ಛೇ 'ರಾಜ್-ವಿಷ್ಣು'ಗೆ ರೆಬೆಲ್ ಸ್ಟಾರ್ ಅಂಬರೀಶ್ ಸಾಥ್ ಕೊಡಲ್ವಂತೆ

By Suneetha

ಶರಣ್-ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ತಮಿಳು 'ರಜನಿ ಮುರುಗನ್' ರೀಮೇಕ್ 'ರಾಜ್ ವಿಷ್ಣು' ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸದ್ಯಕ್ಕೆ ಟಾಕಿ ಪೋರ್ಷನ್ ಕೆಲಸಗಳಲ್ಲಿ ಚಿತ್ರತಂಡ ಬಿಜಿಯಾಗಿದೆ.

ಈ ಚಿತ್ರದ ಲೇಟೆಸ್ಟ್ ಮಾಹಿತಿ ಏನಂದ್ರೆ, ಈ ಮೊದಲು ಚಿತ್ರದಲ್ಲಿ ಶರಣ್ ಅವರ ಅಜ್ಜನ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿ ಇತ್ತು. ಆದರೆ ಇದೀಗ ಕೆಲವು ಅನಿವಾರ್ಯ ಕಾರಣಗಳಿಂದ ಅಂಬರೀಶ್ ಅವರ ಜಾಗಕ್ಕೆ ಹಿರಿಯ ನಟ ಶ್ರೀನಿವಾಸಮೂರ್ತಿ ಅವರನ್ನು ಹಾಕಿಕೊಳ್ಳಲಾಗಿದೆ.['ರಾಜ್-ವಿಷ್ಣು'ಗೆ ಮುರಳಿ ಕಡೆಯಿಂದ ಕೂಡ ಒಂದು ಸಲಾಮ್]

Actor Srinivasa Murthy replaces Ambareesh in Sharan's 'Raj Vishnu'

ಅಂದಹಾಗೆ ವಿಶೇಷವಾಗಿ ಈ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಅತಿಥಿ ಪಾತ್ರ ವಹಿಸಿದ್ದಾರೆ. ಈಗಾಗಲೇ ನಟ ಶ್ರೀಮುರಳಿ, ಚಿಕ್ಕಣ್ಣ ಮತ್ತು ಶರಣ್ ಅವರ ಭಾಗದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆಸಲಾಗಿತ್ತು.[ಶರಣ್ 'ರಾಜ್ ವಿಷ್ಣು'ನಿಂದ ಮಲ್ಲು ಕುಟ್ಟಿ ರೆಮ್ಯಾ ನಂಬೀಸನ್ ಔಟ್]

Actor Srinivasa Murthy replaces Ambareesh in Sharan's 'Raj Vishnu'

ಇನ್ನು ಇದೇ ಮೊದಲ ಬಾರಿಗೆ ಮರಾಠಿ ನಟಿ ವೈಭವಿ ಶಾಂಡಿಲ್ಯ ಅವರು ಶರಣ್ ಅವರ ಜೊತೆ ಡ್ಯುಯೆಟ್ ಹಾಡಿದ್ದು, ರವಿಶಂಕರ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ರಾಮು ಅವರು ಬಂಡವಾಳ ಹೂಡಿದ್ದು, ಕೆ.ಮಾದೇಶ್ ಅವರು ನಿರ್ದೇಶನ ಮಾಡಿದ್ದಾರೆ.

More from Filmibeat

English summary
Actor Ambareesh was supposed to play Actor Sharan's grand father in Kannada movie 'Raj-Vishnu' which is the remake of Tamil hit 'Rajani Murugan'. But due to various reasons, senior actor Srinivasamurthy has played the role of Sharan's grand father in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X