ಅಪ್ಪು-ದೀಪು, ಅಂದು-ಇಂದು.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಎರಡು ನಕ್ಷತ್ರಗಳು. ಈ ಎರಡು ನಕ್ಷತ್ರಗಳು ಒಟ್ಟಿಗೆ ಕಾಣುವುದು ಅಪರೂಪ. ಇಂತಹ ಅಪರೂಪದ ಕ್ಷಣಕ್ಕೆ ಇತ್ತೀಚೆಗೆ 'ರಾಜಕುಮಾರ' ಚಿತ್ರದ ಶತದಿನೋತ್ಸವ ಸಂಭ್ರಮ ವೇದಿಕೆಯಾಯಿತು.
ಇತ್ತೀಚಿನ ದಿನಗಳಲ್ಲಿ ಪುನೀತ್ ಹಾಗೂ ಸುದೀಪ್ ಹೆಚ್ಚು ಆತ್ಮೀಯರಾಗುತ್ತಿದ್ದಾರೆ. ಸುದೀಪ್ ಚಿತ್ರದ ಶೂಟಿಂಗ್ ಸೆಟ್ ಗೆ ಅಪ್ಪು ಭೇಟಿ ಕೊಡುವುದು, ಅಪ್ಪು ಶೂಟಿಂಗ್ ಸೆಟ್ ಗೆ ಪುನೀತ್ ಭೇಟಿ ಕೊಡುತ್ತಿರುವುದು ಇಬ್ಬರ ನಡುವಿನ ಬಾಂಧವ್ಯವನ್ನ ಹೆಚ್ಚಿಸುತ್ತಿದೆ.

ಪುನೀತ್ ರಾಜ್ ಕುಮಾರ್ ಗೆ ಸುದೀಪ್ ಅವರ ವಾಯ್ಸ್ ಅಂದ್ರೆ ಇಷ್ಟ. ಹಾಗಾಗಿ, ಸುದೀಪ್ ಅವರ ಬಳಿ ಧ್ವನಿಯನ್ನ ಕದಿಯುತ್ತೇನೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದೇ ರೀತಿ, ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ಮತ್ತು ಗಾಯನ ಅಂದ್ರೆ ಕಿಚ್ಚನಿಗೆ ಇಷ್ಟ. ಸುದೀಪ್ ಕೂಡ ಟಿವಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದರು.
ಇನ್ನು ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಪುನೀತ್ ಚಿಕ್ಕವಯಸ್ಸಿನಲ್ಲಿ ಹಾಡಿದ್ದ ಹಾಡೊಂದನ್ನ ಹಾಡುವ ಮೂಲಕ ಇದು ನನ್ನ ಫೇವರೆಟ್ ಹಾಡು ಎಂದಿದ್ದರು.
ಕನ್ನಡ ನಟರಲ್ಲಿ ವಾರ್, ಕಾಂಪಿಟೇಶನ್ ಹೆಚ್ಚಾಗಿದೆ ಎನ್ನುವ ಇಂತಹ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಅವರ ಆತ್ಮೀಯತೆ ಚಿತ್ರರಂಗಕ್ಕೆ ಮಾದರಿಯಾಗುತ್ತಿದೆ. ಇದು ಹೀಗೆ ಮುಂದುವರೆಯಲಿ ಎನ್ನುವುದು ಅಭಿಮಾನಿಗಳ ಆಶಯ.


Click it and Unblock the Notifications











