ಚಿತ್ರರಂಗದಲ್ಲಿ ಸುದೀಪ್ ಗೆ 23 ವರ್ಷ : ಪತ್ನಿ ಕಡೆಯಿಂದ ಪ್ರೀತಿಯ ಶುಭಾಶಯ
ನಟ ಸುದೀಪ್ ಇಂದು ಚಿತ್ರರಂಗಕ್ಕೆ ಬಂದು 23 ವರ್ಷ ತುಂಬಿದೆ. ಸುದೀಪ್ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗಕ್ಕೆ ಹಾಗೂ ಅಭಿಮಾಗಳು, ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಸುದೀಪ್ ಅವರ ಈ ಅದ್ಬುತ ಗಳಿಗೆಯನ್ನು ಪತ್ನಿ ಪ್ರಿಯಾ ಸುದೀಪ್ ಸಹ ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರಿಯಾ ''23 ವರ್ಷಗಳ ನಿಮ್ಮ ಕೆಲಸಕ್ಕೆ ಧನ್ಯವಾದ. ಮುಂದೆ ಇನ್ನಷ್ಟು ಒಳ್ಳೆಯ ಸಮಯ ನಿಮಗೆ ಕಾದಿದೆ.'' ಎಂದು ವಿಶ್ ಮಾಡಿದ್ದಾರೆ. ಪತ್ನಿಯ ಟ್ವೀಟ್ ಗೆ ಕಿಚ್ಚ ಪ್ರತಿಕ್ರಿಯೆ ನೀಡಿದ್ದು, ಧನ್ಯವಾದ ತಿಳಿಸಿದ್ದಾರೆ.

#23GloriousYearsOfKichchaSudeepa ಎಂಬ ಹ್ಯಾಶ್ ಟ್ಯಾಗ್ ಬಳಸಿ ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರು ಶುಭಾಶಯವನ್ನು ತಿಳಿಸಿದ್ದಾರೆ. ಸುದೀಪ್ ಫ್ಯಾನ್ಸ್ ಪೇಜ್ ಗಳು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ.
'ಸ್ಪರ್ಶ' ಸುದೀಪ್ ಲೀಡ್ ಪಾತ್ರದಲ್ಲಿ ನಟಿಸಿದ್ದ ಮೊದಲ ಸಿನಿಮಾ ಆಗಿದ್ದು, ಆ ಚಿತ್ರ 1999 ರಲ್ಲಿ ಬಿಡುಗಡೆಯಾಗಿತ್ತು. ಆದರೆ, ಅದಕ್ಕೂ ಮುಂಚೆ 'ಬ್ರಹ್ಮ', 'ತಾಯವ್ವ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಿಚ್ಚ ಕಾಣಿಸಿಕೊಂಡಿದ್ದರು.


Click it and Unblock the Notifications











