»   » 'ಆಲ್ ಇಂಡಿಯಾ ಕಟೌಟ್' ಪಟ್ಟ ಗಿಟ್ಟಿಸಿಕೊಂಡ ಕಿಚ್ಚ ಸುದೀಪ್

'ಆಲ್ ಇಂಡಿಯಾ ಕಟೌಟ್' ಪಟ್ಟ ಗಿಟ್ಟಿಸಿಕೊಂಡ ಕಿಚ್ಚ ಸುದೀಪ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಆರಡಿ ಕಟೌಟ್ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂತ. ಇದೀಗ ಎಲ್ಲರ ಮೆಚ್ಚಿನ ಅದೇ ಸುದೀಪ್ ಅವರು 'ಆಲ್ ಇಂಡಿಯಾ ಕಟೌಟ್' ಅಂತ ಹೊಸ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಮೊನ್ನೆ ಮೊನ್ನೆ ಬೆಂಗಳೂರು ಟೈಮ್ಸ್ ಅವರು ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ 1ನೇ ಸ್ಥಾನ ಗಿಟ್ಟಿಸಿಕೊಂಡು '2015ರ ಮೋಸ್ಟ್ ಡಿಸೈರಬಲ್ ಮೆನ್' ಅಂತ ಕರೆಸಿಕೊಂಡ ಕಿಚ್ಚ ಸುದೀಪ್ ಈ ಬಾರಿ ಮತ್ತೆ 'ಆಲ್ ಇಂಡಿಯಾ ಮೋಸ್ಟ್ ಡಿಸೈರಬಲ್ ಮೆನ್ 2015', ಸ್ಫರ್ಧೆಯಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ 43ನೇ ಸ್ಥಾನದಲ್ಲಿದ್ದಾರೆ.[ಯಶ್ ಹಿಂದಿಕ್ಕಿ ನಂ.1 ಪಟ್ಟ ಗಿಟ್ಟಿಸಿಕೊಂಡ ಕಿಚ್ಚ ಸುದೀಪ್]

Actor Sudeep is one of the most desirable men in India

ಟೈಮ್ಸ್ ಆಫ್ ಇಂಡಿಯಾದವರು ನಡೆಸುವ 'ಆಲ್ ಇಂಡಿಯಾ ಮೋಸ್ಟ್ ಡಿಸೈರಬಲ್ ಮೆನ್ 2015' ಆನ್ ಲೈನ್ ಸರ್ವೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಕಿಚ್ಚ ಸುದೀಪ್ ಅವರು 43ನೇ ಸ್ಥಾನ ಗಳಿಸಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಮಾತ್ರವಲ್ಲದೇ ಕರ್ನಾಟಕವನ್ನು ಪ್ರತಿನಿಧಿಸಿದ ಮೊದಲ ಸ್ಟಾರ್ ಸೆಲೆಬ್ರಿಟಿ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಕಳೆದ ಬಾರಿ ಸುದೀಪ್ ಅವರು 47ನೇ ಸ್ಥಾನ ಪಡೆದುಕೊಂಡಿದ್ದವರು ಈ ಬಾರಿ 43ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ಕಳೆದ ವಾರ ಆಲ್ ಇಂಡಿಯಾ ಮೋಸ್ಟ್ ಡಿಸೈರಬಲ್ ಮೆನ್ 2015 ಪಟ್ಟಿ ಬಿಡುಗಡೆ ಆಗಿದ್ದು, ಬರೀ ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೇ ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗ ಕ್ಷೇತ್ರದವರೂ ಈ ಪಟ್ಟಿಯಲ್ಲಿ ಸೇರಿಕೊಂಡಿದ್ದರು.[ಕೃತಿ ಮುಡಿಗೇರಿದ 'ಬೆಂಗಳೂರಿಗರ ಬಹುಮೆಚ್ಚುಗೆಯ ನಟಿ' ಕಿರೀಟ]

ತಮಿಳು ನಟ ಧನುಷ್, ತೆಲುಗು ನಟ ಮಹೇಶ್ ಬಾಬು, ನಟ ರಾಣಾ ದಗ್ಗುಬಾಟಿ, ನಟ ಸೂರ್ಯ, ನಟ ಪ್ರಭಾಸ್ ಮತ್ತು ಮಲಯಾಳಂ ನಟ ದುಲ್ಕರ್ ಸಲ್ಮಾನ್ (ಮಮ್ಮುಟ್ಟಿ ಮಗ) ಸೇರಿದಂತೆ ಕೆಲವು ಕ್ರಿಕೆಟಿಗರು ಮತ್ತು ಮಾಡೆಲ್ ಗಳು ಪಟ್ಟಿಯಲ್ಲಿದ್ದರು.[ಕಿಚ್ಚ ಸುದೀಪ್ ಹಿಂದಿಕ್ಕಿದ ಯಶ್ ನಂ.1]

