»   » 'ಗಾಲ್ಫ್ ಸ್ಟಿಕ್' ಹಿಡಿದು ಆಟಕ್ಕಿಳಿದ ಸ್ಟೈಲಿಶ್ ಸ್ಟಾರ್ ಸುದೀಪ್

'ಗಾಲ್ಫ್ ಸ್ಟಿಕ್' ಹಿಡಿದು ಆಟಕ್ಕಿಳಿದ ಸ್ಟೈಲಿಶ್ ಸ್ಟಾರ್ ಸುದೀಪ್

Posted By:
Subscribe to Filmibeat Kannada

'ದಿ ವಿಲನ್' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಗೆಟಪ್ ನೋಡಿ ಬೆರಗಾಗಿದ್ದ ಅಭಿಮಾನಿಗಳು ಈಗ ಕಿಚ್ಚನ ಹೊಸ ಅವತಾರ ನೋಡಿ ವಿಸ್ಮಯಗೊಂಡಿದ್ದಾರೆ. ಪ್ರತಿಯೊಂದು ಚಿತ್ರದಲ್ಲು ವಿಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿರುವ ಕಿಚ್ಚ, ಈಗ ಮತ್ತೊಂದು ಹೊಸ ವೇಷ ತೊಟ್ಟಿದ್ದಾರೆ. ಆದ್ರೆ, ಇದು 'ದಿ ವಿಲನ್' ಚಿತ್ರಕ್ಕಾಗಿ ಅಲ್ಲ ಎನ್ನುವುದು ನೆನಪಿರಲಿ.

ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳು, ಆ ಪಾತ್ರಕ್ಕೆ ತಕ್ಕ ಮೇಕ್ ಓವರ್, ಬಾಡಿ ಲಾಂಗ್ವೆಜ್ ಹೀಗೆ ವಿಭಿನ್ನ ಸಿನಿಮಾಗಳನ್ನ ಕೈಗೆತ್ತಿಕೊಳ್ಳುವ ಸುದೀಪ್ ಅವರು 'ಕನ್ನಡ ಮೀಡಿಯಂ ರಾಜು' ಚಿತ್ರದಲ್ಲಿ ವಿಶೇಷ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಆದ್ರೆ, ಈ ಚಿತ್ರದಲ್ಲಿ ಅವರ ಪಾತ್ರವೇನು? ಅವರ ಗೆಟಪ್ ಹೇಗಿರುತ್ತೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಈಗ ಸುದೀಪ್ ಅವರ ಲುಕ್ ಬಹಿರಂಗವಾಗಿದೆ. ಮುಂದೆ ಓದಿ.....?

'ಗಾಲ್ಫ್' ಆಟಗಾರನಾದ ಕಿಚ್ಚ

'ಕನ್ನಡ ಮೀಡಿಯಂ ರಾಜು' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಲುಕ್ ಸಖತ್ ಸ್ಟೈಲಿಶ್ ಆಗಿದ್ದು, ಗಾಲ್ಫ್ ಆಟಗಾರನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

'ಕನ್ನಡ ಮೀಡಿಯಂ' ರಾಜುಗೆ ಕಿಚ್ಚ ಸುದೀಪ್ ಸಾಥ್

ಕಿಚ್ಚನ ಸ್ಟೈಲ್ ಗೆ ಫಿದಾ

ಗಾಲ್ಫ್ ಸ್ಟಿಕ್ ಹಿಡಿದು ಚೆಂಡು ಹೊಡೆಯುತ್ತಿರುವ ಸುದೀಪ್ ಅವರ ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನುರಿತ ಗಾಲ್ಫ್ ಆಟಗಾರನಂತೆ ಮಿಂಚಿರುವ ಸುದೀಪ್ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ.

ಸುದೀಪ್ ಚಿತ್ರಕ್ಕೂ ತಟ್ಟಿದ ಸಚಿವ 'ಡಿಕೆಶಿ' ಐಟಿ ದಾಳಿ ಬಿಸಿ

ನಾಯಕನಿಗೆ ಸಾಥ್ ಕೊಟ್ಟ ಕಿಚ್ಚ

ಸುದೀಪ್ ಪಾತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲವಾದರೂ, 'ಕನ್ನಡ ಮೀಡಿಯಂ ರಾಜು' ಚಿತ್ರದ ನಾಯಕ ಗುರುನಂದನ್ ಅವರಿಗೆ ಚಿತ್ರದಲ್ಲಿ ಬುದ್ಧಿ ಹೇಳುವ ವ್ಯಕ್ತಿಯಾಗಿ ಸುದೀಪ್ ಅಭಿನಯಿಸಿದ್ದಾರಂತೆ. ಆದ್ರೆ, ಚಿತ್ರದಲ್ಲೂ ಸುದೀಪ್ ತಮ್ಮ ಪಾತ್ರವನ್ನೇ ನಿರ್ವಹಿಸುತ್ತಿದ್ದಾರಾ? ಕಾದುನೋಡಬೇಕು.

ಈ ಹಿಂದೆ 'ಶೂಟರ್' ಆಗಿದ್ದ ಕಿಚ್ಚ

ಈ ಹಿಂದೆ ಎಸ್.ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಶೂಟರ್ ಲುಕ್ ನಲ್ಲಿ ಸುದೀಪ್ ಅಬ್ಬರಿಸಿದ್ದರು.

ಸುದೀಪ್ ಅತಿಥಿ ಪಾತ್ರಗಳು

ಅಂದ್ಹಾಗೆ, ಸುದೀಪ್ ಅತಿಥಿ ಪಾತ್ರ ನಿರ್ವಹಿಸುತ್ತಿರುವುದು ಇದೇ ಮೊದಲಲ್ಲ. 'ತುಂಟಾಟ', 'ಗುನ್ನ', 'ಜಾಕ್ ಪಾಟ್', 'ಕೇರ್ ಆಫ್ ಫುಟ್‍ಪಾತ್', 'ಮಾತಾಡ್ ಮಾತಾಡ್ ಮಲ್ಲಿಗೆ', 'ಮೇಘವೇ ಮೇಘವೇ', 'ರಂಗನ್ ಸ್ಟೈಲ್', 'ಲವ್ ಯೂ ಅಲಿಯಾ', 'ಅಪೂರ್ವ' ಸೇರಿದಂತೆ ಹಲವು ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

English summary
Kannada Actor Sudeep Playing a Golf Player Role in Kannada Medium Raju Movie. The Movie Directed by Naresh Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada