ಅಪ್ಪನ ಹುಟ್ಟುಹಬ್ಬ ಸ್ಮರಣಾರ್ಥ ಕೋವಿಡ್ ಲಸಿಕೆ ಪಡೆದ ಸೃಜನ್ ಲೋಕೇಶ್

ಕನ್ನಡ ಚಿತ್ರರಂಗದ ಖ್ಯಾತ ನಟ ಲೋಕೇಶ್ ದೈಹಿಕ ಇಲ್ಲವಾದರೂ ಅವರು ನಟಿಸಿದ ಚಿತ್ರಗಳು ಹಾಗೂ ಪಾತ್ರಗಳು ಕನ್ನಡ ಕಲಾರಸಿಕರನ್ನು ಸದಾ ಕಾಡುತ್ತದೆ. ಭೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆತಿಮ್ಮ, ಬ್ಯಾಂಕರ್ ಮಾರ್ಗಯ್ಯ ಚಿತ್ರಗಳಲ್ಲಿನ ಲೋಕೇಶ್ ಅವರ ಪಾತ್ರಗಳು ಆಲ್‌ ಟೈಂ ಫೆವರೀಟ್.

ಕನ್ನಡದ ಮೊದಲ ನಾಯಕನಟ ಸುಬ್ಬಯ್ಯ ನಾಯ್ಡು ಅವರ ಮಗ ಲೋಕೇಶ್. 1958ರಲ್ಲಿ 'ಭಕ್ತ ಪ್ರಹ್ಲಾದ' ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಲೋಕೇಶ್ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇಂತಹ ಅದ್ಭುತ ಕಲಾವಿದನಿಗೆ ಇಂದು ಜನುಮದಿನ. 1947ರ ಮೇ 19 ರಂದು ಲೋಕೇಶ್ ಜನಿಸಿದರು. ಲೋಕೇಶ್ ನಮ್ಮೊಂದಿಗೆ ಇದ್ದಿದ್ದರೆ 74ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯ ಆಟ 57ನೇ ವಯಸ್ಸಿನಲ್ಲಿ ನಿಧನರಾದರು.2004 ಅಕ್ಟೋಬರ್ 4 ರಂದು ಕೊನೆಯುಸಿರೆಳೆದರು.

Actor Srujan Lokesh Got Covid 19 Vaccine on His father Birthday

ಅಪ್ಪನ ಹುಟ್ಟುಹಬ್ಬದ ಸ್ಮರಣಾರ್ಥ ಸೃಜನ್ ಲೋಕೇಶ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಕೊರೊನಾ ರೋಗದ ವಿರುದ್ಧ ಹೋರಾಡಲು ವ್ಯಾಕ್ಸಿನ್ ಸಹಕಾರಿಯಾಗಲಿದ್ದು, ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ.

ಕೋವಿಡ್ ಲಸಿಕೆ ಪಡೆದ ಸೃಜನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ತಂದೆಯನ್ನು ನೆನೆಪಿಸಿಕೊಂಡಿದ್ದಾರೆ. ''ನೀವು ಇಂದು ನಮ್ಮೊಂದಿಗೆ ಇದ್ದಿದ್ದರೆ ನಿಮಗೆ 74 ವರ್ಷವಾಗಿರುತಿತ್ತು ಈ ದಿನವನ್ನು ಸ್ಮರಣೀಯವಾಗಿಸಲು ನಾನು ಮೊದಲ ವ್ಯಾಕ್ಸಿನೇಷನ್ ಡೋಸ್ ತೆಗೆದುಕೊಂಡೆ. ಜನ್ಮದಿನದ ಶುಭಾಶಯಗಳು ಅಪ್ಪಾ. ಮಿಸ್ ಯು ಲಾಟ್ಸ್, ಲವ್ ಯು ಲಾಟ್ಸ್'' ಎಂದಿದ್ದಾರೆ.

Recommended Video

ಬಡವರ ಪಾಲಿಗೆ ರಿಯಲ್ ಹೀರೋ ಆದ Kiran Raj | Filmibeat Kannada

More from Filmibeat

English summary
Kannada actor Actor Srujan Lokesh Got Covid 19 Vaccine on His father Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X