ನಿರ್ದೇಶಕರ ಸಂಘದ ಹೊಸ ಕಛೇರಿಯ ಉದ್ಘಾಟನೆಯಲ್ಲಿ ಉಪ್ಪಿ, ಸುದೀಪ್
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಹೊಸ ಕಛೇರಿಯನ್ನು ಇದು ಉದ್ಘಾಟನೆ ಮಾಡಲಾಯಿತು. ನಟ ಉಪೇಂದ್ರ, ಸುದೀಪ್, ರಮೇಶ್ ಅರವಿಂದ್ ಸೇರಿದಂತೆ ಅನೇಕ ನಟ ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಾಗರಭಾವಿಯ 2ನೇ ಹಂತದ 11ನೇ ಬ್ಲಾಕ್ ನಲ್ಲಿ ನಿರ್ದೇಶಕರ ನೂತನ ಕಚೇರಿಯನ್ನು ಉದ್ಘಾಟನೆ ಮಾಡಲಾಗಿದೆ. ಜೊತೆಗೆ ಸಂಘದ ವತಿಯಿಂದ ಕ್ಯಾಲೆಂಡರ್ ಹಾಗೂ ಡೈರಿಯನ್ನು ಸಹ ಬಿಡುಗಡೆ ಮಾಡಲಾಯಿತು.

ಸಂಘದ ಅಧ್ಯಕ್ಷ ವಿ ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷ ಸಾಧು ಕೋಕಿಲ, ನಿರ್ದೇಶಕ ಭಗವಾನ್, ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ನಿರ್ದೇಶಕಿ ರೂಪ ಐಯ್ಯರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಸಂಘದ ವೆಬ್ ಸೈಟ್ ಹಾಗೂ ಕಾನ್ಫಿಡಾ ತರಭೇತಿ ಶಾಲೆಯನ್ನು ಸಹ ಇಂದು ಆರಂಭ ಮಾಡಲಾಯಿತು.
More from Filmibeat
English summary
Actor sudeep and upendra inaugurates karnataka director associations new building


Click it and Unblock the Notifications











