ಮತ್ತೆ ಸಿಂಪಲ್ ಸುನಿ ಚಿತ್ರದಲ್ಲಿ ಶ್ರೀನಗರ ಕಿಟ್ಟಿ

ನಿರ್ದೇಶಕ ಸಿಂಪಲ್ ಸುನಿ ಎರಡನೇ ಸಿನಿಮಾ 'ಬಹುಪರಾಕ್' ಈ ಚಿತ್ರದಲ್ಲಿ ನಾಯಕನಾಗಿದ್ದು, ಶ್ರೀನಗರ ಕಿಟ್ಟಿ. ಆ ಸಿನಿಮಾದಲ್ಲಿ ಕಿಟ್ಟಿ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

'ಬಹುಪರಾಕ್' ನಂತರ ಮತ್ತೆ ಸಿಂಪಲ್ ಸುನಿ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸುನಿ ನಿರ್ದೇಶನದ ಚಿತ್ರದಲ್ಲಿ ಕಿಟ್ಟಿ ನಾಯಕನಾಗಿಲ್ಲ. ಬದಲಿಗೆ ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸುನಿ ಈಗ 'ಅವತಾರ್ ಪುರುಷ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ಶರಣ್ ನಾಯಕನಾಗಿದ್ದಾರೆ. ಚಿತ್ರದ ಒಂದು ಗಂಭೀರವಾದ ಪಾತ್ರದಲ್ಲಿ ಕಿಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಇಂದು (ಜುಲೈ 8) ರಂದು ಕಿಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಅವರ ಪೋಸ್ಟರ್ ಬಿಡುಗಡೆಯಾಗಿದೆ.

actor srinagar kitty playing special role in avathar purusha movie

ಪೋಸ್ಟರ್ ತುಂಬ ವಿಭಿನ್ನವಾಗಿದೆ. ಚಿತ್ರದ ಕಿಟ್ಟಿ ಲುಕ್ ಗಮನ ಸೆಳೆಯುತ್ತಿದೆ. ವಿಭೂತಿ ಹಚ್ಚಿಕೊಂಡು, ಕಪ್ಪು ವಸ್ತ್ರ ಧರಿಸಿ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಅವರ ಪಕ್ಕ ಕವಡೆ ಹಾಗೂ ಬೆಂಕಿಯ ಪಂಜು ಇದೆ.

ಅಂದಹಾಗೆ, ಈ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಆಶಿಕಾ ರಂಗನಾಥ್ ಸಿನಿಮಾದ ನಾಯಕಿಯಾಗಿದ್ದಾರೆ. 'ರಾಂಬೋ 2' ಬಳಿಕ ಮತ್ತೆ ಶರಣ್ ಮತ್ತು ಆಶಿಕಾ ಒಂದಾಗಿದ್ದಾರೆ.

More from Filmibeat

English summary
Kannada actor Srinagar Kitty playing special role in 'Avathar purusha' movie. Sharan and Ashika Ranganath starring 'Avathar purusha' is directing by suni.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X