ವಿಷ್ಣುದಾದಾನ ನೆನೆದು ಕಿಚ್ಚ ಸುದೀಪ್ ಭಾವುಕ ಟ್ವೀಟ್
Recommended Video
ಸಾಹಸ ಸಿಂಹ, ಡಾ.ವಿಷ್ಣುವರ್ಧನ್ ಅವರ ಜನ್ಮ. ಅಭಿಮಾನಿಗಳು ಇಂದು ವಿಷ್ಣುವರ್ಧನ್ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ವಿಷ್ಣುವರ್ಧನ್ ನೆನಪಿಗಾಗಿ ಸುದೀಪ್ ಅವರ ಟ್ವಿಟರ್ ಅಕೌಂಟ್ ನ ಡಿಪಿಯಲ್ಲಿ ವಿಷ್ಣುದಾದಾನ ಫೋಟೋ ಹಾಕಿಕೊಂಡಿದ್ದಾರೆ.
ಸಾಹಸ ಸಿಂಹನ ಹಲವು ಫೋಟೋಗಳಿರುವ ಡಿಪಿಯನ್ನು ಕಿಚ್ಚ ಸೇರಿದಂತೆ ವಿಷ್ಣುವರ್ಧನ್ ಅಭಿಮಾನಿಗಳು ಸಹ ಹಾಕಿಕೊಂಡಿದ್ದಾರೆ. ಇದರ ಜೊತೆಗೆ ಸುದೀಪ್ ವಿಷ್ಣುವರ್ಧನ್ ನೆನೆದು ಭಾವುಕ ಟ್ವೀಟ್ ಮಾಡಿದ್ದಾರೆ.
"ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲೊಬ್ಬ. ಕಿಚ್ಚ" ಎಂದು ಬರೆದುಕೊಂಡಿದ್ದಾರೆ.

ಇನ್ನು"ನಿಮ್ಮ ಜೊತೆ ಅಭಿನಯಿಸುವ ಹಾಗೂ ನಿಮ್ಮ ಪಾತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ನನಗೆ ದೊಡ್ಡ ಗೌರವದ ಸಂಗತಿ" ಎಂದು ಹೇಳಿದ್ದಾರೆ. ಟ್ವಿಟ್ಟರ್ ಅಕೌಂಟ್ ಗೆ ವಿಷ್ಣುವರ್ಧನ್ ಫೋಟೋ ಹಾಕಿ ಇದು ಫ್ಯಾನ್ ಮೊಮೆಂಟ್ ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











