ಕೆಜಿಎಫ್ ಬಗ್ಗೆ ಶ್ರೀಮುರಳಿ ಎದೆ ತಟ್ಟಿ ಹೇಳಿದ್ದೇನು?

Recommended Video

ಕೆಜಿಎಫ್ ಬಗ್ಗೆ ಶ್ರೀಮುರಳಿ ಎದೆ ತಟ್ಟಿ ಹೇಳಿದ್ದೇನು? | FILMIBEAT KANNADA

ಯಶ್ ಕೆಜಿಎಫ್ ಸಿನಿಮಾ ಗಡಿದಾಟಿ ಹೋಗಿದೆ. ಭಾಷೆಯ ಹಂಗಿಲ್ಲದೇ ಎಲ್ಲ ಭಾಷಿಗರು ಮೆಚ್ಚಿಕೊಳ್ಳುವಂತಾಗಿದೆ. ಕರ್ನಾಟಕದಿಂದ ಹೊರಗೆ, ಕನ್ನಡ ಸಿನಿಮಾ ಭಾರಿ ಸದ್ದು ಮಾಡುತ್ತಿರುವುದು ನಿಜಕ್ಕೂ ಸ್ಯಾಂಡಲ್ ವುಡ್ ಗೆ ಹೆಮ್ಮೆ ತಂದಿದೆ.

ಇದನ್ನ ಬರಿ, ಜನರು ಅಥವಾ ಯಶ್ ಅಭಿಮಾನಿಗಳು ಮಾತ್ರ ಹೇಳುತ್ತಿಲ್ಲ. ಇಡೀ ಸ್ಯಾಂಡಲ್ ವುಡ್ ಇಂಡಸ್ಟ್ರಿ ಹೇಳುತ್ತಿದೆ. ಇದು ಯಶ್ ಸಿನಿಮಾ ಅಲ್ಲ, ಕನ್ನಡ ಸಿನಿಮಾ ಎಂದು ಎದೆ ತಟ್ಟಿ ಕಲಾವಿದರು ಮಾತನಾಡುತ್ತಿದ್ದಾರೆ.

ಹೌದು, 37ನೇ ವರ್ಷ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿರುವ ನಟ ಶ್ರೀಮುರಳಿ, ಯಶ್ ಕೆಜಿಎಫ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಒಂದೊಳ್ಳೆ ಸಿನಿಮಾ ಬಂದಾಗ, ಬನ್ನಿ ನಮ್ಮ ಕನ್ನಡ ಸಿನಿಮಾ ಬಂದಿದೆ, ಎಲ್ಲರೂ ಹೋಗೋಣ ಅನ್ನಬೇಕು ಅಂತ ಹೇಳಿದ್ದೆ. ಈಗ ಅದೇ ರೀತಿ, 'ಕೆಜಿಎಫ್' ಸಿನಿಮಾ ಬಂದಿದೆ. ಎದೆ ತಟ್ಟಿ ಹೇಳಬೇಕಿದೆ. ಬನ್ನಿ ನಮ್ಮ ಕೆಜಿಎಫ್ ಸಿನಿಮಾಗೆ ಹೋಗೋಣ' ಅಂತ ನಟ ಶ್ರೀಮುರಳಿ ಸಂತಸ ವ್ಯಕ್ತಪಡಿಸಿದ್ದಾರೆ.

actor srimurali appreciate to kgf

''ಕೆಜಿಎಫ್ ಎಷ್ಟು ಸದ್ದು ಮಾಡ್ತಿದೆ, ಅಷ್ಟೇ ಯಶಸ್ಸು ಕಾಣುತ್ತೆ. ಅಷ್ಟೇ ಅದ್ಧೂರಿಯಾಗಿರುತ್ತೆ ಇದನ್ನ ನಾವು ಕೂಡ ನೋಡ್ತೀವಿ'' ಎಂದು ಶ್ರೀಮುರಳಿ ಕೆಜಿಎಫ್ ಚಿತ್ರತಂಡಕ್ಕೆ ಶಬ್ಬಾಶ್ ಎಂದಿದ್ದಾರೆ.

ಮತ್ತೊಂದೆಡೆ ಸತೀಶ್ ನೀನಾಸಂ ಕೂಡ ಕೆಜಿಎಫ್ ಚಿತ್ರವನ್ನ ಮೆಚ್ಚಿಕೊಂಡಿದ್ದು, ''ಅದೇ ರೀತಿ ಬೇರೆ ಸಿನಿಮಾಗಳು ಆಗ್ಬೇಕು, ನನ್ನ ಚಿತ್ರಗಳು ಹಾಗೆ ಪ್ರಚಾರ ಮಾಡ್ತೀವಿ, ನಾನು ಕೂಡ ಬೇರೆ ಇಂಡಸ್ಟ್ರಿಯಲ್ಲಿ ಸದ್ದು ಮಾಡಿಯೇ ವಾಪಸ್ ಬರ್ತೀನಿ'' ಎಂದಿದ್ದಾರೆ.

actor srimurali appreciate to kgf

ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ತೆರೆಕಾಣ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

More from Filmibeat

English summary
Kannada actor srimurali and sathish ninasam appreciated about yash starrer kgf movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X