ಸಿನಿಮಾಗಿಂತ ಹೆಚ್ಚಾಗಿ ಸುದೀಪ್ ಬದುಕಿನಲ್ಲಿ ನಾಳೆ ಮರೆಯಲಾಗದ ದಿನ, ಏನದು?

Recommended Video

ಅಕ್ಟೋಬರ್ 18 ನಟ ಸುದೀಪ್ ಗೆ ವಿಶೇಷ ದಿನ | FILMIBEAT KANNADA

ನಟ ಸುದೀಪ್ ಅವರ ಅಭಿಮಾನಿಗಳು 'ದಿ ವಿಲನ್' ಸಿನಿಮಾದ ಮೂಡ್ ನಲ್ಲಿ ಇದ್ದಾರೆ. ರಾಜ್ಯದ ಸಾಕಷ್ಟು ಚಿತ್ರಮಂದಿರಗಳಲ್ಲಿ ಈಗಾಗಲೇ 'ದಿ ವಿಲನ್' ಜಾತ್ರೆ ಶುರುವಾಗಿದೆ. ನಾಳೆ 'ದಿ ವಿಲನ್' ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

'ದಿ ವಿಲನ್' ಸಿನಿಮಾ ಸೃಷ್ಟಿ ಮಾಡಿರುವ ಕ್ರೇಜ್ ಸುದೀಪ್ ಮುಖದಲ್ಲಿಯೂ ನಗು ಮೂಡಿಸಿದೆ. ಈ ಸಿನಿಮಾದ ಜೊತೆಗೆ ಮತ್ತೊಂದು ಕಡೆ ಅವರ ವೈಯಕ್ತಿಕ ಜೀವನದಲ್ಲಿಯೂ ಅಕ್ಟೋಬರ್ 18 ಮರೆಯಲಾಗದ ದಿನವಾಗಿದೆ. ದಸರಾ ಹಬ್ಬ ಹಾಗೂ 'ದಿ ವಿಲನ್' ಹಬ್ಬದ ಜೊತೆಗೆ ಮತ್ತೊಂದು ಸಂತಸದ ಘಳಿಗೆ ನಾಳೆ ಸುದೀಪ್ ಅವರಿಗೆ ಒದಗಿ ಬರಲಿದೆ.

ಅಂದಹಾಗೆ, ಸುದೀಪ್ ಬದುಕಿನಲ್ಲಿ ನಾಳೆ ಒಂದು ವಿಶೇಷ ದಿನ ಅದೇನೂ ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ...

ವಿವಾಹ ವಾರ್ಷಿಕೋತ್ಸವ

ವಿವಾಹ ವಾರ್ಷಿಕೋತ್ಸವ

ಅಕ್ಟೋಬರ್ 18 ಸುದೀಪ್ ವೈಯಕ್ತಿಕ ಜೀವನದ ವಿಶೇಷ ದಿನ. ಯಾಕೆಂದರೆ, ಅಂದು ಅವರು ತಮ್ಮ ಪತ್ನಿ ಪ್ರಿಯಾ ಅವರನ್ನು ಕೈ ಹಿಡಿದ ದಿನ. ಹೌದು, ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿ ನಾಳೆ 17 ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳಲಿದ್ದಾರೆ.

ಡಬ್ಬಲ್ ಖುಷಿ

ಡಬ್ಬಲ್ ಖುಷಿ

ಈ ಬಾರಿ ಸುದೀಪ್ ಮದುವೆಯಾದ ದಿನವೇ 'ದಿ ವಿಲನ್' ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಸುದೀಪ್ ಪಾಲಿಗೆ ಈ ವರ್ಷದ ಈ ದಿನ ಡಬ್ಬಲ್ ಖುಷಿಗೆ ಕಾರಣವಾಗಿದೆ. ದಸರಾ ಹಬ್ಬದ ವಿಶೇಷವಾಗಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ವಿವಾಹ ವಾರ್ಷಿಕೋತ್ಸವದ ಆಚರಣೆ ಕೂಡ ಇದಕ್ಕೆ ಸೇರಿಕೊಂಡಿದೆ

ಲವ್ ಮ್ಯಾರೇಜ್

ಲವ್ ಮ್ಯಾರೇಜ್

ಪ್ರೇಮಿಗಳಾಗಿದ್ದ ಸುದೀಪ್ ಹಾಗೂ ಪ್ರಿಯಾ 2001 ರಲ್ಲಿ ಮದುವೆಯಾಗುವ ನಿರ್ಧಾರ ಮಾಡಿದರು. ಕುಟುಂಬದ ಒಪ್ಪಿಗೆ ಮೇರೆಗೆ ಇಬ್ಬರು ಸಪ್ತಪದಿ ತುಳಿದಿದರು. ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿಗೆ ಸಾನ್ವಿ ಎನ್ನುವ ಒಬ್ಬ ಮಗಳಿದ್ದಾಳೆ.

ನಿರ್ಮಾಪಕಿಯಾದ ಪ್ರಿಯಾ ಸುದೀಪ್

ನಿರ್ಮಾಪಕಿಯಾದ ಪ್ರಿಯಾ ಸುದೀಪ್

ಈ ವರ್ಷದ ಇನ್ನೊಂದು ವಿಶೇಷ ಎಂದರೆ ಪ್ರಿಯಾ ಸುದೀಪ್ ನಿರ್ಮಾಪಕಿ ಆಗುತ್ತಿದ್ದರೆ. ಸುದೀಪ್ ಅಭಿನಯದಲ್ಲಿ ಬರುತ್ತಿರುವ ಮದಕರಿ ನಾಯಕರ ಬಗ್ಗೆ ಇರುವ 'ದುರ್ಗದ ಹುಲಿ' ಸಿನಿಮಾಗೆ ಪ್ರಿಯಾ ಹಣ ಹಾಕುತ್ತಿದ್ದಾರೆ.

More from Filmibeat

English summary
Kannada actor Sudeep and Priya Sudeep will calibrate their wedding anniversary Tomorrow (October 18th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X