»   » ಬಾದಾಮಿಯಲ್ಲಿ ಮದಕರಿ ವೀರಗಾಸೆ!

ಬಾದಾಮಿಯಲ್ಲಿ ಮದಕರಿ ವೀರಗಾಸೆ!

Subscribe to Filmibeat Kannada
sudeep
ಮೈ ಆಟೋಗ್ರಾಫ್ ಹಾಗೂ ನಂ.73 ಶಾಂತಿನಿವಾಸ ಚಿತ್ರಗಳ ನಂತರ ಸುದೀಪ್ ನಿರ್ದೇಶಿಸುತ್ತಿರುವ ಮೂರನೇಯ ಚಿತ್ರ 'ವೀರ ಮದಕರಿ'. ಸುದೀಪ್ ಅವರದು ನಿರ್ದೇಶನ ಜೊತೆಗೆ ದ್ವಿಪಾತ್ರಾಭಿನಯ.ದಿನೇಶ್ ಗಾಂಧಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಸಾಹಸ ಪ್ರಧಾನ ಕಥೆ 'ಮದಕರಿ' ಚಿತ್ರಕ್ಕೆ ಥ್ರಿಲ್ಲರ್ ಮಂಜು ಕ್ಲೈಮ್ಯಾಕ್ಸ್ ಸನ್ನಿವೇಶಕ್ಕಾಗಿ ಅದ್ಭುತ ಸಾಹಸ ನಿರ್ದೇಶನ ಮಾಡಿದ್ದಾರೆ.

ಬಾದಾಮಿ ಯಿಂದ 12 ಕಿ.ಮೀ ದೂರದಲ್ಲಿರುವ ಗುಡ್ಡದ ಶಿವಾಲಯದಲ್ಲಿ ವೀರ ಮದಕರಿ ಚಿತ್ರದ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಕೊಳ್ಳಲಾಗಿದೆ. ಒಂದೇ ಸ್ಥಳದಲ್ಲೇ 30 ದಿನಗಳ ಕಾಲ ಚಿತ್ರೀಕರಣ ನಡೆದಿರುವುದು ಒಂದು ವಿಶೇಷ. ಕ್ಲೈಮ್ಯಾಕ್ಸ್ ಸನ್ನಿವೇಶಕ್ಕಾಗಿ 30 ಕುದುರೆ, 300 ಸಹಕಲಾವಿದರು ಹಾಗೂ 150 ಕ್ಕೂ ಹೆಚ್ಚು ಸ್ಥಳೀಯರನ್ನು ಬಳಸಿಕೊಂಡು ಅದ್ದೂರಿಯಾಗಿ ಚಿತ್ರೀಕರಿಸಿದ್ದಾರೆ.

ಬಾದಾಮಿ,ಐಹೊಳೆ,ಪಟ್ಟದ ಕಲ್ಲಿನ ಸುಂದರ ಸ್ಥಳಗಳಲ್ಲಿ 'ವೀರ ಮದಕರಿ'ಚಿತ್ರೀಕರಣ ಮಾಡಿರುವುದು ಮತ್ತೊಂದು ವಿಶೇಷ. ನಿರ್ಮಾಪಕ ದಿನೇಶ್ ಗಾಂಧಿ 75 ಲಕ್ಷ ವೆಚ್ಚದಲ್ಲಿ 15 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅಂದು ಕೊಂಡಂತೆ ಆಗದೆ ಸಮಯ ಹಾಗೂ ವೆಚ್ಚಗಳನ್ನು ದುಪ್ಪಟ್ಟು ಮಾಡಿತು. ಕಾರಣ ಚಿತ್ರೀಕರಣ ನಡೆಯುತ್ತಿರುವ ಸ್ಥಳ. ಬಾದಾಮಿ ಬಳಿಯ ಗುಡ್ಡದ ಶಿವಾಲಯ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾದ ದುರ್ಗಮ ಸ್ಥಳ. ಹಾಗಾಗಿ ಸಮಯ ಹಾಗೂ ಖರ್ಚುವೆಚ್ಚಗಳು ಹೆಚ್ಚಿಗೆ ಆಗಿದೆ ಎನ್ನುತ್ತಾರೆ ನಿರ್ಮಾಪಕ.

ಇನ್ನು ಉಳಿದಂತೆ ಮದಕರಿ ತಾರಾಗಣದಲ್ಲಿ ಸುದೀಪ್, ರಾಗಿಣಿ,ಧರ್ಮ,ವಾಣಿಶ್ರೀ,ಟೆನ್ನಿಸ್ ಕೃಷ್ಣ, ತುಮಕೂರು ಮೋಹನ್ ಸೇರಿದಂತೆ ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಹಾಗೂ ವಿಶೇಷ ಪಾತ್ರದಲ್ಲಿ ಡೈನಮಿಕ್ ಸ್ಟಾರ್ ದೇವರಾಜ್ ಇದ್ದಾರೆ. ಶ್ರೀವೆಂಕಟ್ ಅವರ ಛಾಯಾಗ್ರಹಣ, ವಿಜಯಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಸುರೇಶ್ ರಾಜ್ ಸಹ ನಿರ್ದೇಶನ ಹಾಗೂ ಕೆ.ವಿ.ಮಂಜಯ್ಯ ಅವರ ನಿರ್ಮಾಣ ನಿರ್ವಹಣೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಗ್ಯಾಲರಿ: ಸುರ ಸುಂದರ ಸುದೀಪ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada