ರಕ್ಷಿತ್ ಶೆಟ್ಟಿ ಮಾತು ಕೇಳಿ ವೇದಿಕೆ ಮೇಲೇರಿ ಬಂದು ತಬ್ಬಿಕೊಂಡ ಸುದೀಪ್

ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ತಂಡ ಪ್ರಚಾರ ಕಾರ್ಯವನ್ನು ಅದ್ಧೂರಿಯಾಗಿ ಆರಂಭ ಮಾಡಿದೆ.

'ವಿಕ್ರಾಂತ್ ರೋಣ' ಸಿನಿಮಾದ 3ಡಿ ಟ್ರೈಲರ್ ಬಿಡುಗಡೆ ಜೊತೆಗೆ ಸುದ್ದಿಗೋಷ್ಠಿ ಸಮಾರಂಭವನ್ನು ಇಂದು ಚಿತ್ರತಂಡವು ಇಂದು ನಗರದಲ್ಲಿ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್, ರವಿಚಂದ್ರನ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಡಾಲಿ ಧನಂಜಯ್, ಸೃಜನ್ ಲೋಕೇಶ್, ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಖ್ಯಾತ ನಟರೆಲ್ಲ ನೆರೆದಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಅತಿಥಿಗಳು ನಟ ಸುದೀಪ್ ಬಗ್ಗೆ ಅಭಿಮಾನದ, ಮೆಚ್ಚುಗೆಯ ಮಾತುಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ, ಸುದೀಪ್ ಬಗ್ಗೆ ಆಡಿದ ಮಾತುಗಳು ವಿಶೇಷವಾಗಿದ್ದವು, ರಕ್ಷಿತ್ ಶೆಟ್ಟಿ ಮಾತು ಕೇಳಿ ಸ್ವತಃ ಸುದೀಪ್, ವೇದಿಕೆ ಮೇಲೇರಿ ಬಂದು ರಕ್ಷಿತ್ ಶೆಟ್ಟಿಯನ್ನು ತಬ್ಬಿಕೊಂಡರು. ಆ ಕ್ಷಣ ಅದ್ಭುತವಾಗಿತ್ತು.

ಸುದೀಪ್‌ ನನ್ನ ನೆಚ್ಚಿನ ಹೀರೋ: ರಕ್ಷಿತ್ ಶೆಟ್ಟಿ

ಸುದೀಪ್‌ ನನ್ನ ನೆಚ್ಚಿನ ಹೀರೋ: ರಕ್ಷಿತ್ ಶೆಟ್ಟಿ

''ನೆವರ್ ಮೀಟ್ ಯುವರ್ ಹೀರೋ'' ಎಂಬ ಮಾತೊಂದು ಇದೆ. ಹೀರೋ ಬಗ್ಗೆ ನಮ್ಮ ತಲೆಯಲ್ಲಿ ಅನೇಕ ಕಲ್ಪನೆಗಳು ಇರುತ್ತವೆ. ಆದರೆ ಹಿರೋ ಅನ್ನು ಭೇಟಿಯಾದ ಮೇಲೆ ಆ ಕಲ್ಪನೆಗಳು ಕರಗಿಹೋಗುತ್ತವಂತೆ. ಆದರೆ ಸಿನಿಮಾ ರಂಗಕ್ಕೆ ಬಂದಾಗ ನನಗೆ ಇಂಥಹಾ ನಟ ಅಚ್ಚುಮೆಚ್ಚು ಎಂದೇನೂ ಇರಲಿಲ್ಲ. ಆದರೆ ಸುದೀಪ್ ಅವರನ್ನು ಭೇಟಿಯಾದ ಮೇಲೆ ಸುದೀಪ್ ನನ್ನ ಮೆಚ್ಚಿನ ಹೀರೋ ಆದರು. ಅವರನ್ನು ಭೇಟಿಯಾದ ಮೇಲೆ ಅವರ ವ್ಯಕ್ತಿತ್ವ, ಸಿನಿಮಾ ಪ್ರೀತಿ ನನ್ನನ್ನು ಸೆಳೆಯಿತು'' ಎಂದಿದ್ದಾರೆ ರಕ್ಷಿತ್.

ರಕ್ಷಿತ್ ಅನ್ನು ತಬ್ಬಿಕೊಂಡ ನಟ ಸುದೀಪ್

ರಕ್ಷಿತ್ ಅನ್ನು ತಬ್ಬಿಕೊಂಡ ನಟ ಸುದೀಪ್

''ಪ್ರತಿ ಸಲ ಸುದೀಪ್ ನನ್ನ ಸಿನಿಮಾ ನೋಡಿದಾಗ ನನಗೆ ಸಂದೇಶ ಕಳಿಸುತ್ತಾರೆ. 'ಉಳಿದವರು ಕಂಡಂತೆ' ಸಿನಿಮಾಗಂತೂ ಬಹಳ ದೊಡ್ಡ ಸಂದೇಶ ಕಳಿಸಿದ್ದರು. '777 ಚಾರ್ಲಿ' ಸಿನಿಮಾಕ್ಕೂ ಅಷ್ಟೆ. ಅವರ ಸಂದೇಶದಲ್ಲಿ ಒಂದು ಸಾಲಂತೂ ನನ್ನ ನಟನೆ ಬಗ್ಗೆ ಏನಾದರೂ ಬರೆದೇ ಇರುತ್ತಾರೆ. ಆಗೆಲ್ಲ ನಾನು ಯೋಚಿಸುತ್ತಿದ್ದೆ. ಸ್ವತಃ ಅಷ್ಟು ದೊಡ್ಡ ಪ್ರತಿಭಾವಂತ ನಟನಾಗಿರುವ ವ್ಯಕ್ತಿ, ಆತನಿಗಿಂತಲೂ ಕಡಿಮೆ ಪ್ರತಿಭಾವಂತ ನಟನ ನಟನೆಯನ್ನು ಹೊಗಳಲು ಹೇಗೆ ಸಾಧ್ಯವಾಗಬಹುದು. ಒಬ್ಬ ನಟನಾಗಿ ಅವರು ಅದ್ಭುತ. ಭಾರತದ ಅತ್ಯುತ್ತಮ ಐದು ನಟರಲ್ಲಿ ಒಬ್ಬರು ಸುದೀಪ್'' ಎಂದರು ರಕ್ಷಿತ್ ಶೆಟ್ಟಿ. ಕೂಡಲೆ ವೇದಿಕೆ ಏರಿದ ಸುದೀಪ್, ರಕ್ಷಿತ್ ಅನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದರು.

ಸುದೀಪ್ ಮಾಯಾ ಡಬ್ಬಿ ಇದ್ದಂತೆ: ರಕ್ಷಿತ್

ಸುದೀಪ್ ಮಾಯಾ ಡಬ್ಬಿ ಇದ್ದಂತೆ: ರಕ್ಷಿತ್

ನಂತರ ಮಾತು ಮುಂದುವರೆಸಿದ ರಕ್ಷಿತ್ ಶೆಟ್ಟಿ, ''ಸುದೀಪ್ ಒಂದು ರೀತಿ ಮಾಯಾ ಡಬ್ಬಿ ಇದ್ದಂತೆ. ಅವರೊಳಗೆ ಅದ್ಭುತ ಜಗತ್ತೇ ಇದೆ. ಯಾವ ನಿರ್ದೇಶಕ ಅವರಿಂದ ಏನು ಹೊರತೆಗೆಯುತ್ತಾನೆ ಎಂಬುವುದು ಮುಖ್ಯ. ಅವರ ಒಳಗೆ ಇನ್ನೂ ಅದ್ಭುತ ನಟ ಇದ್ದಾನೆ ಆದರೆ ಅದನ್ನು ಹೊರಗೆ ತೆಗೆಯುವ ಸೂಕ್ತ ನಿರ್ದೇಶಕರು ಬೇಕು. ಇಂದು ನಾನು 'ವಿಕ್ರಾಂತ್ ರೋಣ' ಬಗ್ಗೆ ಬಹಳ ಖುಷಿಯಾಗಿದ್ದೀನಿ ಏಕೆಂದರೆ ಅದರ ನಿರ್ದೇಶಕ ಅನುಪ್ ಭಂಡಾರಿ. ಅವರೊಬ್ಬ ಪ್ರತಿಭಾನ್ವಿತ ಕನಸುಗಾರ'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಅನುಪ್ ಅಂಥಹಾ ನಿರ್ದೇಶಕರು ಬೇಕು: ರಕ್ಷಿತ್

