ರಣವೀರ್ ಸಿಂಗ್, ರೋಹಿತ್ ಶೆಟ್ಟಿ ಜೊತೆಗೆ ಕಿಚ್ಚ
ನಟ ಸುದೀಪ್ ಪರಭಾಷೆಯಲ್ಲಿಯೂ ಜನಪ್ರಿಯತೆ ಗಳಿಸಿರುವ ನಟ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕಿಚ್ಚ ಸಾಕಷ್ಟು ಸ್ನೇಹಿತ ಬಳಗ ಹೊಂದಿದ್ದಾರೆ.
ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಅವರನ್ನು ಸುದೀಪ್ ಭೇಟಿ ಮಾಡಿದ್ದಾರೆ. ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕಿಚ್ಚ, ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಅವರನ್ನು ಹೊಗಳಿದ್ದಾರೆ.

'ಸಿಂಬಾ' ಸಿನಿಮಾದ ಶೂಟಿಂಗ್ ಸೆಟ್ ಗೆ ಸುದೀಪ್ ಭೇಟಿ ನೀಡಿದ್ದು, ಈ ವೇಳೆ ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಜೊತೆಗೆ ಫೋಟೋ ತೆಗೆದುಕೊಂಡಿದ್ದಾರೆ. ಕೆಲ ಕಾಲ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಮಾತುಕತೆ ನಡೆಸಿದ್ದಾರೆ.
'ಸಿಂಬಾ' ರಣವೀರ್ ಸಿಂಗ್ ಅಭಿನಯದ ಹೊಸ ಸಿನಿಮಾವಾಗಿದ್ದು, ಇದರಲ್ಲಿ ಅವರು ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರತಂಡಕ್ಕೆ ಸುದೀಪ್ ಶುಭ ಹಾರೈಸಿದ್ದಾರೆ.
More from Filmibeat
English summary
Kannada actor sudeep met Ranveer Singh and Rohit Shetty in simba movie shooting set.


Click it and Unblock the Notifications











