ಹಲವು ದಿನಗಳ ಬಳಿಕ ಒಂದೆ ಫ್ರೇಮ್‌ನಲ್ಲಿ ದರ್ಶನ್, ಸುದೀಪ್: ಪೋಟೋ ವೈರಲ್!

ಕನ್ನಡ ‌ಸಿನಿಮಾರಂಗದಲ್ಲಿ ನಟ ದರ್ಶನ್ ಮತ್ತು ಸುದೀಪ್ ಎನ್ನುವುದು ದೊಡ್ಡ ಹೆಸರುಗಳು. ಇವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ ಕುತೂಹಲ ಇದ್ದೇ ಇರುತ್ತೆ. ನಟ ದರ್ಶನ್, ಸುದೀಪ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಇವರನ್ನು ಒಂದೇ ಫ್ರೇಮ್ ನಲ್ಲಿ ನೋಡಲು ಇಬ್ಬರ ಅಭಿಮಾನಿಗಳು ಕೂಡ ಬಯಸುತ್ತಾರೆ.

ಆಗಾಗ ಈ ವಿಚಾರದಲ್ಲಿ ಅಭಿಮಾನಿಗಳು ಅಭಿಯಾನ ನಡೆಸುತ್ತಾ ಇರುತ್ತಾರೆ. ಈಗ ದರ್ಶನ್ ಮತ್ತು ಸುದೀಪ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಚ್ಚರಿ ಅನಿಸಿದರು ನಿಜ. 'ಕ್ರಾಂತಿ' ಮತ್ತು 'ವಿಕ್ರಾಂತ್ ರೋಣ' ಸಿನಿಮಾ ಪೋಸ್ಟರ್ ಹಿಡಿದು ಇಬ್ಬರು ನಿಂತಿದ್ದಾರೆ.

ಸದ್ಯ ಇವರಿಬ್ಬರ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಅಭಿಮಾನಿ ಒಬ್ಬರ ಕೈ ಚಳಕ. ಈ ಫೊಟೋ ಮಾಡಿರುವಾತನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಂದೆ ಫ್ರೇಮ್ ನಲ್ಲಿ ಸುದೀಪ್-ದರ್ಶನ್!

ಒಂದೆ ಫ್ರೇಮ್ ನಲ್ಲಿ ಸುದೀಪ್-ದರ್ಶನ್!

ನಟ ದರ್ಶನ್ ಮತ್ತು ಸುದೀಪ್ ಒಂದೇ ಫ್ರೇಮ್ ನಲ್ಲಿ ಇರುವ ಫೋಟೋ ಇದು. ಹಾಗಂತ ಇವರಿಬ್ಬರೂ ಒಟ್ಟಿಗೆ ಕ್ಲಿಕ್ಕಿಸಿದ ಫೋಟೋ ಅಲ್ಲ. ಇದು ಅಭಿಮಾನಿ ಒಬ್ಬರು ಎಡಿಟ್ ಮಾಡಿ ಹಂಚಿಕೊಂಡಿರುವ ಫೋಟೊ. ಈ ಫೋಟೋದಲ್ಲಿ ನಟ ದರ್ಶನ್ ಮತ್ತು ಸುದೀಪ್ ಒಂದೇ ರೀತಿಯ ಕಾಸ್ಟ್ಯೂಂ ತೊಟ್ಟಿದ್ದಾರೆ. ಅದರಲ್ಲೂ ಅವರ ಕೈಯಲ್ಲಿ ಇರುವ ಫೋಟೋ ವಿಶೇಷವಾಗಿದೆ. 'ವಿಕ್ರಾಂತ್ ರೋಣ' ಮತ್ತು ‌'ಕ್ರಾಂತಿ' ಚಿತ್ರದ ಲುಕ್ ಇದರಲ್ಲಿ ಇದೆ.

ಫೋಟೊ ಮೆಚ್ಚಿದ ದರ್ಶನ್, ಸುದೀಪ್ ಫ್ಯಾನ್ಸ್!

ಫೋಟೊ ಮೆಚ್ಚಿದ ದರ್ಶನ್, ಸುದೀಪ್ ಫ್ಯಾನ್ಸ್!

ಇನ್ನೂ ಈ ಪೋಸ್ಟರ್ ರಿಲೀಸ್ ಆಗುತ್ತಿದ್ದ ಹಾಗೆ ವೈರಲ್ ಆಗಿದೆ. ಸುದೀಪ್, ದರ್ಶನ್ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಇವರನ್ನು ಜೊತೆಯಾಗಿ ನೋಡಲು ಇಚ್ಛಿಸುತ್ತೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಈ ಫೊಟೋ ಎಡಿಟ್ ಮಾಡಿದ ಕಲಾವಿದನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಬ್ಯುಸಿ!

'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಬ್ಯುಸಿ!

ನಟ ದರ್ಶನ್ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಸದ್ಯ 'ಕ್ರಾಂತಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಕ್ರಾಂತಿ' ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಯಲಿದ್ದು, ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಜೊತೆಗೆ‌ ರಿಲೀಸ್ ಯಾವಾಗ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮಾಡಿದೆ.

'ವಿಕ್ರಾಂತ್ ರೋಣ'ನಾಗಿ ಸುದೀಪ್ ಅಬ್ಬರ!

'ವಿಕ್ರಾಂತ್ ರೋಣ'ನಾಗಿ ಸುದೀಪ್ ಅಬ್ಬರ!

ಇನ್ನು ನಟ ಸುದೀಪ್ 'ವಿಕ್ರಾಂತ್ ರೋಣ'ನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ.‌ 'ವಿಕ್ರಾಂತ್ ರೋಣ' ಜುಲೈ 28ಕ್ಕೆ ರಿಲೀಸ್ ಆಗಲಿದೆ. ಸದ್ಯ ಚಿತ್ರದ ರಕ್ಕಮ್ಮ ಹಾಡು ಹಿಟ್ ಲಿಸ್ಟ್ ಸೇರಿದೆ. ಎಲ್ಲಾ ಭಾಷೆಗಳಲ್ಲೂ ರಕ್ಕಮ್ಮ ಹಾಡು ರಿಲೀಸ್ ಆಗಿದ್ದು, ಎಲ್ಲರೂ ರಕ್ಕಮ್ಮನ ತಾಳಕ್ಕೆ ಕುಣಿಯುತ್ತಿದ್ದಾರೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಈ ಹಾಡಿಗೆ ಡಾನ್ಸ್ ಮಾಡಿದ್ದು ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.

More from Filmibeat

English summary
Actor Sudeep And Darshan In One Frame after a Long Time, Photo Goes Viral on Social media. Here is more detail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X