For Quick Alerts
  ALLOW NOTIFICATIONS  
  For Daily Alerts

  ಅಪ್ಪನಿಗೆ ಅಪ್ಪುಗೆಯ ಸಂದೇಶ ಬರೆದ ಸುದೀಪ್ ಮಗಳು ಸಾನ್ವಿ ಸುದೀಪ್!

  |

  ಇಂದು (ಜೂನ್ 19) ವಿಶ್ವ ಅಪ್ಪಂದಿರ ದಿನಾಚರಣೆ. ಮಕ್ಕಳ ಬದುಕಿನಲ್ಲಿ ತಂದೆ ವಿಶೇಷವಾದ ಭಾಗ. ಅದರಲ್ಲೂ ಸಹಜವಾಗಿ ಹೆಣ್ಣು ಮಕ್ಕಳಿಗೆ ತಮ್ಮ ತಂದೆಯೆಂದರೆ ಅಪಾರ ಪ್ರೀತಿ. ಅಮ್ಮನಿಗಿಂತ ಒಂದು ತೂಕ ಜಾಸ್ತಿನೇ ಅಪ್ಪನನ್ನು ಹೆಣ್ಣುಮಕ್ಕಳು ಪ್ರೀತಿಸ್ತಾರೆ ಅಂತ ಹೇಳಬಹುದು.

  ಈ ವಿಶೇಷ ದಿನದಂದು ನಟ ಸುದೀಪ್ ಮಗಳು ಸಾನ್ವಿ ಗಮನಸೆಳೆದಿದ್ದಾರೆ. ಹೌದು ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಈ ಅಪ್ಪಂದಿರ ದಿನಾಚರಣೆಯಂದು ವಿಶೇಷವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

  ಹಲವು ದಿನಗಳ ಬಳಿಕ ಒಂದೆ ಫ್ರೇಮ್‌ನಲ್ಲಿ ದರ್ಶನ್, ಸುದೀಪ್: ಪೋಟೋ ವೈರಲ್!ಹಲವು ದಿನಗಳ ಬಳಿಕ ಒಂದೆ ಫ್ರೇಮ್‌ನಲ್ಲಿ ದರ್ಶನ್, ಸುದೀಪ್: ಪೋಟೋ ವೈರಲ್!

  ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳದ ಸುದೀಪ್ ಮಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದ ಮೂಲಕವೇ ತಂದೆಗೆ ವಿಶೇಷವಾದ ಸಂದೇಶ ಬರೆದಿದ್ದಾರೆ.

  ಅಪ್ಪನ ಜೊತೆಗೆ ಸಾನ್ವಿ ಸುದೀಪ್ ಫೋಟೊ!

  ಅಪ್ಪನ ಜೊತೆಗೆ ಸಾನ್ವಿ ಸುದೀಪ್ ಫೋಟೊ!

  ನಟ ಸುದೀಪ್ ಮತ್ತು ಪ್ರಿಯಾ ದಂಪತಿಯ ಏಕೈಕ ಪುತ್ರಿ ಸಾನ್ವಿ. ಸಾನ್ವಿ ಈಗ ಬೆಳೆದು ದೊಡ್ಡವರಾಗಿದ್ದಾರೆ. ಆಗಾಗ ಕೆಲವು ವಿಚಾರಗಳ ಮೂಲಕ ಗಮನ ಸೆಳೆಯುತ್ತಾರೆ ಸಾನ್ವಿ ಸುದೀಪ್. ಸದ್ಯ ವಿಶ್ವ ಅಪ್ಪಂದಿರ ದಿನ ಅಂಗವಾಗಿ, ಅಪ್ಪನ ಜೊತೆಗೆ ಕ್ಲಿಕ್ಕಿಸಿಕೊಂಡ ವಿಶೇಷ ಫೋಟೊ ಹಾಕಿ ಅಪ್ಪನಿಗೆ ಶುಭಕೋರುವುದರ ಜೊತೆಗೆ, ವಿಶೇಷವಾದ ಭಾವನಾತ್ಮಕ ಸಂದೇಶವನ್ನು ಕೂಡ ಬರೆದುಕೊಂಡಿದ್ದಾರೆ.

  ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟಿಗನಿಂದ ಬ್ಯಾಟ್ ಉಡುಗೊರೆಯಾಗಿ ಪಡೆದ ಸುದೀಪ್ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟಿಗನಿಂದ ಬ್ಯಾಟ್ ಉಡುಗೊರೆಯಾಗಿ ಪಡೆದ ಸುದೀಪ್

  ಸಾನ್ವಿ ಸುದೀಪ್ ಪೋಸ್ಟ್‌ನಲ್ಲೇನಿದೆ?

  "ಹ್ಯಾಪಿ ಫಾದರ್ಸ್ ಡೇ ಅಪ್ಪ. ನೀನು ನಿನ್ನ ಜೀವನದಲ್ಲಿ ಮಾಡಿದ ಸಾಧನೆಗಳಿಗೆ ನಾನು ಹೆಮ್ಮೆ ಪಡುತ್ತೇನೆ. ಯಾವುದೇ ಕಷ್ಟಗಳು, ತೊಂದರೆಗಳು ಬಂದರೂ ಕೂಡ ನೀನು ಅದನ್ನು ಸುಲಭವಾಗಿ ದಾಟುತ್ತೀಯ ಎನ್ನುವುದು ನನಗೆ ಗೊತ್ತಿದೆ. ಯಾಕೆಂದರೆ ನೀನು ಅಷ್ಟು ಶಕ್ತಿಶಾಲಿ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ನನಗೆ ಕಲಿಸಿದ್ದೆಲ್ಲದ್ದಕ್ಕೂ, ನನಗಾಗಿ ಮಾಡಿದ ತ್ಯಾಗಕ್ಕೂ ಧನ್ಯವಾದ ಹೇಳ ಸಾಧ್ಯವಿಲ್ಲ. ನೀನು ನೀನಾಗಿರುವುದಕ್ಕೆ ಧನ್ಯವಾದ." ಎಂದು ಬರೆದುಕೊಂಡಿದ್ದಾರೆ.

  ಪುನೀತ್ ರಾಜ್‌ಕುಮಾರ್ ಬಗ್ಗೆ ಸಾನ್ವಿ ಪೋಸ್ಟ್!

  ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳದ, ಯಾವ ವಿಚಾರಕ್ಕೂ ತಲೆ ಹಾಕದೇ ಇದ್ದ ಸಾನ್ವಿ, ಹೆಚ್ಚಾಗಿ ಸದ್ದು ಮಾಡಿದ್ದು ನಟ ಪುನೀತ್ ರಾಜ್‌ಕುಮಾರ್ ವಿಚಾರದಲ್ಲಿ. ಪುನೀತ್ ರಾಜಕುಮಾರ್ ನಿಧನದ ಬಳಿಕ ಪುನೀತ್ ಅವರ ಬಗ್ಗೆ ಒಂದಷ್ಟು ಅವಹೇಳನಕಾರಿ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾನ್ವಿ, ಈ ರೀತಿ ಅವಹೇಳನ ಮಾಡುವುದು ಸರಿಯಲ್ಲ ಎನ್ನುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆಯಲ್ಲಿ ಸಾನ್ವಿಯ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು.

  ಸಿನಿಮಾರಂಗದಿಂದ ಸಾನ್ವಿ ಸುದೀಪ್ ದೂರ!

  ಸಾಕಷ್ಟು ಸೂಪರ್ ಸ್ಟಾರ್‌ಗಳ ಮಕ್ಕಳು ಸಿನಿಮಾರಂಗಕ್ಕೆ ಬರ್ತಾರೆ. ತಂದೆಯಂತೆ ಸೂಪರ್ ಸ್ಟಾರ್‌ಗಳಾಗಿ ಮಿಂಚಿರುವ ಉದಾಹರಣೆಗಳು ಇವೆ. ಆದರೆ ಸುದೀಪ್ ಮಗಳು ಸಿನಿಮಾ ರಂಗದಿಂದ ದೂರವೇ ಉಳಿದಿದ್ದಾರೆ. ಆದರೂ ಕೂಡ ಅಪ್ಪನ ಅಭಿಮಾನಿಗಳು ಸಾನ್ವಿಗೂ ಅಭಿಮಾನಿಗಳೇ ಆಗಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾನ್ವಿ ಸದಾ ಸಕ್ರಿಯವಾಗಿರುತ್ತಾರೆ. ತಮ್ಮ ಅನಿಸಿಕೆಗಳನ್ನು, ತಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

  English summary
  Actor Sudeep Daughter Sanvi Sudeep Father's Day Wish, She Wrote Heart warming Letter, Know More Details,
  Monday, June 20, 2022, 9:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X