ಕಿಚ್ಚ ಸುದೀಪ್‌ ಮುಂದಿನ ಚಿತ್ರದ ಬಗ್ಗೆ ಘೋಷಣೆ!

ನಟ ಕಿಚ್ಚ ಸುದೀಪ್‌ ಅವರ ಅಭಿನಯದ 'ವಿಕ್ರಾಂತ್‌ ರೋಣ' ಚಿತ್ರದ ರಿಲೀಸ್‌ಗೆ ರೆಡಿ ಇದೆ. ಹಾಗಾಗಿ ಸುದೀಪ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿವೆ. ಈಗ ಈ ಕುತೂಹಲಗಳಿಗೆ ಉತ್ತರ ಸಿಕ್ಕಿದೆ. ಸುದೀಪ್‌ ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹೊರ ಬಂದಿದೆ.

ಕೋಟಿಗೊಬ್ಬ3 ಚಿತ್ರದ ಬಳಿಕ ವಿಕ್ರಾಂತ್‌ ರೋಣ ತೆರೆಗೆ ಬರಲು ಸಜ್ಜಾಗಿದೆ. ಪೈಲ್ವಾನ್‌ ಚಿತ್ರದ ನಂತರ ಬ್ಯಾಕ್ ಟು ಬ್ಯಾಕ್ ಚಿತ್ರಗಳು ತೆರೆಗೆ ಬರುತ್ತಿವೆ. ಆದರೆ ಸುದೀಪ್‌ ಅವರು ಮುಂದಿನ ಚಿತ್ರ ಕೊಂಚ ಸಮಯ ತೆಗೆದುಕೊಳ್ಳ ಬಹುದು. ಯಾಕೆಂದರೆ ಈ ಚಿತ್ರದ ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ.

ಸುದೀಪ್‌ಗೆ ಈ ಬಾರಿ ತಮಿಳು ನಿರ್ದೇಶಕ ಡೈರೆಕ್ಷನ್‌ ಮಾಡುತ್ತಿದ್ದಾರೆ. ನಟ ಸುದೀಪ್‌ ಅವರಿಗೂ ಕಥೆ ಓಕೆ ಆಗಿದೆ. ಚಿತ್ರವನ್ನು ಈ ಬಗ್ಗೆ ಸಂದರ್ಶನ ಒಂದರಲ್ಲಿ ಅಧಿಕೃತವಾಗಿ ಕಿಚ್ಚ ಸುದೀಪ್‌ ಅವರೇ ಪ್ರಕಟ ಮಾಡಿದ್ದಾರೆ.

ಸುದೀಪ್ ಮುಂದಿನ ಚಿತ್ರಕ್ಕೆ ವೆಂಕಟ್‌ ಪ್ರಭು ನಿರ್ದೇಶನ!

ಕಿಚ್ಚ ಸುದೀಪ್‌ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ತಮಿಳು ನಿರ್ದೇಶಕ ವೆಂಕಟ್‌ ಪ್ರಭು ಸಜ್ಜಾಗಿದ್ದಾರೆ. ಸುದೀಪ್‌ ಅವರ ಮುಂದಿನ ಸಿನಿಮಾ ವೆಂಕಟ್‌ ಪ್ರಭು ಅವರ ಡೈರೆಕ್ಷನ್‌ನಲ್ಲಿ ಮೂಡಿ ಬರಲಿದೆ. ವೆಂಕಟ್‌ ಪ್ರಭು ತಮಿಳಿನಲ್ಲಿ ಸುಮಾರು ಸಿನಿಮಾಗಳನ್ನು ಮಾಡಿದ್ದಾರೆ. ಅವರು ನಿರ್ದೇಶನದ ಸಿನಿಮಾ 'ಮಾನಾಡು' ಕೊನೆಯದಾಗಿ ತೆರೆಕಂಡ ಚಿತ್ರ. ನಿರ್ದೇಶಕ ವೆಂಕಟ್‌ ಪ್ರಭು ಬರವಣಿಗೆ ಮತ್ತು ನಿರ್ದೇಶನದ ಮೂಲಕ ಈಗಲೇ ಭರವಸೆ ಮೂಡಿಸಿದ್ದಾರೆ.

