ಮತ್ತೆ ನಿರ್ದೇಶಕನ ಟೋಪಿ ಧರಿಸುತ್ತಿದ್ದಾರೆಯೇ ಸುದೀಪ್?
ಸುದೀಪ್ ನಟರಾಗಿ ಎಷ್ಟು ಪ್ರತಿಭಾವಂತರೋ ನಿರ್ದೇಶಕರಾಗಿಯೂ ಅಷ್ಟೇ ಪ್ರತಿಭಾವಂತರು. ನಿರ್ದೇಶಕರಾಗಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ ಸುದೀಪ್.
ಆದರೆ ಕೆಲ ವರ್ಷಗಳಿಂದ ನಿರ್ದೇಶನದಿಂದ ಅಂತರ ಕಾಯ್ದುಕೊಂಡಿದ್ದಾರೆ ಸುದೀಪ್. ಆದರೆ ಸುದೀಪ್ ಅವರ ನಿರ್ದೇಶನದ ಸಿನಿಮಾಗಳ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಶೀಘ್ರದಲ್ಲೇ ಒದಗುವ ಸಾಧ್ಯತೆ ಇದೆ.
ಹೌದು, ಪ್ರಸ್ತುತ ಪ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್, ಈ ಸಿನಿಮಾ ಮುಗಿದ ಕೂಡಲೇ ತಮ್ಮದೇ ನಿರ್ದೇಶನದ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

ಲಾಕ್‌ಡೌನ್ ಸಮಯದಲ್ಲಿ ಸುದೀಪ್ ಅವರು ಕತೆಯೊಂದನ್ನು ಬರೆದುಕೊಂಡಿದ್ದು, ಅದರ ಚಿತ್ರಕತೆಗೆ ಅಂತಿಮ ರೂಪು ರೇಷೆ ನೀಡುತ್ತಿದ್ದಾರೆ, ಫ್ಯಾಂಟಮ್ ಸಿನಿಮಾದ ನಂತರ ಸುದೀಪ್ ತಮ್ಮದೇ ನಿರ್ದೇಶನದ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ.
Recommended Video
ಸುದೀಪ್, ತಮ್ಮ ನಿರ್ದೇಶನದಲ್ಲಿ ಒಳ್ಳೆಯ ಸಿನಿಮಾಗಳನ್ನೇ ಕನ್ನಡಕ್ಕೆ ನೀಡಿದ್ದಾರೆ. ಮಾಮೂಲಿ ಕಮರ್ಷಿಯಲ್ ಅಲ್ಲದೆ, ಮೈ ಆಟೋಗ್ರಾಫ್, ಶಾಂತಿನಿವಾಸ, ಜಸ್ಟ್ ಮಾತ್ ಮಾತಲ್ಲಿ, ಸ್ವಾತಿ ಮುತ್ತು, ಕೆಂಪೇಗೌಡ ಅಂತಹಾ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಸುದೀಪ್. ರೀಮೇಕ್ ಸಿನಿಮಾದಲ್ಲೂ ಸ್ವಂತಿಕೆ ತುಂಬಬಹುದು ಎಂಬುದನ್ನು ಸುದೀಪ್ ತೋರಿಸಿಕೊಟ್ಟಿದ್ದಾರೆ.


Click it and Unblock the Notifications











