'ಭಾರ್ಗವ ಭಕ್ಷಿ' ಆಗಿ ಬಣ್ಣ ಹಚ್ಚಿದ ನಟ ಕಿಚ್ಚ ಸುದೀಪ್!
ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಬಳಿಕ ಆರ್. ಚಂದ್ರು ನಿರ್ದೇಶನಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗಂತಾ ಆರ್ ಚಂದ್ರು ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಹೊಸ ಸಿನಿಮಾ ಮಾಡುತ್ತಿಲ್ಲ. ಬದಲಿಗೆ ಸುದೀಪ್ ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ ನಟ ಉಪೇಂದ್ರ ನಾಯಕ ನಟ, ಈಗಾಗಲೆ ಉಪೇಂದ್ರ ಅವರ ಪಾತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಹಾಗಾಗಿ ಕಿಚ್ಚ ಸುದೀಪ್ ಭಾಗದ ಚಿತ್ರೀಕರಣ ಆರಂಭ ಆಗಿದೆ. ಸುದೀಪ್ ಪಾತ್ರದ ಹೆಸರು 'ಭಾರ್ಗವ ಭಕ್ಷಿ' ಈ ಹೆಸರೇ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ಸುದೀಪ್ ಚಿತ್ರೀಕರಣದಲ್ಲಿ ಭಾಗಿ ಆಗುವ ಬಗ್ಗೆ ನಿರ್ದೇಶಕ ಆರ್. ಚಂದ್ರು ದೃಢಪಡಿಸಿದ್ದಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತಿದೆ.
'ಕಬ್ಜ' ಮೊದಲ ದಿನದ ಶೂಟಿಂಗ್ ಮುಗಿಸಿದ ನಟ ಸುದೀಪ್!
ನಟ ಸುದೀಪ್ ಕಬ್ಜ ಚಿತ್ರದ ಮೊದಲ ದಿನದ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ. ಕಿಚ್ಚ ಸೆಟ್‌ನಲ್ಲಿ ಇರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ. ಫೋಟೊ ರಿವೀಲ್ ಅದರು ಕಿಚ್ಚನ ಲುಕ್ ಮಾತ್ರ ರಿವೀಲ್ ಆಗಿಲ್ಲ. ಸಹ ಕಲಾವಿದರು ಖಾಕಿ ಧರಿಸಿದ್ದಾರೆ. ಆದರೆ ಸುದೀಪ್ ಸಹಜ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಲುಕ್ ವಿಭಿನ್ನವಾಗಿ ಇರಲಿದೆ. ಇನ್ನು ನಿರ್ದೇಶಕ ಆರ್. ಚಂದ್ರು ಈ ಬಗ್ಗೆ ಟ್ವೀಟ್ ಮಾಡಿ ಕಿಚ್ಚ ಸುದೀಪ್ ಅವರಿಗೆ ಸ್ವಾಗತ ಕೋರಿದ್ದಾರೆ.

ಮಿನರ್ವಾ ಮಿಲ್‌ನಲ್ಲಿ ಬೃಹತ್ ಸೆಟ್!
ಕಬ್ಜ ಚಿತ್ರದ ಶೂಟಿಮಗ್‌ಗಾಗಿ ಮಿನರ್ವಾ ಮಿಲ್‌ನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಸೆಟ್‌ಗಾಗಿಯೇ ಚಿತ್ರ ತಂಡ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಇದು ರೆಟ್ರೋ ಕಥೆ ಆದ ಕಾರಣ ಚಿತ್ರದ ಬಹುತೇಕ ಭಾಗ ಸೆಟ್‌ನಲ್ಲೆ ನಡೆಯಲಿದೆ. ಈ ಹಿಂದೆ ಕಬ್ಜ ಚಿತ್ರದಲ್ಲಿ ನಟ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಕುಡ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್‌ನಲ್ಲಿ ಅವರ ಲುಕ್ ಹೇಗೆ ಇರಲಿದೆ ಎನ್ನುವ ಸುಳಿವು ಬಿಟ್ಟು ಕೊಡಲಾಗಿತ್ತು.
ಕಬ್ಜ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಆರ್. ಚಂದ್ರು ಅವರೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್‌ನಲ್ಲಿ ಚಿತ್ರ ತಯಾರಾಗುತ್ತಿದೆ.

ಎರಡು ಭಾಗಗಳಲ್ಲಿ ಬರಲಿದೆ 'ಕಬ್ಜ'!
ಕಬ್ಜ ಸಿನಿಮಾವನ್ನು ದೊಡ್ಡ ಕ್ಯಾನ್‌ವರ್ಸ್‌ನಲ್ಲಿ ಮಾಡಲಾಗುತ್ತಿದೆ. ಕನ್ನಡದ ಬಹು ದೊಡ್ಡ ಸಿನಿಮಾಗಳಲ್ಲಿ ಇದು ಕೂಡ ಒಂದಾಗಲಿದೆ. ಯಾಕೆಂದರೆ ಈ ಚಿತ್ರದ ಎರಡೂ ಭಾಗಗಳಲ್ಲಿ ತೆರೆಗ ಬರ್ತಿದೆ. ಭಾಗ 1ರ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ಆದರೂ ಇನ್ನೂ ಕೂಡ ನಾಯಕಿಯ ಹೆಸರನ್ನು ರಿವೀಲ್ ಮಾಡಿಲ್ಲ. ಹಾಗಾಗಿ ಚಿತ್ರದ ಬಗ್ಗೆ ಹಲವು ಕುತೂಹಲಗಳು ಹುಟ್ಟಿಕೊಂಡಿವೆ. ಇನ್ನೂ ಭಾಗ2 ಈ ಚಿತ್ರಕ್ಕಿಂದಲೂ ಒಂದು ಕೈ ಮೇಲೆ ಇರಲಿದೆ. ಎನ್ನುವ ಸುಳಿವು ಬಿಟ್ಟು ಕೊಟ್ಟಿದ್ದಾರೆ ನಿರ್ದೇಶಕ ಆರ್. ಚಂದ್ರು.

ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ಗೆ ರೆಡಿ!
ಕೋಟಿಗೊಬ್ಬ3 ಬಳಿಕ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಕಿಚ್ಚ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಮನೆ ಮಾಡಿದೆ. ಚಿತ್ರದ ರಿಲೀಸ್ ದಿನಾಂಕವನ್ನು ಕೂಡ ಚಿತ್ರ ತಂಡ ಪ್ರಕಟ ಮಾಡಿದೆ. ಫೆಬ್ರವರಿ 24ಕ್ಕೆ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲಿದೆ. ವಿಕ್ರಾಂತ್ ರೋಣ ಬಳಿಕ ಸುದೀಪ್, 'ಬಿಲ್ಲಾ ರಂಗ ಭಾಷ' ಚಿತ್ರದಲ್ಲಿ ನಟಿಸಲಿದ್ದಾರೆ.


Click it and Unblock the Notifications











