ನಿರ್ದೇಶಕ ಪ್ರೇಮ್ ಹುಟ್ಟುಹಬ್ಬಕ್ಕೆ ಸುದೀಪ್ ವಿಶ್ ಮಾಡಿದ್ದು ಹೀಗೆ

ನಿರ್ದೇಶಕ ಪ್ರೇಮ್ ಗೆ ಇಂದು (ಅ.22) ಹುಟ್ಟುಹಬ್ಬದ ಸಂಭ್ರಮ. 43ನೇ ವಂಸತಕ್ಕೆ ಕಾಲಿಟ್ಟಿರುವ ಪ್ರೇಮ್ ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಪ್ರೇಮ್ ಸದ್ಯ ಬಹುನಿರೀಕ್ಷೆಯ ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಊಟಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ಪ್ರೇಮ್, ಚಿತ್ರತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಪ್ರೇಮ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

'ಯಾವಾಗಲು ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ನನ್ನ ಸಹೋದರ ಪ್ರೇಮ್. ಈ ಅದ್ಭುತ ದಿನ ನಿನ್ನದಾಗಲಿ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಶುಭಹಾರಿಸಿದ್ದಾರೆ. ಸುದೀಪ್ ಮತ್ತು ಪ್ರೇಮ್ ಇಬ್ಬರೂ ಉತ್ತಮ ಸ್ನೇಹಿತರು. ಮೊದಲ ಬಾರಿಗೆ ಸುದೀಪ್, ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ನಟಿಸಿದ್ದಾರೆ.

 Actor Sudeep Birthday Wishes To Director Prem

ಸುದೀಪ್ ಜೊತೆ ಎರಡನೇ ಸಿನಿಮಾ ಮಾಡುವ ಯೋಜನೆಯನ್ನು ಪ್ರೇಮ್ ಹೊಂದಿದ್ದಾರೆ. ಸದ್ಯದಲ್ಲೇ ಸುದೀಪ್ ಜೊತೆಗಿನ ಸಿನಿಮಾ ಅನೌನ್ಸ್ ಮಾಡುವುದಾಗಿ ಸುದೀಪ್ ಹುಟ್ಟುಹಬ್ಬದ ದಿನ ಬಹಿರಂಗಪಡಿಸಿದ್ದರು.

ಪ್ರೇಮ್ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳು ಭರ್ಜರಿ ಹಾಡೊಂದನ್ನು ಗಿಫ್ಟ್ ನೀಡಿದ್ದಾರೆ. ಮಂಡ್ಯ ಮುತ್ತು ಅಭಿಮಾನಿ ಬಳಗದವರು ಪ್ರೇಮ್ ಅವರಿಗೆ ಟ್ರಿಬ್ಯೂಟ್ ಸಾಂಗ್ ತಯಾರಿಸಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿ ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

''ನನ್ನ ಹುಟ್ಟುಹಬ್ಬಕ್ಕೆ ಮಂಡ್ಯ ಮುತ್ತು ಅಭಿಮಾನಿ ಬಳಗದವರು ಒಂದು ಟ್ರಿಬ್ಯೂಟ್ ಸಾಂಗ್ ಮಾಡಿದ್ದೀರ, ಸಿನಿಮಾ ಮತ್ತು ಅಮ್ಮ ಎರಡೂ ನನ್ನ ಜೀವ ಅನ್ನೋದು ಈ ಒಂದು ಹಾಡಲ್ಲಿ ತೋರ್ಸ್ಕೊಟ್ಟಿದೀರ, ತಂದೆ ತಾಯಿಯ ನಂತರ ಅವರಷ್ಟೇ ಹೆಚ್ಚು ಪ್ರೀತಿ ತೋರೋ ನೀವುಗಳು ಅಭಿಮಾನದ ಅನ್ನದಾತರು. ನಿಮ್ಮನೆ ಮಗ'' ಎಂದು ಖುಷಿ ವ್ಯಕ್ತಪಡಿಸಿ ಹಾಡನ್ನು ಸಹ ಪ್ರೇಮ್ ಹಂಚಿಕೊಂಡಿದ್ದಾರೆ.

Recommended Video

ಮೇಘನಾ ಮಡಿಲು ಸೇರಿದ ಜೂನಿಯರ್ ಚಿರು | Meghana Raj blessed with baby boy | Filmibeat Kannada

More from Filmibeat

English summary
Actor Sudeep birthday wishes to Director prem. Prem celebrating his birthday on Ek love ya Shooting set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X