ ಆಹಾರದ ಕೊರತೆಯಿಂದ ಪರಿಸ್ಥಿತಿ ಹೀಗಾಗಿದ್ದಾಗಿ ಹೇಳಿಕೊಂಡಿದ್ದರು. ಇಷ್ಟೇ ಅಲ್ಲದೆ ತನ್ನ ಪತ್ನಿಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಪತ್ನಿ ತನ್ನನ್ನು ಬಿಟ್ಟು ಹೋದರು ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದರು.

ಈಗ ಶ್ರೀಧರ್ ನಾಯಕ್ ಅವರ ನಿಧನದ ಬಳಿಕ ಅವರ ಪತ್ನಿ ಜ್ಯೋತಿಯವರ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಪತಿ ಶ್ರೀಧರ್ ನಾಯಕ್ ಅವರಿಗಿದ್ದ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತಾಡಿದ್ದಾರೆ. ಇಷ್ಟೇ ಅಲ್ಲದೆ, ಶ್ರೀಧರ್‌ಗೆ ಹುಡುಗಿಯರ ಸಹವಾಸ ಇತ್ತು ಎಂದು ಆರೋಪಿಸಿದ್ದಾಗಿ ವರದಿಯಾಗಿದೆ. ಹಾಗಿದ್ದರೆ, ಪತ್ನಿ ಜ್ಯೋತಿ ಆಡಿಯೋದಲ್ಲಿ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.
ಶ್ರೀಧರ್ ನಾಯಕ್ ಹಾಗೂ ಜ್ಯೋತಿ ಇಬ್ಬರೂ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದರು. ಆ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಕೇವಲ ಎರಡು ವರ್ಷಗಳಲ್ಲಿಯೇ ಪತ್ನಿ ಜ್ಯೋತಿ ಹಾಗೂ ಮಗನಿಂದ ದೂರವಾಗಿದ್ದರು. ಚಿಕ್ಕ ಪುಟ್ಟ ವಿಚಾರಕ್ಕೆ ಶ್ರೀಧರ್ ನಾಯಕ್ ಗಲಾಟೆ ಮಾಡುತ್ತಿದ್ದರು ಎಂದು ಪತ್ನಿ ಜ್ಯೋತಿ ಆಡಿಯೋದಲ್ಲಿ ಆರೋಪಿದ್ದಾರೆ.

ಹಾಗೇ, ತನಗೆ ಬೇರೆ ಹುಡುಗಿಯೊಂದಿಗೆ ಸಂಬಂಧವಿದೆ ಎಂದು ಶ್ರೀಧರ್ ನಾಯಕ್ ಪತ್ನಿಯಿಂದ ದೂರುವಾಗಿದ್ದರು. ಈ ಕಾರಣಕ್ಕೆ ತನ್ನ ಹಾಗೂ ಮಗನ ಬದುಕು ಮುಖ್ಯ ಆಗಿದ್ದರಿಂದ ದೂರ ಉಳಿದಿದ್ದು, ಇನ್ನೂ ಒಂಟಿಯಾಗಿಯೇ ಜೀವನ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಶ್ರೀಧರ್‌ಗೆ ಹುಡುಗಿಯರ ಸಹವಾಸ ಇತ್ತು. HIV induces Informa ಹಾಗೂ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಪತ್ನಿ ಆಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಈ ವಿಡಿಯೋದಲ್ಲಿ ಶ್ರೀಧರ್ ನಾಯಕ್ ಪತ್ನಿ ಜ್ಯೋತಿ ಭಾವುಕರಾಗಿ ಮಾತಾಡಿದ್ದಾರೆ. "ಮದುವೆಯಾದ ಒಂದು ತಿಂಗಳಲ್ಲಿಯೇ ಶ್ರೀಧರನ ರೀತಿ ನೀತಿಯಲ್ಲಿ ಬದಲಾವಣೆ ಆಗುವುದನ್ನು ಕಂಡುಕೊಳ್ಳುವುದಕ್ಕೆ ಪ್ರಾರಂಭ ಮಾಡಿದೆ. ಇವನು ಆತರ ಇಲ್ಲ ಬೇರೆ ತರ ಇದ್ದಾನೆ ಅಂತ ಅನಿಸೋಕೆ ಶುರುವಾಯ್ತು. ಈಗ ಯೂಟ್ಯೂಬ್‌ನಲ್ಲಿ ಏನು ಹೇಳಿಕೆಗಳನ್ನು ಕೊಡುತ್ತಿದ್ದಾರೋ ಅದು ಖಂಡಿತವಾಗಿಯೂ ನನ್ನ ತಂದೆ ಆಣೆಗೂ, ಮಗನ ಆಣೆಗೂ ಸುಳ್ಳು." ಎಂದು ಜ್ಯೋತಿ ಬಿಡುಗಡೆ ಮಾಡಿದ ಆಡಿಯೋದಲ್ಲಿ ಹೇಳಿದ್ದರು.
"ಅವನಾಗೇ ಬಂದು ನನ್ನನ್ನು ಮದುವೆಯಾದ. ಆಮೇಲೆ ಅವನಾಗೇ ಬಂದು ನಿನ್ನ ಮೇಲೆ ಯಾವುದೇ ಪ್ರೀತಿಯಿಲ್ಲ ಅಂತ ಹೇಳಿದ. ಮದುವೆ ಮಾಡಿಕೊಳ್ಳಬೇಕಿತ್ತು. ನಿನ್ನನ್ನು ಕೇಳಿದೆ, ನೀನ್ಯಾಕೆ ಮಾಡಿಕೊಂಡೆ ಅಂತ ಹೇಳಿದೆ. 11 ವರ್ಷದ ಜೀವನದಲ್ಲಿ ಬೇಕಾದಷ್ಟು ನಡೆದಿದೆ. ಎಲ್ಲರ ಜೀವನದಲ್ಲೂ ಇರುತ್ತೆ ಎಂದು ನಾನು ಅಂದುಕೊಂಡೆ. ನಾನು ಅಪ್ಪ, ಅಣ್ಣ ತಮ್ಮಂದಿರಿಂದ ಹಿಡಿದು ಯಾರ ಹತ್ತಿರವೂ ಹೇಳಿಕೊಂಡಿಲ್ಲ. ನಾನು ಕೆಲಸ ಮಾಡುವ ಜಾಗದಲ್ಲಿಯೂ ತೋರಿಸಿಕೊಂಡಿಲ್ಲ." ಎಂದು ಈ ಆಡಿಯೋದಲ್ಲಿ ಜ್ಯೋತಿ ಹೇಳಿಕೊಂಡಿದ್ದರು.


Click it and Unblock the Notifications











