ನಟ ಸುದೀಪ್‌ಗೆ ಅನಾರೋಗ್ಯ: ಕ್ಷಮೆ ಕೇಳಿದ ಕಿಚ್ಚ!

ನಟ ಕಿಚ್ಚ ಸುದೀಪ್ ಸದ್ಯ ತಮ್ಮ ಮುಂದಿನ ಸಿನಿಮಾದ ಪ್ರಚಾರದ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ವಿಕ್ರಾಂತ್ ರೋಣ ಅಬ್ಬರದ ಪ್ರಚಾರ ಶುರುವಾಗಿದ್ದು, ಕಾರ್ಯಕ್ರಮಗಳಲ್ಲಿ ಸುದೀಪ್ ಭಾಗಿಯಾಗುತ್ತಿದ್ದಾರೆ. ಸಿನಿಮಾ ಇದೇ ತಿಂಗಳು ತೆರೆಗೆ ಬರುತ್ತಿದೆ.

ಕಿಚ್ಚನನ್ನು ದೊಡ್ಡ ಪರದೆಯ ಮೇಲೆ ಶೀಘ್ರದಲ್ಲಿಯೇ ಕಂಡುಕೊಳ್ಳ ಬಹುದು ಎಂದು ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಪ್ರಚಾರದ ಕೆಲಸದ ಜೊತೆಗೆ ನಟ ಸುದೀಪ್ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಸುದೀಪ್ ಬಹಿರಂಗಪಡಿಸಿದ್ದಾರೆ.

ಸದ್ಯಕ್ಕೆ ನಟ ಸುದೀಪ್ ಆರೋಗ್ಯ ಚೆನ್ನಾಗಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಸುದೀಪ್ ಹಲವು ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಹಾಗಾಗಿ ಟ್ವೀಟ್ ಮಾಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

 ನಟ ಸುದೀಪ್‌ಗೆ ಅನಾರೋಗ್ಯ!

ನಟ ಸುದೀಪ್‌ಗೆ ಅನಾರೋಗ್ಯ!

ನಟ ಕಿಚ್ಚ ಸುದೀಪ್‌ಗೆ ಅನಾರೋಗ್ಯದ ಸಮಸ್ಯೆ ಎದುರಾಗಿದೆ. ಹಾಗಾಗಿ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಭಾಗಿ ಆಗುವುದನ್ನು ನಿಲ್ಲಿಸಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡು, ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಸುದೀಪ್. ಇದರಿಂದ ವಿಕ್ರಾಂತ್ ರೋಣ ಚಿತ್ರದ ಹಲವು ಕಾರ್ಯಕ್ರಮಗಳು ರದ್ದಾಗಿವೆ. ಈ ಬಗ್ಗೆ ಕಿಚ್ಚ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕ್ಷಮೆ ಕೇಳಿದ ಕಿಚ್ಚ!

ಅನಾರೋಗ್ಯ ಎದುರಾದ ಕಾರಣ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಕಾರ್ಯಕ್ರಮಗಳಲ್ಲಿ ಭಾಗಿ ಅಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕ್ಷಮೆ ಕೇಳಿದ ಸುದೀಪ್ " ವಿಕ್ರಾಂತ್ ರೋಣ ಚಿತ್ರದ ಸುದ್ದಿಗೋಷ್ಟಿ ಮತ್ತು ಕಾರ್ಯಕ್ರಮ ರದ್ದಾಗಿರುವುದಕ್ಕೆ, ಚೆನ್ನೈ, ಕೊಚ್ಚಿ, ಹೈದರಾಬಾದ್‌ ಮಾಧ್ಯಮ ಸ್ನೇಹಿತರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಆರೋಗ್ಯ ಸರಿಯಿಲ್ಲ. ನಾನು ಸ್ವಲ್ಪ ಚೇತರಿಕೊಂಡ ಬಳಿಕ ಮತ್ತೆ ಎಲ್ಲವನ್ನು ಶುರು ಮಾಡೋಣ. ಸದ್ಯದಲ್ಲೇ ಹೊಸ ದಿನಾಂಕ ಪ್ರಕಟ ಮಾಡಲಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಸುದೀಪ್ ಭಾಗಿ ಆಗ್ಬೇಕಿತ್ತು!

ಇನ್ನು ನಟ ಸುದೀಪ್ ವಿಜಯ್ ಟಿವಿಯ ರಿಯಾಲಿಟಿ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಬೇಕಿತ್ತು. ಅದು ಕೂಡ ಸಾಧ್ಯವಾಗಿಲ್ಲ. ಇದನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. "ವಿಜಯ ಟಿವಿ ಸ್ನೇಹಿತರಲ್ಲೂ ಕೂಡ ಕ್ಷಮೆ ಕೇಳುತ್ತೇನೆ. ರಿಯಾಲಿಟಿ ಶೋ ಕಾರ್ಯಕ್ರಮದ ಸಮಾರಂಭದಲ್ಲಿ ನಾನು ಭಾಗಿ ಆಗ್ಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ನಾವು ಮತ್ತೆ ಇದನ್ನು ಪುನರ್ಯೋಜನೆ ಮಾಡೋಣ. ಇಡೀ ತಂಡಕ್ಕೆ ಧನ್ಯವಾದಗಳು" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

 ಸುದೀಪ್ ಕೊರೊನಾ ಎಂಬ ಸುದ್ದಿ!

ಸುದೀಪ್ ಕೊರೊನಾ ಎಂಬ ಸುದ್ದಿ!

ನಟ ಸುದೀಪ್‌ ಆರೋಗ್ಯದ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿತ್ತು. ನಟ ಸುದೀಪ್ ಕೊರೊನಾದಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ಕೊಟ್ಟ ನಿರ್ಮಾಪಕ ಕೆ.ಮಂಜು, ಸುದೀಪ್ ಅವರಿಗೆ ಕೊರೊನಾ ಬಂದಿಲ್ಲ ಎನ್ನುವುದನ್ನು ಧೃಡಪಡಿಸಿದ್ದಾರೆ. ಕಿಚ್ಚ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

More from Filmibeat

English summary
Actor Sudeep Apologize Fans for Canceling The Vikrant Rona event Because of Health Issues, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X