»   » ಅಭಿಮಾನಿ ಕೇಳಿದ್ದಕ್ಕೆ ಹಾಕಿದ್ದ ಜಾಕೆಟ್ ಬಿಚ್ಚಿಕೊಟ್ಟ ಸುದೀಪ್

ಅಭಿಮಾನಿ ಕೇಳಿದ್ದಕ್ಕೆ ಹಾಕಿದ್ದ ಜಾಕೆಟ್ ಬಿಚ್ಚಿಕೊಟ್ಟ ಸುದೀಪ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹೆಚ್ಚು ಬೆಲ ಕೊಡ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುದೀಪ್ ಅವರನ್ನ ನೇರವಾಗಿ ನೋಡಲು, ಮಾತಾಡಲು ಸಾಧ್ಯವಾಗದೇ ಹೋದ್ರೆ ಟ್ವಿಟ್ಟರ್ ನಲ್ಲಿ ಖಂಡಿತಾ ಅವರೊಂದಿಗೆ ಮಾತನಾಡಬಹುದು.

ಹೀಗೆ, ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬ ಸುದೀಪ್ ಅವರು ಹಾಕಿಕೊಂಡಿದ್ದ ಜಾಕೆಟ್ ನ್ನ ಉಡುಗೊರೆಯಾಗಿ ಕೇಳಿದ್ದಾರೆ. ಈ ಅಭಿಮಾನಿ ಕೇಳಿದ ಕೂಡಲೇ ಇಲ್ಲ ಎನ್ನದ ಸುದೀಪ್, ಆ ಜಾಕೆಟ್ ನ್ನ ಬಿಚ್ಚಿ ಕೊಟ್ಟಿದ್ದಾರೆ.

ಅಂದ್ಹಾಗೆ, ಕಿಚ್ಚನಿಂದ ಜಾಕೆಟ್ ಉಡುಗೊರೆಯಾಗಿ ಪಡೆದುಕೊಂಡ ಆ ಅಭಿಮಾನಿ ಒಬ್ಬ ಸೆಲೆಬ್ರಿಟಿ. ಹಾಗಿದ್ರೆ ಯಾರದು? ಮುಂದೆ ಓದಿ.....

ಅ ಅಭಿಮಾನಿ 'RJ ಸುದೇಶ್'

ರೇಡಿಯೋ ಮಿರ್ಚಿಯ ಆರ್ ಜೆ ಸುದೇಶ್ ಕೇಳಿದರೆಂಬ ಕಾರಣಕ್ಕೆ ತಮ್ಮ ಮೈಮೇಲಿದ್ದ ಜಾಕೆಟ್ ಬಿಚ್ಚಿಕೊಟ್ಟಿದ್ದಾರೆ ನಟ ಸುದೀಪ್‌. ಅಷ್ಟೇ ಅಲ್ಲದೆ, ಅದರ ಮೇಲೆ ತಮ್ಮ ಅಟೋಗ್ರಫ್ ಹಾಕಿ ವಿಶ್ ಕೂಡ ಮಾಡಿದ್ದಾರೆ.

'ವಿಲನ್' ನಂತರ 'ಪೈಲ್ವಾನ್' ಆದ ಕಿಚ್ಚ ಸುದೀಪ್

ಟ್ವಿಟ್ಟರ್ ನಲ್ಲಿ ಬೇಡಿಕೆ ಇಟ್ಟಿದ್ದ ಸುದೇಶ್

ಸುದೀಪ್ ಅವರ ಬಳಿ ಈ ಜಾಕೆಟ್ ನೋಡಿದ್ದ ಆರ್ ಜೆ ಸುದೇಶ್ ತಮ್ಮ ಟ್ವಿಟ್ಟರ್ ಮೂಲಕ ''ಸ್ವೀಟ್ ಶರ್ಟ್/ಬಿಳಿ ಜರ್ಕಿನ್ ದಯವಿಟ್ಟು ನನಗೆ ಕೊಡ್ತೀರಾ? ಇದನ್ನು ನೀವು ಏನು ಬೇಕಾದರೂ ಅಂದುಕೊಳ್ಳಿ. ಆದರೆ ನಿರ್ಲಕ್ಷ್ಯ ಮಾಡಬೇಡಿ'' ಎಂದು ಕೇಳಿಕೊಂಡಿದ್ದರು.

'ಬಿಗ್ ಬಾಸ್' ಪ್ರೋಮೋ ಶೂಟ್ ಗೆ ತಯಾರಿ, ಹೇಗಿರುತ್ತೆ 'ಸೀಸನ್-5' ಟೀಸರ್?

ಕೊಟ್ಟೇ ಬಿಟ್ಟರು ಸುದೀಪ್

ಆರ್ ಜೆ ಸುದೇಶ್ ಅವರ ಟ್ವಿಟ್ಟರ್ ಗೆ ಸ್ಪಂದಿಸಿರುವ ಸುದೀಪ್‌ ಸರಿ ಕೊಡುತ್ತೇನೆ ಎಂದು ಹೇಳಿ ಕೊಟ್ಟೇ ಬಿಟ್ಟರು.

ಸೆಪ್ಟಂಬರ್ 2ಕ್ಕೆ ಸರ್ಪ್ರೈಸ್, ಸುದೀಪ್ ವೃತ್ತಿ ಜೀವನದಲ್ಲಿ ಇದು ಮೊದಲು.!

ಫುಲ್ ಖುಷ್ ಆದ ಸುದೇಶ್

ಕಿಚ್ಚನ ಈ ಪ್ರತಿಕ್ರಿಯೆಗೆ ಆರ್ ಜೆ ಸುದೇಶ್ ಸಿಕ್ಕಾಪಟ್ಟೆ ಖುಷ್ ಆಗಿಬಿಟ್ಟರು. ಈ ಸಂತಸದಲ್ಲಿ ಏನೂ ಮಾತನಾಡಬೇಕು ಎನ್ನುವುದನ್ನೇ ಮರೆತು ಥ್ರಿಲ್ ಆದರು.

ಜಾಕೆಟ್ ಜೊತೆ ಖುಷಿ ಹಂಚಿಕೊಂಡ ಸುದೇಶ್

ಕೊನೆಗೂ ಸುದೀಪ್ ಅವರು ಹಾಕಿಕೊಂಡಿದ್ದ ಜಾಕೆಟ್ ನಲ್ಲಿ ಪಡೆದುಕೊಂಡ ಆರ್ ಜೆ ಸುದೇಶ್ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಈ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಈ ವಿಷ್ಯವೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಸುದೀಪ್ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

English summary
Kannada Actor, Kiccha Sudeep gave his jacket to Radio mirchi Rj Sudesh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada