For Quick Alerts
  ALLOW NOTIFICATIONS  
  For Daily Alerts

  ಸುದೀಪ್ ವಿರುದ್ಧದ ಕೇಸ್ ಹಿಂತೆಗೆದುಕೊಳ್ಳುವಂತೆ ಅಭಿಮಾನಿ ಧಮ್ಕಿ

  By ಚಿಕ್ಕಮಗಳೂರು ಪ್ರತಿನಿಧಿ
  |
  ಸುದೀಪ್ ವಿರುದ್ಧದ ಕೇಸ್ ಹಿಂತೆಗೆದುಕೊಳ್ಳುವಂತೆ ಧಮ್ಕಿ | Filmibeat Kannada

  ನಟ ಸುದೀಪ್ ವಿರುದ್ಧದ ಕೇಸ್ ಹಿಂಪಡೆಯುವಂತೆ ಕಿಚ್ಚ ಸುದೀಪ್ ಅಭಿಮಾನಿಗಳ‌ ಸಂಘದ ರಾಜ್ಯಾಧ್ಯಕ್ಷ ನವೀನ್ ಎಂಬಾತ ದೀಪಕ್ ಮಯೂರ್ ಗೆ ಧಮ್ಕಿ ಹಾಕಿದ ಘಟನೆ ಬೆಳಕಿಗೆ ಬಂದಿದೆ.

  ದೀಪಕ್ ಮಯೂರ್ ನಟ ಸುದೀಪ್ ಬಾಡಿಗೆ ಹಣ ನೀಡದ ಕುರಿತು ‌ಈ ಹಿಂದೆ ಕೇಸ್ ದಾಖಲು ಮಾಡಿದ್ದರು. ಅದೆ ಕಾರಣಕ್ಕೆ ಈಗ ದೀಪಕ್ ಮಯೂರ ಪಟೇಲ್ ಗೆ ನವೀನ್ ಧಮ್ಕಿ ಹಾಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ದೀಪಕ್ ‌ಮಯೂರ್ ಅವರ ಮನೆಯನ್ನು ಬಾಡಿಗೆ ಪಡೆದು ಕಿಚ್ಚ ಸುದೀಪ್ ಅಲ್ಲಿ ತಮ್ಮ ನಿರ್ಮಾಣದ 'ವಾರಸ್ದಾರ' ಧಾರಾವಾಹಿ ಚಿತ್ರೀಕರಣ ಮಾಡಿದ್ದರು. ಆದರೆ, ಅದರ ಬಾಡಿಗೆ ಹಣವನ್ನು ನೀಡಿಲ್ಲ ಎನ್ನುವುದು ದೀಪಕ್ ಅವರ ಆರೋಪವಾಗಿದೆ.

  ನಟ-ನಿರ್ಮಾಪಕ ಸುದೀಪ್ ವಿರುದ್ಧ ದೂರು ದಾಖಲು

  ಈ ಹಿಂದೆ ಈ ವಿಚಾರವಾಗಿ ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಈ ಕೇಸ್ ಅನ್ನು ವಾಪಸ್ ಪಡೆಯುವಂತೆ ನವೀನ್ ‌ದೀಪಕ್ ಮಯೂರ್ ಗೆ ಧಮ್ಕಿ ಹಾಕಿದ್ದಾರೆ. ಇದೀಗ ಮಲ್ಲಂದೂರು ಪೊಲೀಸ್ ‌ಠಾಣೆಯಲ್ಲಿ ನವೀನ್ ವಿರುದ್ಧ ದೂರು ‌ದಾಖಲಾಗಿದ್ದು, ನಿನ್ನೆ ನವೀನ್ ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  'ವಾರಸ್ಧಾರ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿತ್ತು. ನಟ ಸುದೀಪ್ ಇದರ ನಿರ್ಮಾಣದಲ್ಲಿ ಮಾಡಿದ್ದರು. ನಟಿ ಯಜ್ಞಶೆಟ್ಟಿ ಧಾರಾವಾಹಿಯ ಲೀಡ್ ರೋಲ್ ನಲ್ಲಿ ನಟಿಸಿದ್ದರು.

  English summary
  Sudeep fans association's state president Naveen threatened to Deepak Mayur. On this reason case was registered at Mallandur police station against Naveen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X