ಕಿಚ್ಚನ ಮನೆಗೆ ಭೇಟಿ ನೀಡಿದ್ದ ವೆಂಕಟ್‌ ಪ್ರಭು!

ಕಿಚ್ಚನ ಮನೆಗೆ ಭೇಟಿ ನೀಡಿದ್ದ ವೆಂಕಟ್‌ ಪ್ರಭು!

ಇನ್ನು ನಿರ್ದೇಶಕ ವೆಂಕಟ್‌ ಪ್ರಭು ನಟ ಕಿಚ್ಚ ಸುದೀಪ್‌ ಮನೆಗೆ ಭೇಟಿ ನೋಡಿದ್ದರು. ಸುದೀಪ್‌ ಅವರ ಆತಿತ್ಯ ಸ್ವೀಕರಿಸಿದ್ದರು. ಆಗ ಸುದೀಪ್‌ ಮತ್ತು ವೆಂಕಟ್‌ ಅವರ ಫೋಟೊ ವೈರಲ್ ಆಗಿತ್ತು. ಅದೇ ಸಮಯದಲ್ಲಿ ಸುದೀಪ್‌ ಮತ್ತು ವೆಂಕಟ್‌ ಅವರ ಸಿನಿಮಾದ ಮಾತು ಕತೆ ಮುಗಿದಿದೆ. ಅದು ಈಗ ಬಹಿರಂಗ ಆಗಿದೆ. ಸದ್ಯ ಸುದೀಪ್‌ ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.

ಹಿಟ್‌ ಚಿತ್ರಗಳನ್ನು ನೀಡಿರುವ ವೆಂಕಟ್‌ ಪ್ರಭು!

ಹಿಟ್‌ ಚಿತ್ರಗಳನ್ನು ನೀಡಿರುವ ವೆಂಕಟ್‌ ಪ್ರಭು!

ಇನ್ನು ನಿರ್ದೇಶಕ ವೆಂಕಟ್‌ ಪ್ರಭು 2007 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. 'ಮಂಗಾತ', 'ಮಾನಾಡು' ಅಂತಹ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇನ್ನು 2001ರಲ್ಲಿ ತೆರೆಕಂಡ, 'ಲೈವ್‌ ಟೆಲಿಕಾಸ್ಟ್' ವೆಬ್‌ ಸರಣಿಯನ್ನು ವೆಂಕಟ್‌ ಪ್ರಭು ಬರೆದು, ನಿರ್ದೇಶನ ಮಾಡಿದ್ದಾರೆ. ಈ ವೆಬ್‌ ಸರಣಿಯಲ್ಲಿ ನಟಿ ಕಾಜಲ್ ಅಗರ್‌ವಾಲ್ ಪ್ರಮುಖ ಪಾತ್ರ ಮಾಡಿದ್ದರು.

ಫೆಬ್ರವರಿ 24ಕ್ಕೆ 'ವಿಕ್ರಾಂತ್ ರೋಣ'!

ಫೆಬ್ರವರಿ 24ಕ್ಕೆ 'ವಿಕ್ರಾಂತ್ ರೋಣ'!

'ವಿಕ್ರಾಂತ್ ರೋಣ' ಕನ್ನಡದ ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಸುದೀಪ್‌ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮತ್ತು ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ವಿಕ್ರಾಂತ್ ರೋಣ' ಚಿತ್ರದ ರಿಲೀಸ್ ದಿನಾಂಕವನ್ನು ಫೆಬ್ರವರಿ 24ಕ್ಕೆ ನಿಗದಿ ಮಾಡಲಾಗಿದೆ. ಸದ್ಯ 'ವಿಕ್ರಾಂತ್ ರೋಣನ' ಅವತಾರದಲ್ಲಿ ಕಿಚ್ಚನನ್ನು ಕಣ್ಣು ತುಂಬಿ ಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Actor Sudeep Next Movie With 'Maanaadu' Director Venkat Prabhu, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X