ಕೊರೊನಾ ಸಂಕಷ್ಟ: ಬಡವರ ನೆರವಿಗೆ ಧಾವಿಸಿದ ಸುದೀಪ್ ಅಭಿಮಾನಿಗಳು

ಕೊರೊನಾ ವೈರಸ್ ಹಾವಳಿಗೆ ಇಡೀ ದೇಶವೆ ಬೆಚ್ಚಿ ಬಿದ್ದಿದೆ. ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ಇಡೀ ಭಾರತ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಅಸಾಹಯಕರು, ಕೂಲಿಕಾರ್ಮಿಕರು, ಅಸಹಾಯಕರು, ವಿಕಲ ಚೇತನರು ಸೇರಿದಂತೆ ಅನೇಕರು ಊಟ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Recommended Video

ಪಾತ್ರೆ ತೊಳೆದು ಹೆಂಡತಿಗೆ ಸಹಾಯ ಮಾಡಿದ ಮರಿ ಟೈಗರ್ | Vinod Prabhkar | Filmibeat Kannada

ಬಡವರಿಗೆ ಸಹಾಯ ಮಾಡಲು ಅನೇಕರು ಮುಂದೆ ಬಂದಿದ್ದಾರೆ. ಈಗಾಗಲೆ ಆಂಧ್ರ ಪ್ರದೇಶದಲ್ಲಿ ಕಲಾವಿದರು ಸಿಎಂ ಪರಿಹಾರ ನಿಧಿಗೆ ಕೋಟಿ ಕೋಟಿ ದೇಣಿಗೆ ನೀಡುತ್ತಿದ್ದಾರೆ. ಕನ್ನಡ ಸ್ಟಾರ್ ಕಲಾವಿದರು ಯಾಕೆ ಮುಂದೆ ಬರುತ್ತಿಲ್ಲ ಎನ್ನುವ ಪ್ರಶ್ನೆ ಎದ್ದಿರುವ ಬೆನ್ನಲ್ಲೆ ಅಭಿಮಾನಿಗಳು ಮುಂದೆ ನಿಂತು ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ಅಭಿಮಾನಿಗಳು ಸರ್ಕಾರದ ನಿಯಮವನ್ನು ಉಲ್ಲಂಘಿಸದೆ, ಸುದೀಪ್ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಜನರಿಗೆ ಆಹಾರವನ್ನು ವಿತರಣೆ ಮಾಡುತ್ತಿದ್ದಾರೆ.

Actor Sudeep Fans Help For Poor People

ಪ್ಯಾಕ್ ಗಳಲ್ಲಿ ಆಹಾರವನ್ನು ತಂದು ಒಂದುಹೊತ್ತು ಊಟಕ್ಕು ಪರದಾಡುವಂತಹ ಸ್ಥಿತಿಯಲ್ಲಿರುವವರಿಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಜೆ.ಜೆ ನಗರ, ಬ್ಯಾಟರಾಯನ ಪುರ, ಗೋರಿಪಾಳ್ಯ, ಬಂಗಾರಪ್ಪ ನಗರ ಸೇರಿದಂತೆ ಅನೇಕ ಕಡೆ ಅಭಿಮಾನಿಗಳು ಬಡವರ ಹಸಿವನ್ನು ನೀಗಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಈ ಕಾರ್ಯವನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಾಡಿನಾದ್ಯಂತ ಮಾಡಲಿದ್ದಾರೆ.

More from Filmibeat

English summary
Kannada Actor Sudeep Fans help for poor people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X