ಅನುಪ್ ಅಂಥಹಾ ನಿರ್ದೇಶಕರು ಬೇಕು: ರಕ್ಷಿತ್

''ಅನುಪ್ ಭಂಡಾರಿ ನಾನು ಸದಾ ನಿರೀಕ್ಷೆಯಿಂದ ನೋಡುವ ನಿರ್ದೇಶಕ. ಈ ವ್ಯಕ್ತಿ ಮುಂದೇನು ನೀಡುತ್ತಾನೆ ಎಂದು ನಾನು ಕಾಯುತ್ತಿರುತ್ತೇನೆ. ಏಕೆಂದರೆ ಅವರೊಬ್ಬ ಅದ್ಭುತವಾದ ಕನಸುಗಾರ ಎಂಬುದು ನನಗೆ ಗೊತ್ತು. ಅನುಪ್ ಭಂಡಾರಿಯಂಥಹಾ ಹಲವು ನಿರ್ದೇಶಕರು ನಮಗೆ ಬೇಕಾಗಿದ್ದಾರೆ. ಈಗ ಬಿಡುಗಡೆ ಆಗಿರುವ ವಿಷ್ಯುಲ್‌ಗಳು ಅದ್ಭುತವಾಗಿ ಕಾಣುತ್ತಿವೆ. ನಾನಂತೂ ಸಿನಿಮಾ ನೋಡಲು ಕಾತರನಾಗಿದ್ದೇನೆ. ಕನ್ನಡ ಸಿನಿಮಾರಂಗದಿಂದ ಭಾರತಕ್ಕೆ ಒಂದು ಒಳ್ಳೆಯ ಕೊಡುಗೆ ಈ ಸಿನಿಮಾ ಆಗುತ್ತದೆ'' ಎಂದರು ರಕ್ಷಿತ್ ಶೆಟ್ಟಿ.

ನಮ್ಮ ಚಿತ್ರರಂಗ ಸಣ್ಣದಲ್ಲ ನಮ್ಮ ಸಿನಿಮಾಗಳು ದೊಡ್ಡದು: ರಕ್ಷಿತ್

ನಮ್ಮ ಚಿತ್ರರಂಗ ಸಣ್ಣದಲ್ಲ ನಮ್ಮ ಸಿನಿಮಾಗಳು ದೊಡ್ಡದು: ರಕ್ಷಿತ್

''ನಾನು ಉದ್ಯಮಕ್ಕೆ ಬಂದಾಗ ಕೆಲವರು ಹೇಳುತ್ತಿದ್ದರು. ದಕ್ಷಿಣದ ಇತರೆ ಸಿನಿಮಾ ರಂಗಗಳಿಗೆ ಹೋಲಿಸಿದರೆ ಕನ್ನಡದ ಸಿನಿಮಾಉದ್ಯಮ ಚಿಕ್ಕದು ಎಂದು. ಅದು ತಪ್ಪು, ಉದ್ಯಮ ಸಣ್ಣದು-ದೊಡ್ಡದು ಎಂದಿರಲು ಸಾಧ್ಯವಿಲ್ಲ. ನಾವು ಮಾಡುವ ಸಿನಿಮಾಗಳು ದೊಡ್ಡವು-ಸಣ್ಣವು ಇರುತ್ತವೆ ಅಷ್ಟೆ. ನಾವು ಸಿನಿಮಾ ಮಾಡಲು ಉದ್ಯಮ ನಮಗೊಂದು ವೇದಿಕೆ ಒದಗಿಸುತ್ತದೆ ಅಷ್ಟೆ. ನಮ್ಮ ಉದ್ಯಮದಿಂದ ಒಳ್ಳೊಳ್ಳೆಯ ಸಿನಿಮಾಗಳು ಬರುವ ಮೂಲಕ ನಮ್ಮ ಉದ್ಯಮ ದೊಡ್ಡದು ಎಂಬುದು ನಿರೂಪಿತವಾಗುತ್ತಿದೆ. ಇಂಥಹಾ ಸಿನಿಮಾಗಳು ಇನ್ನಷ್ಟು ಬರಬೇಕು, ನಾನು 'ವಿಕ್ರಾಂತ್ ರೋಣ' ನೋಡಲು ಕಾಯುತ್ತಿದ್ದೇನೆ. ಸಿನಿಮಾ ತಂಡಕ್ಕೆ ಶುಭಾಶಯಗಳು'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

More from Filmibeat

English summary
Actor Sudeep touched by Rakshit Shetty's words in Vikranth Rona Trailer launch event. Sudeep hugged Rakshit on the stage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X