Don't Miss!
- News
ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ; ಬಿಜೆಪಿಗೆ ಗೆಲುವು
- Sports
SRH vs PBKS: ಪಂದ್ಯ ಯಾರು ಗೆಲ್ಲಬಹುದು? ಡ್ರೀಮ್ ಟೀಂ ರಚಿಸಲು ಟಿಪ್ಸ್, ಸಂಭಾವ್ಯ ಪ್ಲೇಯಿಂಗ್ 11
- Education
IGNOU Re-registration 2022 For July Session : ಜುಲೈ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆ ಆರಂಭ
- Automobiles
Mercedes "ವಿಷನ್ AMG" ಕಾನ್ಸೆಪ್ಟ್ ಇವಿ ಸ್ಪೋರ್ಟ್ಸ್ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳು
- Finance
ಕೇರಳದಲ್ಲಿ ಸೆಸ್, ತೆರಿಗೆ ಇಳಿಕೆ ಬಳಿಕ ಇಂಧನ ದರ ಎಷ್ಟಾಗಿದೆ?
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ಸುದೀಪ್ ಮುಂದಿನ ಚಿತ್ರ ಹಾರರ್ ಕಥೆ?
ನಟ ಕಿಚ್ಚ ಸುದೀಪ್ ಸದ್ಯ ಸಾಲು, ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಸುದೀಪ್ ಎರಡು ಚಿತ್ರಗಳಲ್ಲಿ ಅಭಿನಯಿಸುವುದು ಖಚಿತವಾಗಿದೆ. ಅಷ್ಟಕ್ಕೂ ಸುದೀಪ್ ಅವರು ಅಭಿನಯದ 'ವಿಕ್ರಾಂತ್ ರೋಣ' ಚಿತ್ರ ಇನ್ನು ರಿಲೀಸ್ ಆಗಿಲ್ಲ ಅದಾಗಲೇ, ಮುಂದಿನ ಎರಡು ಚಿತ್ರಗಳ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ತಮಿಳು ನಿರ್ದೇಶಕನ ಜೊತೆಗೆ ಜೊತೆಗೆ ಮುಂದಿನ ಚಿತ್ರ ಮಾಡುವುದಾಗಿ ನಟ ಸುದೀಪ್ ಅವರೇ ಈಗಾಗಲೇ ಖಚಿತ ಪಡಿಸಿದ್ದಾರೆ. ತಮಿಳು ನಿರ್ದೇಶಕ ನಿರ್ಮಾಪಕ ವೆಂಕಟ್ ಪ್ರಭು ಕಿಚ್ಚನಿಗೆ ಕಥೆ ರೆಡಿ ಮಾಡಿ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಸಂದರ್ಶನ ಒಂದರಲ್ಲಿ ಈ ವಿಚಾರವನ್ನು ಸ್ವತಃ ಸುದೀಪ್ ರಿವೀಲ್ ಮಾಡಿದ್ದಾರೆ.
ಈಗ ಮತ್ತೊಬ್ಬ ನಿರ್ದೇಶಕನ ಹೆಸರು ಕೇಳಿ ಬಂದಿದೆ. ಪ್ರಭಾಸ್ಗೆ 'ಸಾಹೋ' ಚಿತ್ರ ಮಾಡಿದ್ದ ನಿರ್ದೇಶಕ ಸುಜಿತ್, ಸುದೀಪ್ಗೆ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸುಜಿತ್ ಈ ಹಿಂದೆ ಕಿಚ್ಚನನ್ನು ಭೇಟಿ ಮಾಡಿದ್ದು, ಈಗ ಯಾಕೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ದೆವ್ವಕ್ಕೆ ನಮಸ್ತೆ ಹೇಳುತ್ತಾರ ಕಿಚ್ಚ ಸುದೀಪ್?
ನಟ ಸುದೀಪ್ ಮತ್ತು ಸುಜಿತ್ ಕಾಂಬಿನೇಷನ್ನಲ್ಲಿ, ವಿಭಿನ್ನವಾದ ಕಥೆ ಬರಲಿದೆ. ಈ ಕುರಿತಾಗಿ ಹೊಸ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದೀಪ್ ಕೈಯಲ್ಲಿ ಮೇಣದ ಬತ್ತಿ ಹಿಡಿದಿದ್ದಾರೆ. ಚಿತ್ರಕ್ಕೆ 'ನಮಸ್ತೆ ಗೋಷ್ಟ್' ಎನ್ನುವ ಟೈಟಲ್ ಇದೆ. ಇನ್ನು ವಿಶೇಷವಾದ ಟ್ಯಾಗ್ ಲೈನ್ ಕೂಡ ಇದೆ. 'ಡೋಂಟ್ ಸ್ಟಾಪ್ ದಿ ಗೇಮ್' ಎನ್ನುವ ಟ್ಯಾಗ್ ಲೈನ್ ಇದೆ. ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಏನಿದು ಹಾರರ್ ಪೋಸ್ಟರ್ ಮರ್ಮ?
ಸದ್ಯಕ್ಕೆ ಈ ಪೋಸ್ಟರ್ ಸುದೀಪ್ ಮುಂದಿನ ಚಿತ್ರದ್ದು ಎನ್ನಲಾಗುತ್ತಿದೆ. ವೆಂಟಕ್ ಪ್ರಭು ನಿರ್ದೇಶನದ ಬಳಿಕ ಸುದೀಪ್ ಈ ಹಾರರ್ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆ ಎನ್ನುತ್ತಿವೆ ಮೂಲಗಳು. ಆದರೆ ಈ ಪೋಸ್ಟರ್ ಅಧಿಕೃತ ಅಲ್ಲ. ಇದು ಅಭಿಮಾನಿಗಳು ತಯಾರಿಸಿದ ಪೋಸ್ಟರ್ ಎನ್ನಲಾಗಿದೆ. ಜೊತೆಗೆ 'ನಮಸ್ತೆ ಗೋಷ್ಟ್' ಎನ್ನುವ ಈ ಟೈಟಲ್ ಕೂಡಾ ಫೇಕ್ ಎನ್ನಲಾಗುತ್ತಿದೆ. ಇದಕ್ಕೆ ಸುದೀಪ್ ಅಥವಾ ಚಿತ್ರ ತಂಡ ಈ ಪೋಸ್ಟರ್ ಬಗ್ಗೆ ಅಧಿಕೃತ ನೀಡಿಲ್ಲ. ಅಭಿಮಾನಿಗಳು ತಮ್ಮ ಖುಷಿಗೆ ಈ ಪೋಸ್ಟರ್ ಮಾಡಿದ್ದಾರೆ.

ಸುದೀಪ್ ಅವರನ್ನು ಹಾರರ್ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸಿದ್ಧ!
ಸ್ಟಾರ್ ನಟರು ಅಂದರೆ ಅವರಿಗೆ ಕೆಲವು ಬೌಂಡರಿಗಳು ಇದ್ದೇ ಇರುತ್ತವೆ. ಅದನ್ನು ದಾಟಲು ಅವರಿಗೆ ಸುಲಭ ಅಲ್ಲ. ಅಂದರೆ ಸ್ಟಾರ್ ಹೀರೋ ಚೌಕಟ್ಟಿನಲ್ಲೇ ಸಿನಿಮಾಗಳನ್ನು ಮಾಡಬೇಕು, ಅದನ್ನ ಬಿಟ್ಟು ಹೊರ ಬಂದರೆ ಅಭಿಮಾನಿಗಳು ಒಪ್ಪುದಿಲ್ಲ ಎನ್ನುವಂತ ಮಾತುಗಳಿವೆ. ಆದರೆ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ವಿಭಿನ್ನ ಕಥಾ ಹಂದರದಲ್ಲಿ ನೋಡ ಬಯಸುತ್ತಿದ್ದಾರೆ. ಹಾಗಾಗಿ ಅವರುಗಳೇ ಕನ್ನಡ, ತೆಲುಗಿನಲ್ಲಿ ಪೋಸ್ಟರ್ ಮಾಡಿ ಹರಿ ಬಿಟ್ಟಿದ್ದಾರೆ. ಈಗಾಗಳೆ ಬಾಲಿವುಡ್ನ 'ಫೂಂಕ್' ಚಿತ್ರದ ಮೂಲಕ ಸುದೀಪ್ ಹಾರರ್ ಕಥೆಯಲ್ಲಿ ಅಭಿನಯಿಸಿದ್ದಾರೆ. ಇನ್ನು ಸುದೀಪ್ ಅವರ 'ವಿಕ್ರಾಂತ್ ರೋಣ' ಚಿತ್ರ ಕೂಡ ವಿಭಿನ್ನ ಎನಿಸುತ್ತದೆ. ಚಿತ್ರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಇರುವುದನ್ನು ಈಗಾಗಲೇ ಟೀಸರ್ ಮೂಲಕ ಚಿತ್ರ ತಂಡ ರಿವೀಲ್ ಮಾಡಿದೆ.

ಈ ಹಿಂದೆ ಸುದೀಪ್ ಭೇಟಿ ಮಾಡಿ ಕಥೆ ಹೇಳಿದ್ದ ಸುಜಿತ್!
ಇನ್ನೂ ಈ ಹಿಂದೆ ಸುದೀಪ್ ಅವರನ್ನು, ಸುಜಿತ್ ಭೇಟಿ ಮಾಡಿದ್ದರು. ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದಾಗ ಸುದೀಪ್ ಅವರನ್ನು ಸುಜಿತ್ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣ ಆಗಿತ್ತು. ಆದರೆ ಆ ಭೇಟಿಯ ಅಸಲಿಯತ್ತು ಬಯಲಾಗಿದೆ. ಸುಜಿತ್ ಅಂದು ಕಿಚ್ಚನಿಗೆ ಕಥೆ ಹೇಳಿ ಹೋಗಿದ್ದರಂತೆ. ಹಾಗಾಗಿ ಈಗ ಎಲ್ಲವೂ ಓಕೆ ಆಗಿದ್ದು ಸುದೀಪ್ ಎರಡು ಚಿತ್ರಗಳಿಗೆ ಒಟ್ಟೊಟ್ಟಿಗೆ ರೆಡಿ ಆಗುತ್ತಿದ್ದಾರೆ ಎನ್ನಲಾಗಿದೆ.