ಚಿತ್ರೀಕರಣದ ವೇಳೆ ನಟ ಸುದೀಪ್ ಗೆ ಗಾಯ
ನಟ ಸುದೀಪ್ ಅವರಿಗೆ ಸಿನಿಮಾ ಚಿತ್ರೀಕರಣದ ವೇಳೆ ಗಾಯ ಆಗಿದೆ. ಈ ಕಾರಣದಿಂದ ನಿನ್ನೆ ನಡೆದ 'ದಿ ವಿಲನ್' ಮಾಧ್ಯಮಗೋಷ್ಠಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ.

ಈ ಬಗ್ಗೆ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ದಿ ವಿಲನ್' ತಂಡಕ್ಕೆ ನನ್ನ ಶುಭಾಶಯ. ಇಂದಿನ ಪತ್ರಿಕಾಗೋಷ್ಠಿ ಕಾರ್ಯಕ್ರಮಕ್ಕೆ ಬರಲು ಸಾಧ್ಯ ಆಗದೆ ಇರುವ ವಿಷಯವನ್ನು ಮಾಧ್ಯಮ ಹಾಗೂ ಚಿತ್ರತಂಡಕ್ಕೆ ತಿಳಿಸುತ್ತಿದ್ದೇನೆ. ಇಂದು ಚಿತ್ರೀಕರಣ ವೇಳೆ ನನ್ನ ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ಹಾಗಾಗಿ, ನಾನು ಪ್ರಯಾಣ ಮಾಡಲು ಆಗಲಿಲ್ಲ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ'' ಎಂದು ಬರೆದುಕೊಂಡಿದ್ದಾರೆ.
ಸುದೀಪ್ ತಮ್ಮ ಟ್ವೀಟ್ ನಲ್ಲಿ ಯಾವ ಸಿನಿಮಾದ ಚಿತ್ರೀಕರಣದಲ್ಲಿ ಈ ಘಟನೆ ಆಗಿದೆ ಎಂದು ತಿಳಿಸಿಲ್ಲ. ಆದರೆ, ನಿನ್ನೆ ಹೈದರಾಬಾದ್ ನಲ್ಲಿ 'ಪೈಲ್ಪಾನ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದೇ ಶೂಟಿಂಗ್ ನಲ್ಲಿ ಸುದೀಪ್ ಗೆ ಪೆಟ್ಟಾಗಿರಬಹುದು.
ಅಂದಹಾಗೆ, ನಿನ್ನೆ 'ದಿ ವಿಲನ್' ಸಿನಿಮಾದ ರಿಲೀಸಿಂಗ್ ಟೀಸರ್ ಬಿಡುಗಡೆಯಾಗಿದೆ. ಸದ್ಯ ಈ ಟೀಸರ್ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ 1 ನಲ್ಲಿ ಇದೆ. ಅಕ್ಟೋಬರ್ 18 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.


Click it and Unblock the Notifications











