For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಹೊಸ ಚಿತ್ರ ಬಚ್ಚನ್‌ಗೆ ಮುಹೂರ್ತ ಫಿಕ್ಸ್

  By Rajendra
  |

  'ವಿಷ್ಣುವರ್ಧನ' ಚಿತ್ರದ ಬಳಿಕ ಕಿಚ್ಚ ಸುದೀಪ್ ಕನ್ನಡದಲ್ಲಿ ಯಾವ ಚಿತ್ರ ಮಾಡುತ್ತಾರೆ ಎಂಬ ಕುತೂಹಲ ಚಿತ್ರೋದ್ಯಮದಲ್ಲಿ ನೆಲೆಗೊಂಡಿತ್ತು. ಹಲವಾರು ಚಿತ್ರಗಳ ಹೆಸರು ಕೇಳಿಬರುತ್ತಲೇ ಇತ್ತು. ಇದೀಗ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

  ಸುದೀಪ್ ಮುಂದಿನ ಚಿತ್ರಕ್ಕೆ ಶಶಾಂಕ್ ಆಕ್ಷನ್ ಕಟ್ ಹೇಳಲಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ 'ಬಚ್ಚನ್' ಎಂದು ಹೆಸರಿಡಲಾಗಿದ್ದು, ಚಿತ್ರ ಮೇ 31ರಂದು ಸೆಟ್ಟೇರುತ್ತಿದೆ. 'ಬಚ್ಚನ್' ಚಿತ್ರಕ್ಕೆ ಸುದೀಪ್ ಈಗಾಗಲೆ ಡೇಟ್ಸ್ ಕೂಡ ಕೊಟ್ಟಾಗಿದೆ. 'ಬಚ್ಚನ್' ಚಿತ್ರದಲ್ಲಿ ನಾಲ್ಕು ಮಂದಿ ನಾಯಕಿಯರು ಹಾಗೂ ಖಳನಟರು ಇರುತ್ತಾರೆ ಎಂಬುದು ಚಿತ್ರದ ವಿಶೇಷಗಳಲ್ಲಿ ಒಂದು.

  ಇಬ್ಬರು ನಾಯಕಿಯರನ್ನು ಈಗಾಗಲೆ ಆಯ್ಕೆ ಮಾಡಲಾಗಿದ್ದು, ಉಳಿದವರ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಿ ಹರಿಕೃಷ್ಣ ಸಂಗೀತ ಹಾಗೂ ಶೇಖರ್ ಚಂದ್ರು ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. (ಏಜೆನ್ಸೀಸ್)

  English summary
  Kannada actor Sudeep's next Kannada film to go on floors from May 31. The movie is being directing by Shashank titled as 'Bachchan', which is a remake of the T-town blockbuster Kick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X