'ಬಾಜಿರಾವ್ ಮಸ್ತಾನಿ' ಖ್ಯಾತಿಯ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಟಾಪ್ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡು 'ಆಲ್ ಇಂಡಿಯಾ ದ ಮೋಸ್ಟ್ ಡಿಸೈರಬಲ್ ಮೆನ್ 2015' ಪಟ್ಟ ಗಿಟ್ಟಿಸಿಕೊಂಡರೆ, ಅತೀ ಹೆಚ್ಚು ರ್ಯಾಂಕ್ ಗಳಿಸಿ ತೆಲುಗು ನಟ ಮಹೇಶ್ ಬಾಬು 6ನೇ ಸ್ಥಾನ ಗಳಿಸಿದ್ದಾರೆ. 'ಆಲ್ ಇಂಡಿಯಾ ಮೋಸ್ಟ್ ಡಿಸೈರಬಲ್ ಮೆನ್ 2015' ಪಟ್ಟಿಯಲ್ಲಿರುವವರ ಚಿತ್ರಗಳು..

-ಕರ್ನಾಟಕವನ್ನು ಪ್ರತಿನಿಧಿಸಿದ ಮೊದಲ ಸ್ಟಾರ್ ಸೆಲೆಬ್ರಿಟಿ ಕಿಚ್ಚ ಸುದೀಪ್ 43 ಸ್ಥಾನ ಅಲಂಕರಿಸಿದ್ದಾರೆ.

-ಕರ್ನಾಟಕವನ್ನು ಪ್ರತಿನಿಧಿಸಿದ ಮೊದಲ ಸ್ಟಾರ್ ಸೆಲೆಬ್ರಿಟಿ ಕಿಚ್ಚ ಸುದೀಪ್ 43 ಸ್ಥಾನ ಅಲಂಕರಿಸಿದ್ದಾರೆ.

-ನಂ.1 ಸ್ಥಾನ ಅಲಂಕರಿಸಿದ ಬಾಲಿವುಡ್ 'ಬಾಜೀರಾವ್ ಮಸ್ತಾನಿ' ನಟ ರಣವೀರ್ ಸಿಂಗ್

-ನಂ.1 ಸ್ಥಾನ ಅಲಂಕರಿಸಿದ ಬಾಲಿವುಡ್ 'ಬಾಜೀರಾವ್ ಮಸ್ತಾನಿ' ನಟ ರಣವೀರ್ ಸಿಂಗ್

-ಅತೀ ಹೆಚ್ಚು ರ್ಯಾಂಕ್ ಗಳಿಸಿ 6ನೇ ಸ್ಥಾನ ಗಳಿಸಿದ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು

-ಅತೀ ಹೆಚ್ಚು ರ್ಯಾಂಕ್ ಗಳಿಸಿ 6ನೇ ಸ್ಥಾನ ಗಳಿಸಿದ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು

-ತಮಿಳು ನಟ ಕಮ್ ನಿರ್ಮಾಪಕ ಧನುಷ್

-ತಮಿಳು ನಟ ಕಮ್ ನಿರ್ಮಾಪಕ ಧನುಷ್

-ಮಲಯಾಳಂ ನಟ ದುಲ್ಕರ್ ಸಲ್ಮಾನ್ (ಖ್ಯಾತ ನಟ ಮಮ್ಮುಟ್ಟಿ ಮಗ)

-ಮಲಯಾಳಂ ನಟ ದುಲ್ಕರ್ ಸಲ್ಮಾನ್ (ಖ್ಯಾತ ನಟ ಮಮ್ಮುಟ್ಟಿ ಮಗ)

-'ಬಾಹುಬಲಿ' ಖ್ಯಾತಿಯ ನಟ ಪ್ರಭಾಸ್

-'ಬಾಹುಬಲಿ' ಖ್ಯಾತಿಯ ನಟ ಪ್ರಭಾಸ್

-'ಬಾಹುಬಲಿ' ಖ್ಯಾತಿಯ ನಟ ರಾಣಾ ದಗ್ಗುಬಾಟಿ

-'ಬಾಹುಬಲಿ' ಖ್ಯಾತಿಯ ನಟ ರಾಣಾ ದಗ್ಗುಬಾಟಿ

-ತಮಿಳು ನಟ ಸೂರ್ಯ ಶಿವಕುಮಾರನ್

-ತಮಿಳು ನಟ ಸೂರ್ಯ ಶಿವಕುಮಾರನ್

English summary
Kannada Actor Sudeep has lived up to his image as an "All-India Cutout" In the all India most desirable men of 2015 as per the survey of Times of India, he is at number 43. He is the only celebrity from Karnataka in the list. He has moved up the ranking from last year's 47th place. Sudeep was first in the Karnataka listing announced last week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada